ಬ್ಯಾಡಗಿ ತಾಲೂಕಿನ ಕೃಷಿ ಆಚರಣೆಗಳು
Keywords:
ಮಳೆ ಆಚರಣೆ, ಜೋಕುಮಾರಸ್ವಾಮಿಯ ಕಥೆ, ಯುಗಾದಿ ಹಬ್ಬ, ಹೋರಿ ಹಬ್ಬ, ಭೂಮಿ ಹುಣ್ಣಿಮೆ, ಕಣದ ಹಬ್ಬAbstract
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಆದಿಮಾನವನು ಆರಂಭದಲ್ಲಿ ಗಡ್ಡೆ -ಗೆಣಸುಗಳನ್ನು ತಿನ್ನುತ್ತಾ ಒಂದೆಡೆ ನೆಲೆ ನಿಂತು ಕೃಷಿ ಆರಂಭಿಸಿದ. ಇದನ್ನು ಅನಾದಿಕಾಲದಿಂದಲೂ ನಮ್ಮ ಜನಪದರು ಮಾಡಿಕೊಂಡು ಬರುತ್ತಿದ್ದಾರೆ. ಕೃಷಿಯನ್ನು ನಮ್ಮ ಜನಪದರು ಹಬ್ಬದ ರೀತಿ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೃಷಿಯನ್ನು ಮಾಡಲು ಅವಶ್ಯಕವಾಗಿ ಮಳೆಬೇಕು. ಮಳೆಯನ್ನು ಸಹ ಒಂದು ಆಚರಣೆಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಆಚರಣೆಯಲ್ಲಿ ನಮ್ಮ ಜನಪದರು ಮನೆಗಳಿಗೆ ಹೋಗಿ ಭಿಕ್ಷಾಟನೆ ಮಾಡಿಕೊಂಡು ಮಳೆ ಬರಲು ದೈವಕ್ಕೆ ಬೇಡಿಕೊಳ್ಳುತ್ತಾರೆ. ಅದೇ ರೀತಿ ಭಾದ್ರಪದ ಶುದ್ಧ ಅಷ್ಟಮಿಯಂದು ಜೋಕುಮಾರಸ್ವಾಮಿ ಹಬ್ಬವನ್ನು ಆಚರಿಸಿ ಮಳೆ ಬರಲು ಬೇಡಿಕೊಳ್ಳುತ್ತಾರೆ. ಭಾರತ ಸುಸಂಸೃತ ರಾಷ್ಟ್ರ. ಹಾಗಾಗಿ ಭಾರತೀಯರಿಗೆ ಪಂಚಾಂಗದ ಪ್ರಕಾರ ಹೊಸ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಆರಂಭವಾಗುತ್ತದೆ. ಇದನ್ನ ನಾವು ಯುಗಾದಿ ಹಬ್ಬ ಅಥವಾ ಹೊಸ ವರ್ಷ ಎಂದು ಆಚರಿಸುತ್ತಾರೆ. ಈ ಹಬ್ಬದಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿ ಬೇವು-ಬೆಲ್ಲ ತಿನ್ನುವುದರ ಮೂಲಕ ಜೀವನ ಕಷ್ಟ ಸುಖಗಳಿಂದ ನಡೆಯುತ್ತದೆ ಎಂಬ ಸಂದೇಶವನ್ನು ನೀಡುತ್ತಾರೆ. ನಾವು ಬೆಳೆದ ಫಸಲು ಬಂದಾಗ ಭೂಮಿಯನ್ನು ಒಂದು ಹೆಣ್ಣಾಗಿ ನೋಡಿ ಆ ಹೆಣ್ಣಿಗೆ ಸೀಮಂತ ಕಾರ್ಯ ಮಾಡುವುದು ಹುಣ್ಣಿಮೆ ಹಬ್ಬದ ವಿಶೇಷತೆ. ನಂತರ ಕೃಷಿಕರು ನಮ್ಮ ಬೇಸರವನ್ನು ಕಳೆಯಲು ಹೋರಿ ಹಬ್ಬ ಆಚರಿಸುತ್ತಾರೆ. ಹಬ್ಬದಲ್ಲಿ ಎತ್ತುಗಳಿಗೆ ಕೊಬ್ಬರಿ ಹಾರ, ರಿಬ್ಬನ್ನು, ಜೂಲಾ ಹಣೆಪಟ್ಟಿ ಕಟ್ಟಿ ಸುಂದರವಾಗಿ ಅಲಂಕರಿಸಿ ಸಂತೋಷಪಡುತ್ತಾರೆ. ಬೆಳೆಯೆಲ್ಲ ಬೆಳೆದ ಮೇಲೆ ಅದನ್ನು ಒಕ್ಕಲು ಕಣದ ಹಬ್ಬ ಮಾಡುತ್ತಾರೆ. ಈ ಕಣದ ಹಬ್ಬ ತಿಂಗಳವರೆಗೂ ನಡೆಯುತ್ತದೆ. ಒಕ್ಕಿದ ನಂತರ ಕಾಳಿನ ರಾಶಿ ಮಾಡಿ ಊರಿಗೆಲ್ಲ ಊಟ ಹಾಕಿ ಅತಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದಲ್ಲಿ ಕಮ್ಮಾರ, ಚಮ್ಮಾರ, ಅಗಸ, ಮುಂತಾದ ವರ್ಗದ ಜನರಿಗೆ ದಾನ ಧರ್ಮ ಮಾಡುವುದರ ಮೂಲಕ ಜಗತ್ತಿಗೆ ಹಂಚಿ ತಿನ್ನಬೇಕು ಎಂಬ ಸಂದೇಶ ನೀಡುತ್ತಾರೆ. ಇಂತಹ ಅನೇಕ ಕೃಷಿ ಆಚರಣೆಗಳು ಇಂದು ನಶಿಸಿ ಹೋಗುತ್ತಿವೆ. ಅದರ ಬಗ್ಗೆ ನಾವು ತಿಳಿಯೋಣ.
References
ತಾರಿಹಳ್ಳಿ ಹನುಮಂತಪ್ಪ. (2017). ಹೈದರಾಬಾದ್ ಕರ್ನಾಟಕದ ಕೃಷಿ ಆಚರಣೆಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಮಲ್ಲಿಕಾರ್ಜುನ ಹೊಸಪಾಳ್ಯ. (2008). ಕೃಷಿ ಆಚರಣೆ. ರಾಜಾ ಪ್ರಿಂಟರ್ಸ್. ಬೆಂಗಳೂರು.
ರಮೇಶ ಸ. ಚಿ. (2011). ಕೃಷಿ: ಪಾರಂಪರಿಕ ಜ್ಞಾನ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ರಮೇಶ ಸ. ಚಿ. (2010). ಕರ್ನಾಟಕದ ಕೃಷಿ ಆಚರಣೆಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಸೂರ್ಯನಾಥ ಯು ಕಾಮತ್. (1995). ಧಾರವಾಡ ಜಿಲ್ಲಾ ಗ್ಯಾಸೆಟಿಯರ. ಪರಿಶ್ರೀ ಪ್ರೀಂಟರ್ಸ್. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.