ಸೋಲಿಗರ ಸಾಹಿತ್ಯ-ಸಂಸ್ಕೃತಿಯಲ್ಲಿ ಪ್ರಾಣಿಪ್ರಪಂಚ.

Authors

  • Viranna M. D.

Abstract

ಸೋಲಿಗರ ಬದುಕಿನ ಭಾವಾಭಿವ್ಯಕ್ತಿಗೆ ಅಡವಿಯ ವಸ್ತುವಿಷಯಗಳೇ ಆಕರಗಳು. ತಾವು ಕಾನನದ ಮಡಿಲಿನಲ್ಲಿ ಗ್ರಹಿಸಿದ ಅಂತರಾಳದ ತುಡಿತಗಳನ್ನು ಸಾಹಿತ್ಯ, ಸಂಸ್ಕೃತಿಯಲ್ಲಿ ಸಮರ್ಪಕವಾಗಿ ಅಡಕಗೊಳಿಸಿ ಪ್ರಕೃತಿಯ ಅರಿವನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಾ ಬಂದಿದ್ದಾರೆ. ಅರಣ್ಯದಲ್ಲಿಯ ಪ್ರಾಣಿಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ತಮ್ಮ ಭಾವಕೋಶದೊಳಗೆ ಶೇಖರಿಸುತ್ತಾ ನಿತ್ಯಜೀವನದ ಸಹಜ ಒಡನಾಟವನ್ನು ಹೊಂದಿರುವುದು ಬೆರಗುಗೊಳಿಸುವಂತಹದು.

 ಆಧುನಿಕ ಮಾನವನು ಪ್ರಾಣಿಗಳೊಂದಿಗೆ ತನ್ನದೇ ಆದ ಬಾಂಧವ್ಯ ಹೊಂದಿದ್ದು, ಕತ್ತೆ, ಕುದುರೆ, ಹಸು, ಕುರಿ, ಮೇಕೆ, ನಾಯಿ, ಬೆಕ್ಕು ಇತ್ಯಾದಿ ಹಲವಾರು ಜೀವಿಗಳನ್ನು ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಸಾಕುತ್ತಾನಾದರೂ ಭಾವನಾತ್ಮಕ ನಂಟನ್ನು ಬೆಸೆದುಕೊಂಡಿರುತ್ತಾನೆ. ಕಾನನ ವಾಸಿಗಳಾದ ಸೋಲಿಗರಲ್ಲೂ ಪ್ರಾಣಿಗಳನ್ನು ಸಾಕುವ ಕಲೆಗಾರಿಕೆಯಿದೆ. ಅವುಗಳನ್ನು ಮನೆಯ ಮಕ್ಕಳಂತೆ ಪ್ರೀತಿಸಿ ಪೋಷಿಸುತ್ತಾರೆ. ತಮ್ಮ ಗೀತೆಗಳಲ್ಲಿ ಪ್ರಾಣಿಗಳನ್ನು ಕುರಿತು ನುಡಿಯುತ್ತಾರೆ.

References

ಚಂದ್ರುಕಾಳೇನಹಳ್ಳಿ, ಸೋಲಿಗರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1993.

ನಾಗರಾಜಪ್ಪ ಎಚ್, ಅಳಿವಿನಿಂಚಿನಲ್ಲಿರುವ ಬುಡಕಟ್ಟು ಪ್ರವೃತ್ತಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2019.

ಬೋರಲಿಂಗಯ್ಯ ಹಿ.ಚಿ (ಡಾ.), ಬುಡಕಟ್ಟು ದೈವಾರಾಧನೆ, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, 2000.

ಮಹೇಶ್, ಆರ್, ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜಾನಪದ, ಪಿಎಚ್.ಡಿ ಮಹಾಪ್ರಬಂಧ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 2018.

ವೀರಣ್ಣ ಎಂ.ಡಿ, ಗಿರಿಜನರ ವೈದ್ಯಪದ್ಧತಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2016.

Downloads

Published

05.02.2023

How to Cite

Viranna M. D. (2023). ಸೋಲಿಗರ ಸಾಹಿತ್ಯ-ಸಂಸ್ಕೃತಿಯಲ್ಲಿ ಪ್ರಾಣಿಪ್ರಪಂಚ. AKSHARASURYA, 2(02), 63 to 67. Retrieved from http://aksharasurya.com/index.php/latest/article/view/57

Issue

Section

Article