ನುಡಿ ಸಂಕಥನ ಹಾಗೂ ನಮ್ಮ ಮುಂದಿನ ಸವಾಲುಗಳು
Keywords:
ನುಡಿ, ವಲಸೆ, ಸಾಂಸ್ಕೃತಿಕ, ಅಳಿವು, ಅಧಿಕಾರಶಾಹಿ, ಪ್ರಜಾಪ್ರಭುತ್ವAbstract
ಭಾರತವು ಹಲವು ಭಾಷೆಗಳಿಂದ ಕೂಡಿದೆ. ಒಂದೊಂದು ಭಾಷೆಗೆ ಒಂದೊಂದು ನುಡಿ ಇದೆ. ಒಂದು ನುಡಿಯನ್ನು ಆ ಸಮುದಾಯದ ಅಸ್ತಿತ್ವ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ನುಡಿಗಳ ಅಳಿವು ಆಗದಂತೆ ಜನಪ್ರಿಯ ನಾಯಕರು, ನುಡಿಯರಿಗರು, ಜನಪ್ರಿಯ ಮಾಧ್ಯಮಗಳು ಹಾಗೂ ವಿದ್ಯಾಮಾನಗಳು ಕಾರ್ಯ ಪ್ರವೃತ್ತರಾಗಬೇಕಿದೆ. ನುಡಿಗಳ ಅಳಿವನ್ನು ಕುರಿತಂತೆ ನುಡಿಯರಿಗರು ತಮ್ಮ ವಿಚಾರಗಳನ್ನು ತಮ್ಮದೇ ದಾಟಿಯಲ್ಲಿ ಮಂಡಿಸಿದ್ದಾರೆ. ನುಡಿಗಳು ಏಕೆ ಅಳಿಯುತ್ತವೆ, ಯಾವಾಗ ಅಳಿಯುತ್ತವೆ ಮತ್ತು ಹೇಗೆ ಅಳಿಯುತ್ತವೆ ಎಂಬ ನೆಲೆಗಳನ್ನು ವಿವರಿಸಲು ತೊಡಗಿದ್ದಾರೆ. ನುಡಿ ಅಳಿಯುವುದು ಎಂದರೇನು? ಆ ನುಡಿಯನ್ನು ಆಡುವ ಸಮುದಾಯದ ಎಲ್ಲಾ ಸದಸ್ಯರು ಯಾವುದೋ ಕಾರಣದಿಂದ ನಾಶವಾದಾಗ ಮತ್ತು ನೈಸರ್ಗಿಕ ವಿಕೋಪಕ್ಕೆ ತುತ್ತಾದಾಗ, ವಲಸೆ ಹೋದಾಗ ರಾಜಕೀಯ ಮತ್ತು ಆರ್ಥಿಕ ಕಾರಣಕ್ಕೆ ಮೂಲ ನೆಲೆಯಿಂದ ತನ್ನ ಬೇರುಗಳನ್ನು ಕಿತ್ತುಕೊಂಡು ಹೋದಾಗ ಆ ನುಡಿ ಗುರುತು ನಾಶವಾಗುತ್ತದೆ.
References
ನಾರಾಯಣ ಕೆ. ವಿ. (2018). ನುಡಿಗಳ ಅಳಿವು. ಅಹರ್ನಿಷಿ ಪ್ರಕಾಶನ. ಶಿವಮೊಗ್ಗ.
ಸಿರಾಜ್ ಅಹಮದ್ ಎಸ್. (2016). ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಬೆಂಗಳೂರು.
ಶಿವಾರೆಡ್ಡಿ ಕೆ. ಸಿ. & ಲಕ್ಷ್ಮೀಕಾಂತ್ ಎಸ್. ಬಿ. (2016). ಅನುವಾದ ಸಂಕಥನ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.