ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿ ಕಟ್ಟುವಲ್ಲಿ ಅಂಕಣ ಸಾಹಿತ್ಯ.
Abstract
ಕನ್ನಡ ನಾಡು-ನುಡಿ, ಸಂಸ್ಕೃತಿ, ಜನ ಜೀವನ, ರಾಜಕಾರಣ, ಸಾಮಾಜಿಕ ತಲ್ಲಣ ಇವುಗಳನ್ನು ವರ್ತಮಾನದಲ್ಲಿ ನಾವು ಹೇಗೆ ನೋಡಬೇಕು, ಯೋಚಿಸಬೇಕು ಹಾಗೂ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುವದನ್ನು ನಾಡಿನ ಅಂಕಣಗಳು ನಿಯತಕಾಲಿಕೆಗಳಲ್ಲಿ ಬಿತ್ತರಿಸುತ್ತಿವೆ. ನಾಡಿನ ಮತ್ತು ಭಾಷೆಯ ಹಾಗೂ ಸಂಸ್ಕೃತಿಯ ಆಂತರಿಕ ಸಂಘರ್ಷವನ್ನು ನಾಡಿನ ಜನತೆ ಹೇಗೆ ಬಗೆಹರಿಸಿಕೊಳ್ಳಬೇಕು, ನಾಡಿನ ಏಕತೆಗೆ ನಾವು ಹೇಗೆ ಸನ್ನಧರಾಗಬೇಕೆಂದು ಅಂಕಣಕಾರರು ತಮ್ಮ ಅಂಕಣಗಳಲ್ಲಿ ವಿಶ್ಲೇಷಣೆ ಗೊಳಿಸುತ್ತಾರೆ. ನಾಡಿನ ಭಾಷೆ, ಸಂಸ್ಕೃತಿ, ಸಮಾಜಮುಖಿ, ಜನಪರ ಕಾಳಜಿಯ ಮತ್ತು ಓದುಗರ ಅರಿವಿನ ಕ್ಷಿತಿಜವನ್ನು ಅಂಕಣ ಬರಹಗಳು ಹಾಗೂ ಅಂಕಣಕಾರರು ವಿಸ್ತರಿಸುತ್ತಾ ಸಾಗುವುದರಿಂದ ಸಹೃದಯನ ವಿಚಾರಗಳನ್ನು ಉನ್ನತಿಕರಿಸುತ್ತವೆ. ಅಂಕಣ ಬರಹಗಳು ವಾರದ ಆರು ದಿನಗಳ ಕಾಲ ವಸ್ತು ವೈವಿಧ್ಯದಿಂದ ಮಹೋನ್ನತ ಸ್ಥಾನ ಪಡೆದಿರುತ್ತವೆ. ಅವುಗಳಲ್ಲಿ ನಾಡು-ನುಡಿ, ಸಂಸ್ಕೃತಿ, ಪರಿಸರ ಕಾಳಜಿ, ಮಹಿಳಾಪರ ಧ್ವನಿ, ಕ್ರೀಡೆ, ಸಿನಿಮಾ, ಕಲೆ-ಶಿಲ್ಪಕಲೆ, ಆರ್ಥಿಕ, ಭೂಗೋಳ, ಸಾಹಿತ್ಯ ಹೀಗೆ ನಾನಾ ವಿಧದ ವಿಷಯ ವಸ್ತುವನ್ನು ಪಡೆದಿರುವುದು, ಅಂಕಣ ಸಾಹಿತ್ಯದ ಪ್ರಯೋಜನವನ್ನು ಇಮ್ಮಡಿಗೊಳಿಸಿವೆ.
References
ಅಂಕಣ ಸಾಹಿತ್ಯದ ಅಂದ ಹೆಚ್ಚಿಸಿದ ಎಂ.ಬಿ. ಕುಕ್ಯಾನ್, ಜಿ.ಎನ್. ಉಪಾಧ್ಯ, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ಮುಂಬಯಿ, 2012.
ಸಂಪ್ರತಿ, ಹಾ .ಮಾ. ನಾಯಕ, ಹೇಮಂತ ಸಾಹಿತ್ಯ ಪ್ರಕಾಶನ, ಚಿಕ್ಕಮಗಳೂರು, 2007.
ಕನ್ನಡ ಸಾಹಿತ್ಯ ಪತ್ರಿಕೆಗಳು ಇತಿಹಾಸ-ವರ್ತಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1993.
ಚಹಾದ ಜೋಡಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಅನನ್ಯ ಪ್ರಕಾಶನ, ಧಾರವಾಡ, 1996.
ಅಂಕಣತೋಟ, ವಾಗೀಶ ಬ. ಹೂಗಾರ (ಸಂ.), ಮಲೆನಾಡು ಪ್ರಕಾಶನ, ಚಿಕ್ಕಮಗಳೂರು, 2020.
ಸಾಹಿತ್ಯ ಪ್ರಕಾರಗಳು, ಪಿ.ವಿ.ಶಾಸ್ತ್ರಿ, ಪ್ರತಿಭಾ ಗ್ರಂಥಮಾಲೆ, ಧಾರವಾಡ, 2011.7) ಪ್ರಬಂಧ ಪ್ರಪಂಚ, ಎಚ್.ವ್ಹಿ .ನಾಗೇಶ , ಡಾ.ರಾ.ಯ. ಧಾರವಾಡಕರ ಸನ್ಮಾನ ಸಮಿತಿ, ಧಾರವಾಡ,1990.
ಕನ್ನಡ ಸಾಹಿತ್ಯ ವಿಮರ್ಶೆಯ ತಾತ್ವಿಕ ವಿವೇಚನೆ, ಡಾ.ರಂ.ಶ್ರೀ.ಮುಗಳಿ,1957. 8) ಕನ್ನಡದಲ್ಲಿ ಅಂಕಣ ಸಾಹಿತ್ಯ, ಡಾ. ದೊಡ್ಡೇಗೌಡ. ಬಿ . ಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರ, 2021.
ಪ್ರಬಂಧ ಪ್ರಪಂಚ, ಎಚ್. ವಿ. ನಾಗೇಶ್, ಡಾ. ರಾ.ಯ. ಧಾರವಾಡಕರ ಸನ್ಮಾನ ಸಮಿತಿ, ಧಾರವಾಡ, 1990, ಪುಟ-182-184