ವೀರಾಂಗಿಣಿ ಅಕ್ಕಮಹಾದೇವಿ
Keywords:
ಅಕ್ಕಮಹಾದೇವಿ, ವಚನ ಸಾಹಿತ್ಯ, ಬಸವಣ್ಣ, ಅಲ್ಲಮಪ್ರಭು, ಶಿವಶರಣೆ, ಶರಣ ಚಳವಳಿAbstract
ಹಳೆಗನ್ನಡ ಸಾಹಿತ್ಯವು ರಾಜ್ಯಾಶ್ರಯದಲ್ಲಿಯೇ ಪಂಡಿತ ಪಾಮರರಿಗೆ ಮಾತ್ರ ಸಿಮಿತವಾಗಿತ್ತು. ಹನ್ನೆರಡನೆ ಶತಮಾನದಲ್ಲಿ ವಚನ ಸಾಹಿತ್ಯಯೂ ತೀರಾ ಸರಳ ಸಹಜವಾಗಿ ತಾವು ಬೋದಿಸುವುದು ಸಾಮಾನ್ಯನಿಗೂ ತಲುಪಬೇಕು ಎಂಬ ಆಶಯ ಹೊಂದಿದವರು. ಶಿವಶರಣರು ಶಿವಶರಣೆಯರ ಆಲೋಚನೆಗಳನ್ನು ಅನುಭವಗಳನ್ನು ವಿಚಾರಧಾರೆಗಳೆ ವಚನ. ಜನಸಾಮಾನ್ಯರ ಭಾಷೆಯಲ್ಲಿಯೆ ತಮ್ಮ ಭಾವನೆಗಳನ್ನು ಅನಿಸಿಕೆಗಳನ್ನು ತತ್ವಗಳನ್ನು ಹಾಗೂ ಅವರ ಆತ್ಮಾನುಭವಗಳೇ ವಚನರೂಪದಲ್ಲಿ ವ್ಯಕ್ತಪಡಿಸಿದ್ದು ವಚನ ಸಾಹಿತ್ಯ. ವಚನ ಸಾಹಿತ್ಯ ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವುದು ಕನ್ನಡ ಸಾಹಿತ್ಯದ ಹೆಮ್ಮೆಯಾಗಿದೆ. ವಚನ ಸಾಹಿತ್ಯದಲ್ಲಿ ಕಾಣಿಸುವ ವಿಶಿಷ್ಟ ಪ್ರತಿಭೆಯ ಮಹಿಳೆ ಅಕ್ಕಮಹಾದೇವಿ. ಕನ್ನಡ ಸಾಹಿತ್ಯದ ಮೊದಲ ಕವಿಯತ್ರಿ ಮತ್ತು ವಚನಗಾರ್ತಿ, 12 ನೆಯ ಶತಮಾನದ ಪ್ರಪ್ರಥಮವಾಗಿ ಪುರುಷರಿಗೆ ಸಮಾನವಾಗಿ ನಿಂತು ಜ್ಞಾನ, ವೈರಾಗ್ಯ ಭಕ್ತಿ, ನೇರ ದಿಟ್ಟತನದಿಂದ ಅಂದಿನ ಕಾಲದಲ್ಲಿ ಹೆಣ್ಣು ಮನೆಯಿಂದ ಹೊರಬರಲು ಹೆದುರುತ್ತಿದ್ದ ಸಮಯದಲ್ಲಿ ಆಧ್ಯಾತ್ಮ ಲೋಕದ ಕಡೆ ಸಾಗಿದವಳು. ಚನ್ನಮಲ್ಲಿಕಾರ್ಜುನನ್ನು ದರ್ಶನಕಾಗಿ ಎಲ್ಲವು ತೋರೆದು ಕಲ್ಯಾಣ ಪ್ರವೇಶ ಮಾಡಿ ಹಲವು ಪರೀಕ್ಷೆಗಳನ್ನು ಒಡ್ಡಿದರು ಭಯಪಡದೆ ಅಲ್ಲಮಪ್ರಭುವರಿಗೆ ಉತ್ತರಿಸಿದ್ದು ಅಕ್ಕಮಹಾದೇವಿ. ಪುರುಷರಿಗೆ ಸಮಾನವಾಗಿ ಸಾಹಿತ್ಯ ರಚನೆ ಮಾಡಿದ ಕೀರ್ತಿ ಅಕ್ಕಮಹಾದೇವಿಗೆ ಸಲ್ಲುತ್ತದೆ. ಅಕ್ಕನ ಚಿಂತನೆಗಳು ಅವಳಾಡುವ ಮಾತುಗಳು ಇಂದು ನಮ್ಮ ಆಧುನಿಕ ಸಮಾಜಕ್ಕೆ ಅವಶ್ಯಕವಾಗಿದೆ. 12ನೆಯ ಶತಮಾನ ಇಡಿ ವಿಶ್ವಕ್ಕೆ ಮಾದರಿಯಾಗಿರುವುದು ಸಮಾನತೆ ನೆಲೆಯು ಅದಕ್ಕೆ ಸಾಕ್ಷಿಯಾಗಿದೆ. ಕೆಟ್ಟ ಗುಣಗಳು ತುಂಬಿದ ಮನುಷ್ಯ ಕೇವಲ ಮನುಷ್ಯನಾದರೆ ಸಾಲದು ಅವನಲ್ಲಿ ಶಿವಭಕ್ತಿ, ಕರುಣೆ, ದಯ, ಮಾನವೀಯ ಮೌಲ್ಯಗಳು ಹೊಂದಿದವರು ನಿಜವಾದ ಮನುಷ್ಯನಾಗಲು ಸಾಧ್ಯ ಎಂದು ಅಕ್ಕಮಹಾದೇವಿಯ ನಿಲುವಾಗಿತ್ತು. ಅಂದಿನಿಂದ ಮಹಿಳೆಯರಿಗೆ ಸಮಾನವಾಗಿ ಕಂಡವರು ಬಸವಾದಿ ಶರಣರು. ಹೆಣ್ಣು ಕೀಳಲ್ಲ ಅವಳು ಸಾಧನೆ ಮಾಡಬಲ್ಲಳು ಎಂದು ಸಾಧಿಸಿದ್ದು ತೋರಸಿದ್ದು ಅಕ್ಕಳು.
References
ಮುಗಳಿ ರಂ. ಶ್ರೀ. (2010). ಕನ್ನಡ ಸಾಹಿತ್ಯ ಚರಿತ್ರೆ. ಗೀತಾ ಬುಕ್ ಹೌಸ್. ಮೈಸೂರು.
ಶೈಲಜಾ ಉಡಚಣ. (2007). ವಚನ ಸಾಹಿತ್ಯ ಮತ್ತು ಮಹಿಳೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು. ಮೈಸೂರು.
ಮಲ್ಲಪ್ಪ ಎಂ. ಮಾನೆಗರ (ಸಂ). (2021). ನಡುಗನ್ನಡ ಸಾಹಿತ್ಯ. ಉದಯೋನ್ಮುಖ ಯುವ ಬರಹಗಾರರ ಬಳಗ. ಕಲಬುರಗಿ.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.