ತತ್ವಪದಕಾರ ತಾಳಕೇರಿ ಬಸವರಾಜ: ಜೀವನ
Abstract
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಾಳಕೇರಿ ಎಂಬ ಗ್ರಾಮದಲ್ಲಿ 1930 ರಲ್ಲಿ ಹೂಗಾರ ಮನೆತನದಲ್ಲಿ ಜನಿಸಿದರು. ತಂದೆ ಹೂಗಾರ ಬಾಳಪ್ಪ ತಾಯಿ ಸಾವಿತ್ರಮ್ಮ. ಹೂಮಾಲೆ ಕಟ್ಟುವುದು, ಬಿಡಿ ಹೂವುಗಳನ್ನು ಮಾರುವುದು ಇವರ ಮನೆತನದ ಕಾಯಕವಾಗಿತ್ತು. ಮೂರು ಜನ ಹೆಣ್ಣು ಮಕ್ಕಳು ಹಾಗೂ ನಾಲ್ಕು ಜನ ಗಂಡು ಮಕ್ಕಳಲ್ಲಿ ಎರಡನೇಯವರಾದ ತಾಳಕೇರಿ ಬಸವರಾಜರು ಆಗಿದ್ದನು. ಕಡು ಬಡತನದಲ್ಲಿ ಜನಿಸಿದ ಇವರು ಕಷ್ಟದ ಬದುಕನ್ನು ಕಂಡವರು. ಆದರೂ ತಂದೆ ತಾಯಿ ಪ್ರೀತಿ, ಮಮತೆಯಿಂದ ಬೆಳೆಸಿದರು. ಇವರ ಮನೆಯಲ್ಲಿ ಹೂವಿನ ಪರಿಮಳದೊಂದಿಗೆ ಸಂಗೀತ ಸಾಂಸ್ಕೃತಿಕ ಪರಿಮಳವು ಇತ್ತು ಇದಕ್ಕೆ ಸಾಕ್ಷಿಯಾಗಿ ಬಸವರಾಜ ಅವರ ಅಜ್ಜ, ಮುತ್ತಜ್ಜರು ಬಯಲಾಟ – ದೊಡ್ಡಾಟ ಮುಂತಾದ ಜನಪದ ಕಲೆಗಳಲ್ಲಿ ತೊಡಗಿಸಿಕೊಂಡರು. ಅಲ್ಲದೆ ಇವರ ತಂದೆಯಾದ ಹೂಗಾರ ಬಾಳಪ್ಪನೂ ಸಹ ಜನಪದ ಕಲಾವಿದನಾಗಿದ್ದನು. ಹೆಣ್ಣು ಪಾತ್ರಗಳನ್ನು ಮಾಡುವುದು ನೃತ್ಯ ಮಾಡುವುದಲ್ಲದೆ, ರಂಗಗೀತೆಗಳನ್ನು, ಬಯಲಾಟದ ಪಾತ್ರ ಮಾಡುವುದು, ಕಣಿ ಹೇಳುವುದು ತಬಲಗಳನ್ನು ಸ್ವತಃ ನುಡಿಸುತ್ತಿದ್ದರು. ಹೀಗಾಗಿ ಈ ಸಾಂಸ್ಕೃತಿಕ ವಾತವರಣವು ಬಸವರಾಜ ಅವರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲಿತು.
References
ಆಶುಕವಿ ತಾಳಕೇರಿ ಬಸವರಾಜ, ‘ಕಲ್ಯಾಣ ಗೀತಾ’ ವಿಜಯ ಬುಕ್ ಡಿಪೊ ಗದಗ, 1966.
ಆಶುಕವಿ ತಾಳಕೇರಿ ಬಸವರಾಜ, ‘ಬಸವಧ್ಯಾನ ಚಿಂತಾಮಣಿ’ ಜಗದ್ಗುರು ಶ್ರೀ ವಿಜಯ ಮಹಾಂತ ಸ್ವಾಮಿಗಳು ಕುದರಿಮೋತಿ, 1992.
ದಸ್ತಗೀರಸಾಬ್ ದಿನ್ನಿ, ‘ತಾಳಕೇರಿ ಬಸವರಾಜ’ ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಬೆಂಗಳೂರು, 2012.
ಬಸವರಾಜ ಸಬರದ, ‘ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳು, ಪ್ರಸಾರಾಂಗ, ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ, 2013.