ಸಂಸ್ಕಾರ ಕಾದಂಬರಿಯ ತಾತ್ವಿಕ ಚರ್ಚೆ

Authors

  • Ravichandra

Abstract

ಸಾಹಿತ್ಯದಲ್ಲಿ ಶ್ರೇಷ್ಠವಾದ ಕೃತಿಯೊಂದು ಬಂದರೆ, ಮೊದಲ್ಲಿದ್ದ ಎಲ್ಲಾ ಕೃತಿಗಳು ಅಲುಗಾಡುತ್ತವೆ ಹಾಗೂ ಅವುಗಳ ಸ್ಥಾನಗಳಲ್ಲಿ ಬದಲಾಗುತ್ತವೆ. ಎಂಬ ಮಾತಿನಂತೆ ಸಂಸ್ಕಾರ ಕಾದಂಬರಿ ಬಂದಾಗ ಅಂದು ಅತಿ ಹೆಚ್ಚು ಚರ್ಚಗೆ ಒಳಗಾದ ಹಾಗೂ ಹೆಚ್ಚು ಪ್ರಸಿದ್ಧಿ ಪಡೆದ ಕಾದಂಬರಿಯಾಗಿದೆ. ಸಂಸ್ಕಾರ ಯು. ಆರ್. ಅನಂತಮೂರ್ತಿಯವರ ಮೊದಲ ಕಾದಂಬರಿ ಇದನ್ನು 1965 ರಲ್ಲಿ ಬರ್ಮಿಂಗಂಲಿ ಇಂಗ್ಲಿಷ್ ಸಬ್ ಟೈಟಲ್ ಇಲ್ಲದ ‘ಸೆವೆನ್ತ್ ಸೀಲ್’ ಸಿನಿಮಾ ನೋಡಿ ಅರ್ಥ ಮಾಡಿಕೊಂಡು ಬರೆದರು. ಇದಕ್ಕೆ ಕಾರಂತರ ಪ್ರಭಾವ ಹಾಗೂ ಬಾಲ್ಯದ ಕಥೆಗಳು ಪ್ರಭಾವ ಇದೆ ಎಂದು ಅವರೆ ಹೇಳಿಕೊಂಡಿದ್ದಾರೆ. ಇದು ಕನ್ನಡದ ಶ್ರೇಷ್ಠವಾದ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವ ಕಾದಂಬರಿಯಾಗಿದೆ. ಮತ್ತು ಆಗಿನ ಸಾಹಿತ್ಯವಲಯದಲ್ಲಿ ಈ ಕಾದಂರಿಯ ವಸ್ತುವಿಷಯ ಅತಿಹೆಚ್ಚು ಚರ್ಚಿತ, ಕೋಲಾಹಲ ಎಬ್ಬಿಸಿದ ವಿಷಯವಾಗಿತು. ಹಾಗೂ ಈ ಬಗೆಯ ವಸ್ತುವನ್ನು ಉಳಿದವರು ಅನುಸರಿಸಿರುವುದನ್ನು ಸಾಹಿತ್ಯದಲ್ಲಿ ಗಮನಿಸಬಹುದು ಉದಾಹರಣೆಗೆ ಕಂಬಾರರು ಜೀ. ಕೆ. ಮಾಸ್ತರರ ಪ್ರಣಯ ಪ್ರಸಂಗ, ಗಿರಡ್ಡಿಯವರ ಮಣ್ಣು, ಬಿ. ವಿ. ವೈಕುಂಠರಾಜು ಅವರ ಅಂತ್ಯ, ರಾಜಶೇಖರ ನೀರಮಾನ್ವಿ ಅವರ ಹಂಗಿನರಮನೆಯ ಹೊರಗೆ, ಗೀತಾ ನಾಗಭೂಷಣರ ಜ್ವಲಂತ, ಟಿ. ಜಿ. ರಾಘವ ಅವರ ಶ್ರಾದ್ಧ ಮುಂತಾದ ಕಥೆ ಮತ್ತು ಕಾದಂಬರಿಗಳು ಸಾವಿನ ಸಾಕ್ಷ್ಯದಲ್ಲಿ ಬದುಕನ್ನು ನಿಷ್ಠುರವಾಗಿ ಅವಲೋಕಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ರಚಿತವಾದ ಸಾಹಿತ್ಯವಾಗಿದೆ. ಈ ಕಾದಂಬರಿ ಪ್ರಕಟವಾದ ನಂತರ ಮೆಚ್ಚಿಕೊಂಡ ಎ.ಕೆ. ರಾಮಾನುಜನ್ ಮತ್ತು ಗಿರೀಶ ಕಾರ್ನಾಡರು ಓದಿದ ನಂತರ ತಮ್ಮಲ್ಲಿ ಮತ್ಸರವುಂಟು ಮಾಡಿದ ಕೃತಿ ಎಂದು ಹೇಳಿಕೊಂಡಿದ್ದಾರೆ. ಅದನ್ನು ಎ.ಕೆ. ರಾಮಾನುಜನ್ ಇಂಗ್ಲೀಷಿಗೆ ಅನುವಾದುಸುವುದರ ಮೂಲಕ ಗಿರೀಶ ಕಾರ್ನಾಡರು ಸಂಸ್ಕಾರ ಚಲನಚಿತ್ರದಲ್ಲಿ ಪ್ರಾಣೇಶಾಚಾರ್ಯರ ಪಾತ್ರವನ್ನು ಮಾಡುವ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಂಡರು. ಎಂಬುದನ್ನು ಅವರೆ ಹೇಳಿಕೊಂಡಿದ್ದಾರೆ. ಇದು ಕಾದಂಬರಿಯ ಅಂದಿನ ಮಹತ್ವವನ್ನು ಹೇಳುವುದಕ್ಕೆ ಸಾಕ್ಷಿಯಾಗಿದೆ.

 ಸಂಸ್ಕಾರ ಕಾದಂಬರಿಯು ಹೆಸರಿನಲ್ಲಿ ಹಲವು ಸ್ತರಗಳನ್ನು ಸೂಚಿಸುತ್ತದೆ. ಸಂಸ್ಕಾರ ವೈಯಕ್ತಿಕವಾಗಿರಬಹುದು ಅಥವಾ ಸಾಮಾಜಿಕವಾಗಿರಬಹುದು, ಎಂಬ ಎರಡಕ್ಕೂ ಅರ್ಥವನ್ನು ಎಡೆಮಾಡಿಕೊಡುತ್ತದೆ. ಸಂಸ್ಕಾರ ಪದದ ಅರ್ಥ ನೋಡುವುದಾದರೆ ಸಂಸ್ಕೃತಿ, ನೇಮ, ತಿದ್ದುಪಡಿ, ಧಾರ್ಮಿಕ ಕ್ರಿಯೆ ಎಂಬ ಅರ್ಥವನ್ನು ಸೂಚಿಸುತ್ತದೆ. ಸಂಸ್ಕಾರ ಕಾದಂಬರಿಯ ತಾತ್ವಿಕ ಚರ್ಚೆಗೆ ಒಳಪಡಿಸಲು ಇಲ್ಲಿ ಕಾದಂಬರಿಯನ್ನು ಪ್ರಮುಖವಾಗಿ ಒಟ್ಟು ಎರಡು ಭಾಗಗಳಾಗಿ ವಿಭಾಗಿಸಲಾಗಿದೆ. ಮೊದಲನೆಯದು ಸಮಾಜದ ನೈತಿಕ ಅಧಃಪತನ ಹಾಗೂ ಎರಡನೆಯದು ಹೊಸ ಹುಟ್ಟು ಪಡೆದ ವ್ಯಕ್ತಿ ಮತ್ತು ಸಮಾಜ ಎಂದು ವಿಭಾಗಿಸಿ ನೋಡುವ ಪ್ರಯತ್ನ ಮಾಡಿರುವೆ.

References

ಅನಂತಮೂರ್ತಿ.ಯು.ಆರ್, 2020, ಸಂಸ್ಕಾರ, ಅಕ್ಷರ ಪ್ರಕಾಶನ ಹೆಗ್ಗೋಡು ಸಾಗರ ಕರ್ನಾಟಕ.

ಅಶೋಕ. ಓ.ಪಿ, 2014, ಅನಂತಮೂರ್ತಿ ವಾಙ್ಮಯ, ಅಕ್ಷರ ಪ್ರಕಾಶನ ಹೆಗ್ಗೋಡು ಸಾಗರ ಕರ್ನಾಟಕ.

ಕೃಷ್ಣಮೂರ್ತಿ.ಎಂ.ಜಿ, 1994, ಕೃತಿ ಸಂಸ್ಕೃತಿ, ಋಜುವಾತು ಪ್ರಕಾಶನ ಮೈಸೂರು.

ನಾಯಕ.ಜಿ.ಎಚ್, 2011, ಮೌಲ್ಯ ಮಾರ್ಗ ಸಂ-ಒಂದು, ಸಿರಿವರ ಪ್ರಕಾಶನ ಬೆಂಗಳೂರು.

ಶೂದ್ರ ಶ್ರೀನಿವಾಸ್,2011, ಯು. ಆರ್. ಅನಂತಮೂರ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು.

Downloads

Published

05.02.2023

How to Cite

Ravichandra. (2023). ಸಂಸ್ಕಾರ ಕಾದಂಬರಿಯ ತಾತ್ವಿಕ ಚರ್ಚೆ. AKSHARASURYA, 2(02), 34 to 36. Retrieved from http://aksharasurya.com/index.php/latest/article/view/50

Issue

Section

Article