ಚಾಮರಸನ ಪ್ರಭುಲಿಂಗಲೀಲೆ.
Abstract
ಚಾಮರಸನು ಕಾವ್ಯಧರ್ಮ, ಧರ್ಮಗಳನ್ನು ಸಮರಸವಾಗಿ ಬೆರಸಿ ಕೃತಿ ರಚನೆ ಮಾಡಿದ್ದಾನೆ. ಇಲ್ಲಿ ಬರುವ ಪಾತ್ರಗಳೆಲ್ಲ ಸಜೀವವಾಗಿವೆ. “ಅಲ್ಲಮನು ಕಾಮಿಯಂತೆ ಸಾಮಾನ್ಯನಂತೆ ಸಾಮಾನ್ಯ ಜನಕ್ಕೆ ತೋರುವನು. ಆದರೆ ನಿಜವಾಗಿಯೂ ಅವನು ನಿರ್ಮಾಯನು, ಈಶ್ವರ ಸ್ವರೂಪನು ಎಂಬುದನ್ನು ಇಲ್ಲಿಯ ಕಲ್ಪನೆ ತಿಳಿಸುತ್ತದೆ.” ಎಂಬ ರಂ.ಶ್ರೀ ಮುಗಳಿಯವರ ಮಾತು ಗಮನಾರ್ಹವಾಗಿದೆ. ಈ ಕಾವ್ಯದಲ್ಲಿರುವ ಸನ್ನಿವೇಶಗಳ ರಚನೆ ಅಲ್ಲಮನ ವ್ಯಕ್ತಿತ್ವವನ್ನು ಮಹೋನ್ನತಿಗೆ ಏರಿಸುವುದರರ ಜೊತೆಗೆ ರಸವತ್ತಾದ ಕಾವ್ಯಸ್ವಾದವನ್ನು ಸಹೃದಯರಿಗೆ ನೀಡುತ್ತದೆ ಎಂದು ಹೇಳಬಹುದಾಗಿದೆ.