ಡಾ.ಡಿ.ಕೆ. ಚಿತ್ತಯ್ಯ ಪೂಜಾರ್ ಅವರ ಹೊಟ್ಟಣ್ಣ ನಾಯಕನ ಕಥನ ಕಾವ್ಯದ ಅವಲೋಕನ
Keywords:
ವಾಲಿ, ಕದಲಾವೆ, ಶಿವಲಗ್ಗೆ, ಕಾಲೀಲಿ, ಮುಮ್ಮಡಣ್ಣ, ತರಿಯೂತ, ಜರಮಲೆ, ಕಣಜAbstract
ಒಂದು ನಿರ್ಧಿಷ್ಟ ಜನಸಮೂಹವನ್ನು ಸಂಕೇತಿಸುವುದು ಜನಪದ. ಜನಪದರು ಮೌಖಿಕ ಮಾಧ್ಯಮದಲ್ಲಿ ಉಳಿಸಿಕೊಂಡು ಬಂದ ಜ್ಞಾನವನ್ನು ಜಾನಪದ ಎಂದು ಕರೆಯಬಹುದು. ಜಾನಪದ ಸಮಸ್ತ ಜನತೆಯ ಸಂಸ್ಕೃತಿಗೆ ಸಂಬಂಧಿಸಿದ ಒಂದು ಪರಂಪರೆ. ಇಂತಹ ಜನಪದವು ಅನೇಕ ಪ್ರಕಾರಗಳನ್ನು ಹೊಂದಿದ್ದು ಕಥನ ಕಾವ್ಯವೂ ಒಂದಾಗಿದೆ. ಅಂತಹ ಪ್ರಮುಖ ಕಥನ ಕಾವ್ಯಗಳಲ್ಲಿ ಡಾ. ಚಿತ್ತಯ್ಯ ಪೂಜಾರ್ ಅವರು ಸಂಶೋಧಿಸಿ ಸಂಪಾದಿಸಿರುವ ‘ಮುಮ್ಮಡಿ ಹೊಟ್ಟಣ್ಣ ನಾಯಕನ ಕಥನ ಕಾವ್ಯ’ವೂ ಒಂದು.
ಕಥನ ಕಾವ್ಯಗಳನ್ನು ಸಂಶೋಧಿಸಿ, ಸಂಗ್ರಹಿಸಿ, ಪರಿಷ್ಕರಿಸಿ ಪ್ರಕಟಿಸುವುದು ಸುಲಭದ ಮಾತಲ್ಲ. “ಇದು ಒಂದು ರೀತಿ ಕುಮಾರವ್ಯಾಸ ಭಾರತದ ಅಧ್ಯಯನ ಇದ್ದ ಹಾಗೆ. ‘ಕಲಿಯದವರಿಗೆ ಕಾಮಧೇನು ಕಲಿತವರಿಗೆ ಗಂಟಲು ಗಾಣ’. ಈ ಕಥನ ಕಾವ್ಯದ ಸಂಶೋಧನೆಯೂ ಹಾಗೆಯೇ. ಇದರ ಆಳ, ಅಗಲ, ಎತ್ತರ ಮತ್ತು ಬಹುಮುಖ್ಯ ಅರ್ಥಗಳು ಗಂಭೀರವಾಗಿ ಪರಿಭಾವಿಸಿದಷ್ಟು ವಿಸ್ತಾರವಾಗುತ್ತಿರುತ್ತವೆ. ಏಕೆಂದರೆ ಒಂದು ಕಲೆ, ಒಂದು ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗುತ್ತಾ ಅರ್ಥ ವಿಸ್ತಾರಗಳನ್ನು ಪಡೆದುಕೊಳ್ಳುತ್ತಾ ಸಂಶೋಧಕರಿಗೆ ಸವಾಲಾಗಿ ಪರಿಣಮಿಸುತ್ತದೆ.” ಅಂತಹ ಸವಾಲನ್ನು ಸ್ವೀಕರಿಸಿ ಇಲ್ಲಿ ಎದುರಾಗುವ ಸವಾಲುಗಳನ್ನು ಪರಿಹರಿಸಿ ಪ್ರಕಟಿಸಿರುವುದು ಚಿತ್ತಯ್ಯ ಪೂಜಾರ್‌ರವರ ಶ್ರಮಕ್ಕೆ ಹಿಡಿದ ಕೈಗನ್ನಡಿ. ಈ ಕಥನ ಕಾವ್ಯದ ಕೊನೆಯಲ್ಲಿ ಕೊಟ್ಟಿರುವ ಪಾರಿಭಾಷಿಕ ಪದಗಳ ಅರ್ಥ ಅವರ ಶ್ರಮಕ್ಕೆ ಇನ್ನೊಂದು ಸಾಕ್ಷಿ. ಆದ್ದರಿಂದ ಇದರ ಸಾಂಸ್ಕೃತಿಕ ಮಹತ್ವ ಗುರುತಿಸಿ, ಅದರ ಸಾಧ್ಯಾನುಸಾಧ್ಯತೆಗಳನ್ನು ಪತ್ತೆ ಹಚ್ಚುವುದೇ ಈ ಲೇಖನದ ಉದ್ದೇಶ.
References
ಚಿತ್ತಯ್ಯ ಪೂಜಾರ್ (ಸಂ). (2012). ನಿಡುಗಲ್ಲು ಪಾಳೆಯಗಾರ ಮುಮ್ಮಡಿ ಹೊಟ್ಟಣ್ಣ ನಾಯಕನ ಕಥನ ಕಾವ್ಯ. ಅನ್ನಪೂರ್ಣೇಶ್ವರಿ ಪಬ್ಲಿಕೇಶನ್. ಬೆಂಗಳೂರು.
ಪರಮಶಿವಯ್ಯ ಜಿ. ಶಂ. (2016). ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು. ಅಭಿನವ ಪ್ರಕಾಶನ. ಬೆಂಗಳೂರು.
ವೆಂಕಟೇಶ್ ಮೂರ್ತಿ ಎಚ್. ಎಸ್. (1990). ಕಥನ ಕವನ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.
ಭಕ್ತವತ್ಸಲರೆಡ್ಡಿ ಎನ್. (ಪ್ರ.ಸಂ.). (2004). ಜಾನಪದ ಅಧ್ಯಯನ ಸೈದ್ಧಾಂತಿಕ ದೃಷ್ಟಿ. ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಘ. ಬೆಂಗಳೂರು.
ರಂಗಾರೆಡ್ಡಿ ಕೊಡಿರಾಂಪುರ. (2010). ಜನಪದ ಸಂಸ್ಕೃತಿ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ರಾಗೌ. (2009). ಜಾನಪದ ತತ್ವಾರ್ಥ ಪ್ರವೇಶ. ಎಂ.ಎಲ್. ಶ್ರೀಕಂಠೇಗೌಡ ಸಂಶೋಧನಾ ಕೇಂದ್ರ, ಕರ್ನಾಟಕ ಸಂಘ. ಮಂಡ್ಯ.
ಜಯರಾಮಯ್ಯ ವಿ. (ಸಂ). ನಿಡುಗಲ್ಲೆಂಬೋದು ಏಳು ಸುತ್ತಿನ ಕೋಟೆ. ಅವಿರತ ಪುಸ್ತಕ ಪ್ರಕಾಶನ. ಬೆಂಗಳೂರು.
ರಂಗಾರೆಡ್ಡಿ ಕೊಡಿರಾಂಪುರ & ತಿಪ್ಪೇಸ್ವಾಮಿ ಜಿ. ಆರ್. (ಸಂ). (2003). ಜಾನಪದ ಸಿದ್ದಾಂತಗಳು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.