ಜನಪದರ ಮಾತಾ.
Abstract
ಮನುಕುಲಕೆ ಪ್ರಶ್ನಿಸುವ ಈ ಗಂಗಾ ಮಾತೆಗೆ ಮಡಿವಂತರು ಈಗಲಾದರೂ ಜನರನ್ನು ಸಮಾನತೆಯಿಂದ, ಭೇದ-ಭಾವಗಳನ್ನುಂಟು ಮಾಡದೆ, ಒಳ್ಳೆ ನೋಟದಿಂದ, ಹೃದಯದ ಅಂತರಾಳದಿಂದ ನೋಡುವಂತಾಗಲಿ. ರೈತ ಬೆಳೆಯದೆ. ನಾಡು ನಡೆಯದು, ಉಣ್ಣಲಿಕ್ಕದು. ಪಾರ್ವತಿ ದೇವಿಯ ಶಕ್ತಿ ಜನಸಮೂದಾಯದ ದುಡಿಯುವ ಶಕ್ತಿಯಾಗಬೇಕು. ಲಕ್ಷ್ಮಿಪರಿಕಲ್ಪನೆ ಜನಸಮೂಹದ ಉದ್ಧಾರದ ಆರ್ಥಿಕ ಶಕ್ತಿಯಾಗಬೇಕು. ಸರಸ್ವತಿ ಪರಿಕಲ್ಪನೆ ಜ್ಞಾನದ ಅರಿವು, ಮನುಕುಲದ ಉದ್ಧಾರ, ಶಾಂತಿ, ಸೌಹಾರ್ದತೆಯಿಂದ ಮಾನವರು ಜೀವನ ಸಾಗಿಸಬೇಕು. ಗಂಗಾ ದೇವಿಯ ಪರಿಕಲ್ಪನೆ ನಾವು ಜಗತ್ತಿನ ಹೊಲಸನ್ನು ತೊಳೆಯುವುದು ಬೇಡ. ನಮ್ಮ ನಮ್ಮ ಕೆಟ್ಟತನ ತೊಳೆದು ಮಾನವ ಕುಲದವರೊಂದಿಗೆ ಬೆರತು, ಕಲಿತು ಒಂದಾಗಿ ನಡೆಯಬೇಕು.
ನಮ್ಮ ಜನಪದರು ದೇವತೆಗಳ ಬಗ್ಗೆ ತಿಳಿದಿರುವ ಅರಿವು ಇದು. ಜನಪದರ ಬದುಕಲ್ಲಿ ಸಹಬಾಳ್ವೆ ಇದೆ. ತರ-ತಮಭೇದಗಳಿಲ್ಲ.