ಚಲನಚಿತ್ರ ವಿತರಣೆಗೆ ಹೊಸ ವೇದಿಕೆಯಾಗಿ ಒಟಿಟಿ: ಜನಪ್ರಿಯ ಒಟಿಟಿ ವೇದಿಕೆಗಳ ವಿಶ್ಲೇಷಣೆ.

Authors

  • Anilkumar T.
  • Vahini Arvind

Keywords:

ಒಟಿಟಿ, ಚಲನಚಿತ್ರ ತಯಾರಕರು, ಚಲನಚಿತ್ರ ವಿತರಕರು, ವೀಕ್ಷಕರ ಮಾದರಿ, ಚಲನಚಿತ್ರ

Abstract

ಕಳೆದ ಮೂರು ವರ್ಷಗಳಿಂದ ಒಟಿಟಿ ಬಳಕೆದಾರರಿಗೆ ನೇರವಾಗಿ ಮನರಂಜನೆಯನ್ನು ಒದಗಿಸುವಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ.  ಈ ವೇದಿಕೆಯು ಪ್ರಮುಖವಾಗಿ ಚಲನಚಿತ್ರ ತಯಾರಕರಿಗೆ ಸ್ಥಳೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಚಲನಚಿತ್ರಗಳನ್ನು ವಿತರಿಸಲು ಅವಕಾಶವನ್ನು ಒದಗಿಸುತ್ತಿದೆ. ಚಲನಚಿತ್ರ ತಯಾರಕರು, ವಿತರಕರು ಮತ್ತು ನಿರ್ಮಾಣ ಸಂಸ್ಥೆಗಳು ಒಟಿಟಿ ವೇದಿಕೆಗಳ ಮೂಲಕ ಚಲನಚಿತ್ರಗಳನ್ನು ಸ್ವಯಂ ಬಿಡುಗಡೆ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷದಿಂದ ಈ ಒಟಿಟಿ ವೇದಿಕೆಗಳ ಆಧಾರಿತ ಮನರಂಜನೆ ನಿಧಾನವಾಗಿ ಶ್ರೀಮಂತರು ಮತ್ತು ಮಧ್ಯಮ ವರ್ಗದವರೂ ಒಳಗೊಂಡಂತೆ ಬಹುಪಾಲು ಎಲ್ಲಾ ಕುಟುಂಬಗಳನ್ನು ಸಹ ಆವರಿಸುತ್ತಿದೆ.  ಒಟಿಟಿ ಎಂದರೆ ‘ಓವರ್-ದಿ-ಟಾಪ್’ ವೇದಿಕೆ ಎಂದರ್ಥ.  ಇನ್ನೂ ಸರಳವಾಗಿ ಹೇಳಬೇಕಾದರೆ ಬೇಡಿಕೆಯ ಮೇರೆಗೆ ವೀಡಿಯೋ ಸೇವೆ ಒದಗಿಸುವ ವೇದಿಕೆಯಾಗಿದೆ. ಇದಕ್ಕಾಗಿ ಒಂದು ಸಣ್ಣ ಪ್ರಮಾಣದ ಚಂದಾದಾರಿಕೆ / ವಂತಿಕೆಯನ್ನು ಪಾವತಿಸಿ ಮೊಬೈಲ್ ಪೋನ್, ಟ್ಯಾಬ್, ಲ್ಯಾಪ್ ಟಾಪ್, ಕಂಪ್ಯೂಟರ್ ಅಥವಾ ಟಿ. ವಿ. ಯಲ್ಲಿ ಇಚ್ಚೆಗನುಸಾರವಾಗಿ ಚಲನಚಿತ್ರ ಹಾಗೂ ಇತರೆ ವಿಷಯ ವಸ್ತುವಿರುವ ಕಾರ್ಯಕ್ರಮವನ್ನು ವೀಕ್ಷಿಸಬಹುದು.  ಭಾರತದಲ್ಲಿ ಮೊಟ್ಟಮೊದಲ ಬಾರಿಗೆ 2018 ರಲ್ಲಿ ಆರಂಭವಾದ ಒಟಿಟಿ ಎಂದರೆ ‘ರಿಲಯನ್ಸ್ ಎಂಟರ್ ಟೈನ್ಮೆಂಟ್’ ಪರಿಚಯಿಸಿದ ‘ಬಿಗ್ ಪ್ಲಿಕ್ಸ್’.  ಆದರೆ ಈಗ ನಮ್ಮ ದೇಶದಲ್ಲಿ ಸರಿಸುಮಾರು 40 ಕ್ಕೂ ಅಧಿಕ ಸಂಖ್ಯೆಯ ಒಟಿಟಿ ವೇದಿಕೆಗಳು ಲಭ್ಯವಿವೆ.  ಒಟ್ಟಾರೆ ಒಟಿಟಿ ವೇದಿಕೆಗಳು ಚಲನಚಿತ್ರ ವೀಕ್ಷಣೆಯನ್ನು ಅನುಕೂಲವಾಗಿಯೂ ಹಾಗೂ ಕೈಗೆಟಕುವಂತೆಯೂ ಮಾಡಿವೆ.  ಕೋವಿಡ್ ಗೂ ಮುನ್ನ ಒಬ್ಬ ಗ್ರಾಹಕ ಒಟಿಟಿ ವೇದಿಕೆಯ ಮೇಲೆ ಪ್ರತಿನಿತ್ಯ ಸರಾಸರಿ 35 ನಿಮಿಷಗಳನ್ನು ವ್ಯಯಿಸುತ್ತಿದ್ದ.  ಪ್ರಸ್ತುತ ಆ ಸರಾಸರಿ ಸಮಯ ಈಗ ಎರಡು ಗಂಟೆಗೆ ಏರಿದೆ.  ಪ್ರಸ್ತುತ ಈ ಅಧ್ಯಯನವು ಭಾರತದ ಜನಪ್ರಿಯ ಒಟಿಟಿ ವೇದಿಕೆಗಳ ಪಾತ್ರವನ್ನು ಮತ್ತು ಅವುಗಳು ಪ್ರಾದೇಶಿಕ ಚಲನಚಿತ್ರಗಳನ್ನು ಹೇಗೆ ಯಶಸ್ವಿಗೊಳಿಸುತ್ತಿವೆ ಎಂಬುದನ್ನು ಕಂಡುಹಿಡಿಯಲು ಬಯಸುತ್ತದೆ.  ಈ ಅಧ್ಯಯನವು ನಿರ್ದಿಷ್ಟವಾಗಿ ವಿಷಯ ರಚನೆಯ ತಂತ್ರಗಳು, ವಿತರಣಾ ತಂತ್ರಗಳು ಮತ್ತು ಚಲನಚಿತ್ರಗಳು ಯಶಸ್ವಿಯಾಗಲು ಬಳಸುವ ಪ್ರಚಾರ ವಿಧಾನಗಳನ್ನು ತನಿಖೆ ಮಾಡುತ್ತದೆ. ಈ ಅಧ್ಯಯನದ ಉದ್ದೇಶಗಳೆಂದರೆ, ಭಾರತದ ಜನಪ್ರಿಯ ಒಟಿಟಿ ವೇದಿಕೆಗಳನ್ನು ತಿಳಿಯುವುದು, ಚಲನಚಿತ್ರ ವಿತರಣೆಯಲ್ಲಿ ಒಟಿಟಿ ವೇದಿಕೆಗಳ ಪಾತ್ರವನ್ನು ವಿಶ್ಲೇಷಿಸುವುದು, ವಿತರಕರು ಮತ್ತು ಚಲನಚಿತ್ರ ತಯಾರಕರು ಸಿನಿಮಾ ವಿತರಣೆಗೆ ಒಟಿಟಿ ವೇದಿಕೆಯನ್ನು ಹೇಗೆ ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಯುವುದಾಗಿದೆ. ಪ್ರಸ್ತುತ ಈ ಅಧ್ಯಯನವು ಉದ್ದೇಶಗಳನ್ನು ಪೂರೈಸಲು ಕಡತ ವಿಶ್ಲೇಷಣೆ ಮಾಡಲಾಗುವುದು. ಆಯಾ ಒಟಿಟಿ ವೇದಿಕೆಗಳ ವೆಬ್ ಪುಟಗಳಲ್ಲಿ ಮಾಹಿತಿಯನ್ನು ಕಲೆಹಾಕಿ ನಿರ್ದಿಷ್ಟ ಮಾಪಕಗಳ ಮೂಲಕ ವಸ್ತು ವಿಷಯಗಳನ್ನು ವಿಶ್ಲೇಷಿಸಲಾಗುವುದು. ಒಟ್ಟಾರೆಯಾಗಿ ಈ ಸಂಶೋಧನೆಯು ಜನಪ್ರಿಯ ಒಟಿಟಿ ವೇದಿಕೆಗಳು ಮತ್ತು ಚಲನಚಿತ್ರ ವಿತರಣೆಯಲ್ಲಿ ಅವುಗಳ ಕಾರ್ಯವೈಖರಿಯನ್ನು ತಿಳಿಸುತ್ತದೆ.

References

Jain, M. K. (2021). The Rise of OTT Platform: Changing Consumer Preferences. EPRA International Journal of Multidisciplinary Research (IJMR), 7(6), 257-261.

Park, E. A. (2018). Business strategies of Korean TV players in the age of over-the-top (OTT) video service. International Journal of Communication, 12, 22.

Fanea-Ivanovici, M., & Baber, H. (2021). Crowdfunding model for financing movies and web series. International Journal of Innovation Studies, 5(2), 99-105.

Kumari, T. (2020). A study on growth of over the top (OTT) video services in India. International Journal of Latest Research in Humanities and Social Science (IJLRHSS), 3(9), 68-73.

Bose, N. (2022). India’s online streaming revolution: Global over-the-top (OTT) platforms, film spectatorship and the ecosystem of Indian cinemas. World Cinema On Demand: Global Film Cultures in the Era of Online Distribution, 125.

Lobato, R., & Sarkar, P. (2019). The OTT TV box as a diasporic media platform. Media Industries Journal, 6(2).

Patel, M. K., Khadia, R., & Awasya, G. (2020). A Study: OTT Viewership in “Lockdown” and Viewer’s Dynamic Watching Experience. International Journal on Transformations of Media, Journalism & Mass Communication, 5(2), 10-22.

Changsong, W., Kerry, L., & Marta, R. F. (2021). Film distribution by video streaming platforms across Southeast Asia during COVID-19. Media, Culture & Society, 43(8), 1542-1552.

Awasya, G., & Patel, M. K. OTT Viewership and Pandemic: A study on New Trends of online video content and cinema hall footfalls.

Sontakke, K. S. (2021). Trends in OTT Platforms Usage During COVID-19 Lockdown in India. Journal of Scientific Research, 65(8).

Parikh, N. (2020). The emergence of OTT platforms during the pandemic and its future scope.

Downloads

Published

05.02.2023

How to Cite

Anilkumar T., & Vahini Arvind. (2023). ಚಲನಚಿತ್ರ ವಿತರಣೆಗೆ ಹೊಸ ವೇದಿಕೆಯಾಗಿ ಒಟಿಟಿ: ಜನಪ್ರಿಯ ಒಟಿಟಿ ವೇದಿಕೆಗಳ ವಿಶ್ಲೇಷಣೆ. AKSHARASURYA, 2(02), 29 to 33. Retrieved from http://aksharasurya.com/index.php/latest/article/view/49

Issue

Section

Article