ಚುಟುಕುಗಳ ಇತಿಹಾಸ.
Abstract
ನಮ್ಮ ಆಧುನಿಕ ಕನ್ನಡದಲ್ಲಿ ಜನಪ್ರಿಯತೆಯನ್ನು ಗಳಿಸಿ ಕೊಂಡಿರುವ ಚುಟುಕುಗಳು ಜನಪದದ ಹಿನ್ನಲೆಯನ್ನು ವಚನ-ಕೀರ್ತನೆ-ತ್ರಿಪದಿ ಪ್ರಭಾವವನ್ನು ಹಾಗೂ ಇಂಗ್ಲೀಷ್ ಸಾಹಿತ್ಯದ ಸತ್ವವನ್ನು ಪಡೆದುಕೊಂಡು ಸಂಮೃಧ್ಧಿಯಾಗಿ ಹೊಸಗನ್ನಡ ಸಾಹಿತ್ಯದಲ್ಲಿ ನವೀನ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಹೀಗಿದ್ದರೂ ಈ ಚುಟುಕು ಸಾಹಿತ್ಯದ ಬಗೆಗೆ ವಿದ್ವಾಂಸರು ನೀಡುತ್ತಿರುವ ಪ್ರಾಮುಖ್ಯತೆಯು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಚುಟುಕು ಸಾಹಿತ್ಯಕ್ಕೆ ಇತತರ ಕನ್ನಡ ಪ್ರಕಾರಗಳಂತೆ ಮನ್ನಣೆ ಲಭಿಸಿದರೆ ಚುಟುಕು ಸಾಹಿತ್ಯ ಇನ್ನಷ್ಟು ಅಭಿವೃದ್ಧಿಯನ್ನು ಕಾಣಬಹುದು.