ವೈದೇಹಿಯವರ ಶಕುಂತಲೆ ಎಂಬ ಎಚ್ಚರ
Keywords:
ಶಾಕುಂತಲೋಪಾಖ್ಯಾನ, ಅಭಿಜ್ಞಾನ ಶಾಕುಂತಲ, ಶಕುಂತಲೆಯೊಡನೆ ಕಳೆದ ಅಪರಾಹ್ನ, ಪುರುಷ ಲಂಪಟತ್ವ, ವಿಸ್ಮರಣೆ-ಎಚ್ಚರAbstract
ಶಕುಂತಲೆಯ ಕಥೆ ಮಹಾಭಾರತದ ಶಾಕುಂತಲೋಪಾಖ್ಯಾನದ ಕಾಲದಿಂದಲೂ ಭಾರತದ ಎಲ್ಲ ಭಾಷೆಗಳ ಕವಿಗಳನ್ನು ಆಕರ್ಷಿಸಿದೆ. ಸಂಸ್ಕೃತದ ಕವಿ ಕಾಳಿದಾಸನಂತೂ “ಅಭಿಜ್ಞಾನ ಶಾಕುಂತಲ”ವನ್ನೇ ಬರೆದ. ಶಕುಂತಲೆಯ ಮುಗ್ಧತೆ, ದುಷ್ಯಂತ-ಶಕುಂತಲೆಯರ ಪ್ರೇಮ, ವಿವಾಹ, ವಿಯೋಗ ಮತ್ತು ಮರು ಸಮಾಗಮಗಳನ್ನು ಕಾವ್ಯಾತ್ಮಕವಾಗಿಸಿ ರಮ್ಯ ನಾಟಕದ ಇತಿಹಾಸದಲ್ಲಿ ಶಕುಂತಲೆಯ ಕಥೆಯನ್ನು ಅಜರಾಮರಗೊಳಿಸಿದ. ಇದಕ್ಕೆ ಕಾರಣ ಹಲವು. ಶಾಕುಂತಲದ ಕಥೆಯಲ್ಲಿರುವ ರಮ್ಯತೆ, ಅದರ ವಸ್ತು ವಿಸ್ತಾರ, ಅಭಿಜಾತ ಗುಣಗಳು, ವಿಧಿವಾದ ಇತ್ಯಾದಿಗಳು ಒಂದು ಕಡೆಯಾದರೆ; ರಾಜಪ್ರಭುತ್ವ, ಸಿಂಹಾಸನ, ವಾರಸುದಾರಿಕೆಯ ಹಕ್ಕು-ಹಂಬಲಗಳು ಮತ್ತೊಂದು ಕಡೆ ನಿಂತು ಹಿಂದಿನ ಕವಿಗಳನ್ನು ಪ್ರೇರೇಪಿಸಿದೆ. ಹಾಗೆಯೇ ಕಥೆ ಹಳೆಯದಾದರೂ ಅದರೊಳಗೆ ಹುದುಗಿರುವ ಸತ್ವ ಇಂದಿನ ಲೇಖಕರನ್ನೂ ಚಿಂತನೆಗೆ ಹಚ್ಚಿದೆ. ಹೀಗೆ ಚಿಂತನೆಗೆ ತೊಡಗಿದ ಲೇಖಕರು ಕಥೆಯನ್ನು ವೈಚಾರಿಕತೆಯ, ನೈತಿಕತೆಯ ಒರೆಗೆ ಹಚ್ಚುವ ಪ್ರಯತ್ನ ಮಾಡಿದ್ದಾರೆ ಮತ್ತು ಪುರಾಣದ ಚಿಪ್ಪಿನಲ್ಲಿ ಅಂತರ್ಗತವಾಗಿರುವ ಅವಿತಿಟ್ಟ ಸತ್ಯಗಳ ಶೋಧನೆಗೆ ತೊಡಗಿದ್ದಾರೆ. ಇಂಥ ಒಂದು ಪ್ರಯತ್ನ ವೈದೇಹಿಯವರ “ಶಕುಂತಲೆಯೊಡನೆ ಕಳೆದ ಅಪರಾಹ್ನ” ಕಥೆಯಲ್ಲಿದೆ. ಪಿತೃಪ್ರಾಧಾನ್ಯತೆಯ, ರಾಜಪ್ರಭುತ್ವದ ಕೋರೈಸುವ ಬೆಳಕಿನಲ್ಲಿ ಕಳೆದು ಹೋದ ಶಕುಂತಲೆಯನ್ನು ಹುಡುಕುವ ಪ್ರಯತ್ನ ಇಲ್ಲಿನದು. ಇದನ್ನು ವೈದೇಹಿಯವರು ನಿರ್ವಹಿಸಿರುವ ರೀತಿಯನ್ನು ಕಂಡುಕೊಳ್ಳುವ ಮತ್ತು ಎಲ್ಲ ಹೆಣ್ಣುಗಳ ಪ್ರತಿನಿಧಿಯಾಗಿ ಶಕುಂತಲೆಯ ಪಾತ್ರವನ್ನು ಗ್ರಹಿಸುವ ಉದ್ದೇಶ ಪ್ರಸ್ತುತ ಲೇಖನದ ಹಿಂದಿದೆ.
References
ವೈದೇಹಿ. (2006). ವೈದೇಹಿಯವರ ಆಯ್ದ ಕಥೆಗಳು. ಅಕ್ಷರ ಪ್ರಕಾಶನ. ಹೆಗ್ಗೋಡು.
ಸುಮಿತ್ರಾಬಾಯಿ ಬಿ. ಎನ್. (2006). ಸ್ತ್ರೀವಾದ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.
ಪ್ರಭಾವತಿ ಎಸ್. ವಿ. (2011). ಸ್ತ್ರೀವಾದದ ಪ್ರಸ್ತುತತೆ. ಚಾರುಮತಿ ಪ್ರಕಾಶನ. ಬೆಂಗಳೂರು.
ರಂಗಣ್ಣ ಎಸ್. ವಿ. (2001). ಕಾಳಿದಾಸನ ನಾಟಕಗಳ ವಿಮರ್ಶೆ. ಎಸ್. ಆರ್.ಶಿವರಾಮ್ ಪ್ರಕಾಶನ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.