ಭಾರತೀಯ ಸಂದರ್ಭದಲ್ಲಿ ಮಠದ ಪರಿಕಲ್ಪನೆ.
Abstract
ಭಾರತದ ಧಾರ್ಮಿಕತೆಯ ಅವಿಭಾಜ್ಯ ಅಂಗವೆನಿಸಿದ ಮಠದ ಪರಂಪರೆಗಳು ಅನಾದಿ ಕಾಲದಿಂದಲೂ ಜ್ಞಾನರ್ಜನೆಗೆ ಮಹತ್ತರವಾದ ಸ್ಥಾನವನ್ನು ನೀಡುವುದರೊಂದಿಗೆ ಗ್ರಾಮದ ಅಥಾವ ಆ ನಾಡಿನ ಸರ್ವತೊಮುಖ ಬೆಳವಣಿಗೆಗೆ ತನ್ನದೆಯಾದ ರೀತಿಯಲ್ಲಿ ಸ್ಪಂದಿಸುತ್ತಾ ಮುನ್ನಡೆದಿದೆ. ಈ ಕಾರಣದಿಂದಲೇ ಆಧುನಿಕತೆಯಲ್ಲೂ ಮಠದ ಪರಂಪರೆಯು ಮುಂದುವರಿಯುತ್ತಿದೆ. ತಾನು ಬೆಳೆಯುವುದರೊಂದಿಗೆ ಇತರರ ಬೆಳವಣಿಗೆಗೆ ಪ್ರೊತ್ಸಾಹಿಸುವ ಈ ಮಠದ ಪರಂಪರೆಗಳು ಇಂದಿನ ಪ್ರಸ್ತುತ ಭಾರತದ ಬೆಳವಣಿಗೆಗೆ ಪೂರಕವಾಗಿದೆ.