ಬೆಳ್ವೊಲನಾಡಿನ ರಾಷ್ಟ್ರಕೂಟರ ಕಾಲದ ಶಾಸನೋಕ್ತ ಜೈನ ಮುನಿಗಳು
Keywords:
ಬೆಳ್ವೊಲನಾಡು, ಜೈನ ಪರಂಪರೆ, ಮುನಿ ಪರಂಪರೆ, ರಾಷ್ಟ್ರಕೂಟರು, ಸಮಾಧಿ ಮರಣAbstract
“ಪೂರ್ಣತ್ವ ಸಂಪಾದನೆ ಜೀವನದ ಗುರಿ. ಜೀವವು ಆತ್ಮವಿಕಾಸದ ಮಹಾ ಕಮ್ಮಟವೆನಿಸಿದುದು. ಪರಿಪೂರ್ಣದೆಡೆಗೆ ಸಾಗಲು ಜೈನಧರ್ಮ ಆನಂದಮಯವಾಗಿದೆ, ಆಶಾವಾದಿಯಾಗಿದೆ”. ಇಲ್ಲಿ ಮನುಷ್ಯ ಸ್ವಪ್ರಯತ್ನದಿಂದ ಜೀವನವನ್ನು ಉತ್ತಮಗೊಳಿಸಿಕೊಂಡು, ಮಹೋನ್ನತವಾದುದನ್ನು ಸಾಧಿಸುತ್ತಾನೆ. ಇದೇ ಜೈನಧರ್ಮ ತತ್ವದಂತೆ ಕರ್ಮಬಂಧನಕ್ಕೊಳಗಾದ ಜೀವಾತ್ಮನು ಅನೇಕ ಭವಗಳನ್ನು ದಾಟುತ್ತ ಬಂದು, ಕರ್ಮಬಂಧವನ್ನು ಕಿತ್ತೊಗೆದು, ಭವಬಂಧನದಿಂದ ಮುಕ್ತಗೊಂಡು ಸಿದ್ದನಾಗುತ್ತಾನೆ. ತನ್ನಂತೆ ಇನ್ನುಳಿದ ಜೀವಾತ್ಮರೂ ಮುಕ್ತರಾಗಬೇಕೆಂಬ ಸದುದ್ದೇಶದಿಂದ ತಾನು ಕಂಡುಂಡ, ಅರಿತುಕೊಂಡ ಜ್ಞಾನದ ಹಿನ್ನೆಲೆಯಲ್ಲಿ ಈ ಜೀವಾಜೀವಗಳ ಸೃಷ್ಟಿ, ಸಂಸಾರದ ಕಲ್ಪನೆಯನ್ನು ಉಪದೇಶಿಸಿಸುವನು. ಜೀವಾತ್ಮನು ಬಯಸುವ ಅನಂತ ಸುಖವಾದ ಮುಕ್ತಿ ಪ್ರಾಪ್ತವಾಗಲು ಕಾಲಲಬ್ಬಿಗಿಂತ ಮೊದಲು ಸಮ್ಯಕ್ತ್ವಲಭಿಸಬೇಕು. ಜೀವನದಲ್ಲಿ ಸಮ್ಯಕ್ತ್ವಪ್ರಾಪ್ತಿ ತುಂಬ ಮಹತ್ವದ್ದು. ಸಮ್ಯಕ್ತ್ವವೆಂದರೆ ತತ್ವಪ್ರೀತಿ, ಸಮ್ಯಕ್ತ್ವವೆಂದರೆ ಆಧ್ಯಾತ್ಮದಲ್ಲಿ ಅಭಿರುಚಿ, ಸಮ್ಯಕ್ತ್ವವೆಂದರೆ ಆತ್ಮಶ್ರದ್ದೆ, ಈ ಶ್ರದ್ದೆ ವ್ಯವಹಾರ ಜೀವನದಲ್ಲಿ ಪ್ರಕಟವಾದರೆ, ಅಲೌಕಿಕ ಸುಖ ದೊರೆಯುತ್ತದೆ.
ಜೈನಧರ್ಮ ಇಂದಿಗೂ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಬರಲು ಬಹುಮುಖ್ಯ ಕಾರಣರು ಜಿನಮುನಿಗಳು. ಕಾಲಕಾಲಕ್ಕೆ ಈ ಧರ್ಮದ ಜನಸಾಂದ್ರತೆಯಲ್ಲಿ ಏರಿಳಿತ ಕಂಡರೂ; ಮುನಿಗಳು ಮಾತ್ರ ತಾವು ಆಚರಿಸುವ ಕಾಠಿಣ್ಯ ವ್ರತಗಳನ್ನು ಶಿಥಿಲಗೊಳಿಸಲಿಲ್ಲ. ಆದಿ ಕಾಲಕ್ಕಿದ್ದ ಮುನಿಯ ಸಿದ್ಧಾಂತಗಳೂ ಈಗಲೂ ಅಸ್ಥಿತ್ವದಲ್ಲಿವೆ ಎಂದರೆ ಅದಕ್ಕೆ ಜಿನಮುನಿಗಳೇ ಕಾರಣರಾಗುತ್ತಾರೆ. ದೈಹಿಕ ಮತ್ತು ಮಾನಸಿಕ ದಿಗಂಬರತ್ವವನ್ನು ಪಾಲಿಸುವ ಇವರು ಅತೀ ಕ್ಲಿಷ್ಟವಾದ ನಿಯಮಗಳ ಮೂಲಕ ದೇಹವನ್ನು ದಂಡಿಸುತ್ತಾರೆ. ಅತ್ಯುಚ್ಛ ‘ಕರ್ಮಸಿದ್ಧಾಂತ’ ಪರಿಪಾಲನೆ ಇವರ ಗುರಿ. ‘ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂ’ಗಳಲ್ಲಿ ಮುನಿಗಳು ಸಂಚರಿಸುತ್ತಾ, ಮಳೆಗಾಲದಲ್ಲಿ (ಚಾತುರ್ಮಾಸ) ಒಂದು ಕಡೆ ನೆಲೆ ನಿಲ್ಲುವರು. ಈ ಸಂದರ್ಭದಲ್ಲಿಯೇ ಮುನಿಗಳ ವಸತಿಗಾಗಿ ಕಟ್ಟಡಗಳು ನಿರ್ಮಾಣವಾದವು. ಮುಂದೆ ಇದೇ ವಸತಿ>ಬಸದಿಯಾಯ್ತು. ಬಸದಿಗೆ ಇನ್ನೊಂದು ಹೆಸರು ಚೈತ್ಯ. ಚೈತ್ಯವಾಸಿ ಮುನಿಪಂಗಡವು ಜೈನಧರ್ಮದಲ್ಲುಂಟು. ಚಾತುರ್ಮಾಸ ಸಂದರ್ಭದಲ್ಲಿ ಮುನಿಗಳು ಒಂದೇ ಕಡೆ ನೆಲೆ ನಿಲ್ಲುವುದರಿಂದ ಶ್ರಾವಕರ ಮೇಲೆ ಪ್ರಭಾವ ಬೀರಿ ಅವರು ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಹುರಿದುಂಬಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಪಂಚಾಣುವ್ರತಗಳನ್ನು ಶ್ರಾವಕರಿಗೆ ಬೋಧಿಸುತ್ತ ತಾವೂ ಅನುಸರಿಸುತ್ತಾ ಬಂದಿದ್ದಾರೆ. ಹೀಗೆ ಪಾರಮಾರ್ಥಿಕ ಕಾರ್ಯದ ಜೊತೆಜೊತೆಗೆ ಆಂತರಿಕ ಕಷಾಯಗಳನ್ನು ಕಳೆದುಕೊಂಡು ಸಮಾಧಿ ಮರಣದ ಮೂಲಕ ಆತ್ಮವನ್ನು ಉದ್ಧಾರಗೊಳಿಸಿಕೊಳ್ಳುವ ಮುನಿಗಳ ನೂರಾರು ನಿದರ್ಶನಗಳು ಬೆಳ್ವೊಲನಾಡಿನಲ್ಲಿವೆ. ಮುಖ್ಯವಾಗಿ ಈ ನಾಡಿನಲ್ಲಿ ಆಳ್ವಿಕೆ ಮಾಡಿ ಜೈನಧರ್ಮಕ್ಕೆ ಅಪಾರವಾದ ಕೊಡುಗೆ ನೀಡಿರುವ ರಾಷ್ಟ್ರಕೂಟರ ಕಾಲ ಘಟ್ಟದ ಜೈನ ಮುನಿಗಳ ಕುರಿತು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.
References
ಹಂಜೆ ಸಂಜಯ ಎನ್. (೨೦೧೬). ಗೋಕಾಕ ಪರಿಸರದಲ್ಲಿ ಜೈನಧರ್ಮ. ವಿದ್ಯಾಶ್ರೀ ಪ್ರಕಾಶನ. ಅಳಗವಾಡಿ. ಪು. ಸಂ. ೫೯
ಬ್ರಹ್ಮಪ್ಪ ಜಿ. (೧೯೬೨). ರತ್ನಾಕರನ ಶತಕ ಸಾಹಿತ್ಯ. ರತ್ನಾಕರ ಪ್ರಕಾಶನ. ಮೈಸೂರು. ಪು. ೭೪
ಶಾಮರಾಯ ತ. ಸು. (ಸಂ.). (೨೦೦೮). ಕೇಶಿರಾಜ ವಿರಚಿತ ಶಬ್ದಮಣಿ ದರ್ಪಣ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ. ಮೈಸೂರು. ಪು. ೨೦೭-೨೦೮
ಗಾಯಿ ಜಿ. ಎಸ್. (೧೯೮೮). ಸೌತ್ ಇಂಡಿಯನ್ ಇನ್ಸ್ಕ್ರಿಪ್ಸೆನ್ಸ್. ದಿ ಡೈರೆಕ್ಟರ್ ಜನರಲ್ ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ. ನ್ಯೂ ದೆಹಲಿ. ಸಂ. ೧೭. ಶಾ.ಸಂ. ೧೨
ಗಾಯಿ ಜಿ. ಎಸ್. (೧೯೮೮). ಸೌತ್ ಇಂಡಿಯನ್ ಇನ್ಸ್ಕ್ರಿಪ್ಸೆನ್ಸ್. ದಿ ಡೈರೆಕ್ಟರ್ ಜನರಲ್ ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ. ನ್ಯೂ ದೆಹಲಿ. ಸಂ. ೧೭. ಶಾ.ಸಂ. ೧೨
ಗಾಯಿ ಜಿ. ಎಸ್. (೧೯೮೮). ಸೌತ್ ಇಂಡಿಯನ್ ಇನ್ಸ್ಕ್ರಿಪ್ಸೆನ್ಸ್. ದಿ ಡೈರೆಕ್ಟರ್ ಜನರಲ್ ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ. ನ್ಯೂ ದೆಹಲಿ. ಸಂ. ೧೭. ಶಾ.ಸಂ. ೧೨
ಮಲ್ಲಾಪುರ ಬಿ. ವ್ಹಿ. (೧೯೭೮). ನಯಸೇನ ಮತ್ತು ಅವನ ಕೃತಿಗಳು. ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ. ಪು. ೬೩-೬೪
ಹಂಪ ನಾಗರಾಜಯ್ಯ. (೧೯೯೯). ಯಾಪನೀಯ ಸಂಘ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ. ಪು. ೪೮
ದೇಸಾಯಿ ಪಿ. ಬಿ. ಚಂದ್ರಕವಾಟದ ಯತಿಗಳು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ. ಸಂ. ೫/೨, ಪು. ೨೫. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಹಾಜವಗೋಳ ಧನವಂತ. (೨೦೦೪). ಮುಳಗುಂದ ನಾಡು: ಒಂದು ಅಧ್ಯಯನ. ಮಹಾದೇವಿ ಪ್ರಕಾಶನ. ಧಾರವಾಡ. ಪು. ೨೨೮-೨೨೯
ಕಮಲಾ ಹಂಪನಾ ಮತ್ತು ಶೇಷಗಿರಿ ಆರ್. (ಸಂ.) (೧೯೮೩). ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣಂ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು. ಪು.ಸಂ. ೧೪-೧೯, ಪು. ೫-೬
ಹಂಪ ನಾಗರಾಜಯ್ಯ. (೧೯೯೭). ಚಂದ್ರಕೊಡೆ (ಸಂಶೋಧನ ಲೇಖನಗಳ ಸಂಗ್ರಹ). ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ. ಪು. ೩೪-೩೬
ಕಮಲಾ ಹಂಪನಾ ಮತ್ತು ಶೇಷಗಿರಿ ಆರ್. (ಸಂ.). (೧೯೮೩). ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣಂ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು. ಪು. ೧-೧೫
ಹಾಜವಗೋಳ ಧನವಂತ. (೨೦೦೪). ಮುಳಗುಂದ ನಾಡು: ಒಂದು ಅಧ್ಯಯನ. ಮಹಾದೇವಿ ಪ್ರಕಾಶನ. ಧಾರವಾಡ. ಮುಳುಗುಂದ ಶಾಸನ, ಕ್ರಿ.ಶ. ೯೦೨, ಪು. ೧೯೦-೧೯೪
ಹಂಪ ನಾಗರಾಜಯ್ಯ. (೧೯೯೮). ಕೊಪ್ಪಳ ಶಾಸನಗಳು. ರತ್ನತ್ರಯ ಪ್ರಕಾಶನ. ಮೈಸೂರು.
ಹಾಜವಗೋಳ ಧನವಂತ. (೨೦೦೪). ಮುಳಗುಂದ ನಾಡು: ಒಂದು ಅಧ್ಯಯನ. ಮಹಾದೇವಿ ಪ್ರಕಾಶನ. ಧಾರವಾಡ. ಪು.ಸಂ. ೧೯೦-೧೯೪
ಹಾಜವಗೋಳ ಧನವಂತ. (೨೦೦೪). ಮುಳಗುಂದ ನಾಡು: ಒಂದು ಅಧ್ಯಯನ. ಮಹಾದೇವಿ ಪ್ರಕಾಶನ. ಧಾರವಾಡ. ಪು.ಸಂ. ೧೯೦-೧೯೪
ಗಾಯಿ ಜಿ. ಎಸ್. (೧೯೮೮). ಸೌತ್ ಇಂಡಿಯನ್ ಇನ್ಸ್ಕ್ರಿಪ್ಸೆನ್ಸ್. ದಿ ಡೈರೆಕ್ಟರ್ ಜನರಲ್ ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ. ನ್ಯೂ ದೆಹಲಿ. ಸಂ. ೧೧ ಶಾ.ಸಂ. ೩೪
ಹಾಜವಗೋಳ ಧನವಂತ. (೨೦೦೪). ಮುಳಗುಂದ ನಾಡು: ಒಂದು ಅಧ್ಯಯನ. ಮಹಾದೇವಿ ಪ್ರಕಾಶನ. ಧಾರವಾಡ. ಪು.ಸಂ. ೨೩೧
ಕಮಲಾ ಹಂಪನಾ ಮತ್ತು ಶೇಷಗಿರಿ ಆರ್. (ಸಂ.). (೧೯೮೩). ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣಂ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು. ಪದ್ಯ-೧೭, ಪು. ೫
ಗಾಯಿ ಜಿ. ಎಸ್. (೧೯೮೮). ಸೌತ್ ಇಂಡಿಯನ್ ಇನ್ಸ್ಕ್ರಿಪ್ಸೆನ್ಸ್. ದಿ ಡೈರೆಕ್ಟರ್ ಜನರಲ್ ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ. ನ್ಯೂ ದೆಹಲಿ. ಸಂ. ೧೧ ಶಾ.ಸಂ. ೩೮
ಗೋಗಿ ಹನುಮಾಕ್ಷಿ (ಸಂ.). (೨೦೧೫). ಲಕ್ಷ್ಮೇಶ್ವರ: ಸಾಂಸ್ಕೃತಿಕ ಅಧ್ಯಯನ. ಮಹಿಳಾ ಸಾಹಿತ್ಯಿಕಾ, ಹುಬ್ಬಳ್ಳಿ. ಶಾ.ಸಂ. ೧೭. ಪು. ೨೮-೩೦
ಗೋಗಿ ಹನುಮಾಕ್ಷಿ (ಸಂ.). (೨೦೧೫). ಲಕ್ಷ್ಮೇಶ್ವರ: ಸಾಂಸ್ಕೃತಿಕ ಅಧ್ಯಯನ. ಮಹಿಳಾ ಸಾಹಿತ್ಯಿಕಾ, ಹುಬ್ಬಳ್ಳಿ. ಪು.ಸಂ. ೨೯
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.