ಕನ್ನಡ ಅನುವಾದಿತ ಮಹಿಳಾ ಆತ್ಮಕಥೆಗಳು: ವಿವಿಧ ಆಯಾಮಗಳು

Authors

  • ನಸ್ರೀನ್ ಬಾನು ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜು, ಚಿಕ್ಕಮಗಳೂರು.

Keywords:

ಆತ್ಮಕಥೆ, ಅಸ್ಮಿತೆ, ಶೋಷಣೆ, ಬದುಕು, ಪ್ರತಿರೋಧ

Abstract

ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಆತ್ಮಕಥೆಗಳನ್ನು ಕಟ್ಟಿಕೊಟ್ಟವರು ಬಹಳ ವಿರಳ. ಒಬ್ಬ ಮಹಿಳೆ ತನಗಿರುವ ಮಿತಿಗಳನ್ನು ಉಲ್ಲಂಘಿಸಿ ಸ್ಥಾಪಿತ ವ್ಯವಸ್ಥೆಯೊಂದು ಒಡ್ಡುವ ಸವಾಲುಗಳಿಗೆ ಎದುರಾಗುತ್ತಲೆ ತನ್ನ ಆತ್ಮವೃತ್ತಾಂತವನ್ನು ಸಾರ್ವಜನಿಕ ನೋಟಕ್ಕೆ ತೆರೆದಿಡುವ ದಿಟ್ಟತನಕ್ಕೆ ಬಹಳ ಸಮಯವೇ ಬೇಕಾಯಿತು. ಹೀಗೆ ಆರಂಭವಾದ ಮಹಿಳಾ ಆತ್ಮಕಥನಗಳೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸುತ್ತಿವೆ.


ಆತ್ಮಕಥೆ ಎಂದರೆ ತಮ್ಮ ಆತ್ಮ ವೃತ್ತಾಂತವನ್ನು ತಾವೆ ದಾಖಲಿಸುವ ಪ್ರಕ್ರಿಯೆ, ಮಹಿಳಾ ಆತ್ಮಕಥೆಗಳಲ್ಲಿ ಕೆಲವೊಮ್ಮೆ ತಮ್ಮ ಆತ್ಮ ವೃತ್ತಾಂತವನ್ನು ಸ್ವ್ವಗತದ ಮಾದರಿಯಲ್ಲಿ ಬರೆದಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಭಾರತದಂತಹ ಸಂಪ್ರದಾಯಿಕ ಸಮಾಜ ಮಹಿಳೆಗೆ ಕೆಲವು ಚೌಕಟ್ಟುಗಳನ್ನು ನಿರ್ಮಿಸಿದೆ. ಇಂತಹ ಸಂಕೀರ್ಣತೆಯನ್ನು ಭಂಜಿಸಿ ತಮ್ಮನ್ನು ತಾವು ದಾಖಲಿಸಿಕೊಳ್ಳುವ ತಣ್ಣನೆಯ ಪ್ರತಿರೋಧವನ್ನು ವ್ಯಕ್ತಪಡಿಸುತ್ತ ಭಯವನ್ನು, ಲಜ್ಜೆಯನ್ನು ಮೀರುವುದೇ ಮಹಿಳೆಯ ಎದುರಿರುವ ದೊಡ್ಡ ಸವಾಲು. ಹೀಗೆ ಸಮಾಜ, ಕುಟುಂಬ, ಸಮುದಾಯ ಒಟ್ಟಾರೆ ಹೊರಗಣ ಜಗತ್ತಿಗೆ ಒಳಗನ್ನು ತೆರೆದಿಟ್ಟು ಬೆತ್ತಲಾಗುವುದು ಅಷ್ಟು ಸುಲಭವಲ್ಲ. ಇಂತಹ ದಿಟ್ಟತನವನ್ನು ಮೆರೆದ ಅದೆಷ್ಟ್ಟೊ ದಿಟ್ಟೆಯರು ತಮ್ಮ ಆತ್ಮಕಥನಗಳ ಮೂಲಕವೇ ಉತ್ತರಿಸಿದ್ದಾರೆ.


ಹೀಗೆ ಎಲ್ಲಾ ಆತ್ಮಕಥೆಗಳಲ್ಲಿ ಕಂಡುಬರುವ ವಿವಿಧ ಮಹಿಳಾ ಪಾತ್ರಗಳು ತಮ್ಮ ಕುರುಹು ಅಮುಖ್ಯವಾದ ಸಮಾಜದಲ್ಲಿ ತಮ್ಮದೊಂದು ಅಸ್ಮಿತೆಯನ್ನು ಸೃಷ್ಟಿಸಿಕೊಂಡಿದೆ. ಜೊತೆಗೆ ಭೌಗೋಳಿಕ ಗಡಿಗಳನ್ನು ಮೀರಿ ತಮ್ಮ ಸ್ಥಾನವನ್ನು ನಿರ್ಮಿಸಿಕೊಂಡಿವೆ. ಜೊತೆಗೆ ಒಂದು ಚಳುವಳಿಯ ರೂಪವನ್ನು ಪಡೆದುಕೊಂಡಿವೆ. ಸಮಾಜ, ಕುಟುಂಬ, ಸಂಪ್ರದಾಯಿಕ ಚೌಕಟ್ಟುಗಳನ್ನು ಲಂಘಿಸಿ ಒಂದು ಸ್ಥಾಪಿತ ವ್ಯವಸ್ಥೆಯೊಳಗೆ ತನ್ನ ಒಳಗಣ್ಣು ತೆರೆದಿಟ್ಟು ಬಟಾ ಬಯಲಾಗುವುದಕ್ಕೆ ಬೇಕಾಗಿರುವುದು ನಿಷ್ಠುರ, ನಿರ್ಭಿಡೆಯ ಎದೆಗಾರಿಕೆ. ಅಂತಹ ಛಲದ, ಕೇವಲ ಹೆರುವ ಮತ್ತು ಹೊರುವ ಕಾಯಕಕ್ಕೆ ಸೀಮಿತವಾಗದೇ ಲೋಕ ಲಜ್ಜೆಯನ್ನು ಮೀರಿ ಮಾಡುವ ಕ್ರಾಂತಿ ತಮ್ಮನ್ನು ತಾವು ದಾಖಲಿಸಿಕೊಳ್ಳುವ ಹಾದಿಯಲ್ಲಿ ಬಹಳ ಮುಖ್ಯವೆನಿಸಿವೆ.

References

ತೇಜಸ್ವಿನಿ ನಿರಂಜನ & ಸೀಮಂತಿನಿ ನಿರಂಜನ. (2014). ಸ್ತ್ರೀವಾದಿ ಸಾಹಿತ್ಯ ವಿಮರ್ಶೆ. ಅಭಿನವ ಪ್ರಕಾಶನ. ಬೆಂಗಳೂರು.

ಸರಸ್ವತಿ ದು. (2011). ಬದುಕು ಬಯಲು. ಲಂಕೇಶ್ ಪ್ರಕಾಶನ. ಬೆಂಗಳೂರು.

ಹಸನ್ ನಯೀಂ ಸುರಕೋಡ. (2017). ರಸೀದಿ ತಿಕೇಟು. ಲಡಾಯಿ ಪ್ರಕಾಶನ. ಗದಗ.

ಕುಲಕರ್ಣಿ ಕೆ. ಎಸ್. (2016). ನಾಳಿನ ಚಿಂತ್ಯಾಕ. ಅಹರ್ನಿಶಿ ಪ್ರಕಾಶನ. ಶಿವಮೊಗ್ಗ.

ಶ್ರೀಮತಿ ಎಚ್. ಎಸ್. (2020). ಎಲ್ಲರಿಗಾಗಿ ಸ್ತ್ರೀವಾದ. ಆಕೃತಿ ಪುಸ್ತಕ ಪ್ರಕಾಶನ. ಬೆಂಗಳೂರು.

ಕವಿತಾ ರೈ. (20150). ಮಹಿಳೆ ವಸಾಹತ್ತೊರ ಚಿಂತನೆ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ಧರಣೀದೇವಿ ಮಾಲಗತ್ತಿ. (2012). ಮಹಿಳೆ ಮತ್ತು ಅಸಂಪ್ರದಾಯಿಕತೆ. ರೂಪ ಪ್ರಕಾಶನ. ಮೈಸೂರು.

ರೇಣುಕಾ ನಿಡಗುಂದಿ. (2014). ಅಮೃತ ನೆನಪುಗಳು. ಅಹರ್ನಿಶಿ ಪ್ರಕಾಶನ. ಶಿವಮೊಗ್ಗ.

ಜಗದೀಶ್ ಕೊಪ್ಪ ಎನ್. (2021). ಮರುಭೂಮಿಯ ಹೂ. ಮನೋಹರ ಗ್ರಂಥಮಾಲೆ. ಧಾರವಾಡ.

Downloads

Published

02.10.2024

How to Cite

ನಸ್ರೀನ್ ಬಾನು. (2024). ಕನ್ನಡ ಅನುವಾದಿತ ಮಹಿಳಾ ಆತ್ಮಕಥೆಗಳು: ವಿವಿಧ ಆಯಾಮಗಳು. AKSHARASURYA, 5(01), 43 to 49. Retrieved from http://aksharasurya.com/index.php/latest/article/view/506

Issue

Section

ಸಂಶೋಧನಾ ಲೇಖನಗಳು. | RESEARCH ARTICLE.