‘ಟೆಡ್ ಹ್ಯೂಸ್’ ಮತ್ತು ‘ಸಿಲ್ವಿಯಾ ಪ್ಲಾತ್’: ಕಾವ್ಯ ಚಿತ್ರಿಸಿದ ದುರಂತ ಚಿತ್ರಗಳು.

Authors

  • ಚೈತ್ರ ಪಿ.

Abstract

ಈ ಕಥಾಕಾವ್ಯದಲ್ಲಿ ಲೇಖಕರು ಎರಡು ಕವಿಗಳ ಜೀವನದ ಕುರಿತು ತಿಳಿಸುವ ಜೊತೆಯಲ್ಲಿ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಸಿಲ್ವಿಯಾಳು ಚಿತ್ರಿಸಿದ ಚಿತ್ರವನ್ನು ಹಾಕಿದ್ದಾರೆ. ಮಾತ್ರವಲ್ಲ ಕೆಲವೊಂದು ಕವಿಗಳ ಮಾತು ಸಿಲ್ವಿ ಹಾಗೂ ಟೆಡ್ಡ್ನ ಕವಿತೆಗಳ ಸಾಲುಗಳು ಈ ಕಥಾಕಾವ್ಯದಲ್ಲಿ ಅಡಕವಾಗಿದೆ. ನಟರಾಜ್ ಅವರು ಈ ರಚನೆಯಲ್ಲಿ ಬಳಸಿದ ಭಾಷೆಯು ಸರಳವಾಗಿದೆ. ಹಾಗೂ ಈ ಕಥಾಕಾವ್ಯವನ್ನು ಓದುವಾಗ ಕಣ್ಣಮುಂದೆ ಒಂದು ನಾಟಕೀಯ ಚಿತ್ರಣವನ್ನು ನೀಡುತ್ತದೆ. ಲೇಖಕರು ಸಿಲ್ವಿ ಹಾಗೂ ಟೆಡ್ಡ್ ನ ಜೀವನವನ್ನು ಕೇವಲ 127 ಪುಟದಲ್ಲಿ ಚಿತ್ರಿಸಿ ಇಬ್ಬರಿಗೂ ಕಥಾ ಕಾವ್ಯದಲ್ಲಿ ಸಮಾನವಾದ ಸ್ಥಾನವನ್ನು ಒದಗಿಸಿದ್ದಾರೆ. ಇಲ್ಲಿ ಇಬ್ಬರ ಪಾತ್ರಗಳು ಮಹತ್ವಪೂರ್ಣದ್ದಾಗಿದೆ. ಆಧುನಿಕ ಸ್ತ್ರೀವಾದಿಗಳಿಗೆ, ಸರ್ವಾಧಿಕಾರಕ್ಕೆ ವಿರೋಧದ ಚಿಂತನೆಯನ್ನು ಒದಗಿಸಿ ಸಿಲ್ವಿಯಾಳು ಜನರಲ್ಲಿ ಮನ್ನಣೆ ಪಡೆದಳು ಎಂದು ಹೇಳಬಹುದು. ಮನುಷ್ಯ ಸಹಜವಾದ ಗುಣಗಳಾದ ಹಠ, ಕೋಪ ಮೊದಲಾದ ಗುಣಗಳನ್ನು ಈ ಕಾವ್ಯದಲ್ಲಿ ಗುರುತಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಅವರಿಬ್ಬರ ಜೀವನದ ಬಗೆಗಿನ ತಿಳುವಳಿಕೆಯಿಂದ ಬರೆದ ಈ ಕಥಾಕಾವ್ಯವು ಸುಂದರವೂ, ಸರಳವೂ ಆಗಿದ್ದು, ಓದುಗರಿಗೆ ಕಟ್ಟಿ ಕೊಡುವ ಅನುಭವ ಅನನ್ಯವಾದುದು. ನಟರಾಜ್ ಅವರ ಈ ಕಾವ್ಯ ಓದುಗರನ್ನು ಬಹುಬೇಗ ಆಕರ್ಷಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

Downloads

Published

05.10.2022

How to Cite

ಚೈತ್ರ ಪಿ. (2022). ‘ಟೆಡ್ ಹ್ಯೂಸ್’ ಮತ್ತು ‘ಸಿಲ್ವಿಯಾ ಪ್ಲಾತ್’: ಕಾವ್ಯ ಚಿತ್ರಿಸಿದ ದುರಂತ ಚಿತ್ರಗಳು. AKSHARASURYA, 1(01), 23 to 28. Retrieved from http://aksharasurya.com/index.php/latest/article/view/9

Issue

Section

Article