ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಣ್ಣ ಕಥೆಗಳಲ್ಲಿನ ಕೌಟುಂಬಿಕ ಸಫಲತೆ
Keywords:
ಮಾಸ್ತಿ ವೆಂಕಟೇಶ ಅಯ್ಯಂಗಾರ, ಶ್ರೀನಿವಾಸ, ವೆಂಕಟಿಗನ ಹೆಂಡತಿ, ಕೌಟುಂಬಿಕ ಸಫಲತೆ, ಕಥನ ತಂತ್ರAbstract
ಸಣ್ಣ ಕತೆಗಳ ಜನಕ ಎಂದೇ ಪ್ರಸಿದ್ಧರಾದವರು ಮಾಸ್ತಿ ವೆಂಕಟೇಶ ಅಯ್ಯಂಗಾರರು. ಶ್ರೀನಿವಾಸ ಎಂಬ ಕಾವ್ಯನಾಮದಿಂದ ಸಣ್ಣ ಕಥೆಗಳನ್ನು ರಚಿಸಿದ್ದಾರೆ. ಅವರ ಕೆಲವು ಸಣ್ಣ ಕಥೆಗಳಲ್ಲಿ ಬರುವ ಕೌಟುಂಬಿಕ ಸಫಲತೆಯನ್ನು ಶೋಧಿಸುವ ಪ್ರಯತ್ನವೇ ಈ ಲೇಖನದ ಉದ್ಧೇಶ. ‘ರಂಗನ ಮದುವೆ’ ಯಿಂದ ಹಿಡಿದು ಮಾಯಣ್ಣನ ಕನ್ನಡಿ ತನಕ ಅವರ ಸಣ್ಣ ಕಥೆಗಳಲ್ಲಿ ಕಾಣುವುದು ಸಾಮಾನ್ಯ ಘಟನೆಗಳನ್ನು ಮತ್ತು ಉತ್ಪ್ರೇಕ್ಷೆಯಿಲ್ಲದೆ ನಿರೂಪಿಸುವ ಶೈಲಿಯನ್ನು. ‘ವೆಂಕಟಿಗನ ಹೆಂಡತಿ’ಯಲ್ಲಿ ನೀತಿ ತಪ್ಪಿದ ಹೆಂಡತಿಯನ್ನು ಮತ್ತೆ ಅನುಕಂಪದಿಂದ ಸ್ವೀಕರಿಸುವ ಕಟ್ಟಿಗೆ ಮಾರುವ ವೆಂಕಟಿಗನಿಂದ ಹಿಡಿದು ಕರ್ಮಯೋಗದ ಕೊನೆಯದಿನದಲ್ಲಿ ನಿರ್ಲಿಪ್ತರಾಗಿ ಬೆಳಕಿನ ಲೋಕಕ್ಕೆ ತೆರಳಿದ ಮಹ಼ರ್ಷಿ ವಾಮದೇವ ದ್ವೈಪಾಯನರವರೆಗೆ ಎಲ್ಲಾ ಪಾತ್ರಗಳ ಜೀವನವನ್ನು ಚಿತ್ರಿಸಿರುವುದು ಸಹಾನುಭೂತಿಯುತವಾದ ದೃಷ್ಠಿಯಿಂದ. ಇವರ ಕಥೆಗಳಲ್ಲಿ ಆವೇಶವಿಲ್ಲ. ಸಮಾಜ ಸುಧಾರಣೆಯ ತವಕವಿಲ್ಲ. ದೋಷಗಳನ್ನು ತೊಡೆಯುವ ಆಗ್ರಹವಿಲ್ಲ. ಜೀವನದ ಕಷ್ಟ ಸುಖ, ಆತ್ಮದ ಅನುಭವ ಇವುಗಳನ್ನು ಚಿತ್ರಿಸಿದರೆ ತಾನಾಗಿಯೇ ಮನುಷ್ಯನ ಹೃದಯ ಪಕ್ವವಾಗುತ್ತದೆ, ಮೃದುವಾಗುತ್ತದೆ ಎಂಬ ನಿಲುವಿನ ಮೇಲೆ ಕಥೆಗಳನ್ನು ರಚಿಸಿರುವುದು ಈ ಅಧ್ಯಯನದಿಂದ ತಿಳಿದು ಬರುತ್ತದೆ.
References
ನಾಯಕ ಜಿ. ಎಚ್. (1988). ನಿಜದನಿ. ಅಕ್ಷರ ಪ್ರಕಾಶನ. ಹೆಗ್ಗೋಡು.
ಶ್ರೀನಿವಾಸ. (1966). ಸಣ್ಣ ಕತೆಗಳು: ಭಾಗ-02. ಜೀವನ ಕಾರ್ಯಲಯ. ಬೆಂಗಳೂರು.
ಶ್ರೀನಿವಾಸ. (1979). ಸಣ್ಣ ಕತೆಗಳು: ಭಾಗ-9. ಜೀವನ ಕಾರ್ಯಲಯ. ಬೆಂಗಳೂರು.
ಶ್ರೀನಿವಾಸ. (1979). ಸಣ್ಣ ಕತೆಗಳು: ಭಾಗ-10. ಜೀವನ ಕಾರ್ಯಲಯ. ಬೆಂಗಳೂರು.
ಅಶೋಕ ಟಿ. ಪಿ. (1990). ಸಾಹಿತ್ಯ ವಿಮರ್ಶೆ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.
ಸತ್ಯನಾರಾಯಣ ಕೆ. (2020). ಮಹಾ ಕಥನದ ಮಾಸ್ತಿ. ವಸಂತ ಪ್ರಕಾಶನ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.