ನಾಗಚಂದ್ರನ ಪಂಪರಾಮಾಯಣದಲ್ಲಿ ‘ಲಕ್ಷ್ಮಣ’
Keywords:
ಪಉಮಚರಿಯ, ವಜ್ರಾವರ್ತ, ಸಾಗರಾವರ್ತ, ಪ್ರತಿವಾಸುದೇವ, ಸೂರ್ಯಹಾಸ, ಸಿದ್ಧಶೈಲ, ಗೊಂಡರುAbstract
ಕಾವ್ಯದ ಪಾತ್ರಗಳನ್ನು ಸಮಾಜಮುಖಿಯಾಗಿಸುವುದು ಕವಿಯ ಸಾಮಾಜಿಕ ಕಾಳಜಿಯ ಪ್ರತೀಕವಾಗಿದೆ. ಇಂತಹ ಪಲ್ಲಟಾತ್ಮಕ ಚಿಂತನೆಯನ್ನು ಭಾರತದ ವಿವಿಧ ಬುಡಕಟ್ಟುಗಳ ರಾಮಾಯಣ-ಮಹಾಭಾರತದ ಕಥೆಗಳಲ್ಲಿ ಕಾಣುವಂತೆ ನಾಗಚಂದ್ರನ ರಾಮಚಂದ್ರಚರಿತ ಪುರಾಣಂನಲ್ಲೂ ಕಾಣಬಹುದಾಗಿದೆ. ನಾಗಚಂದ್ರನ ಮಾತುಗಾರಿಕೆ, ಮನುಷ್ಯ ಸ್ವಭಾವದ ಪರಿಚಯ, ಶ್ರೇಷ್ಠ ರೀತಿಯ ಪಾತ್ರ ಚಿತ್ರಣ ಇವುಗಳು ಉನ್ನತ ಮಟ್ಟದವು. ಈ ಕಾವ್ಯವು ರಾಮಕೇಂದ್ರಿತ ಕಥನವೇ ಆದರೂ ಪೂರ್ಣಕಾವ್ಯವನ್ನು ಲಕ್ಷಿಸಿದಾಗ ಲಕ್ಷ್ಮಣನು ಅನುನಾಯಕ ಅಥವಾ ಉಪನಾಯಕ ಎನ್ನುವುದಕ್ಕಿಂತ ‘ನಾಯಕನೇ ಹೌದು’ ಎಂಬಂತೆ ಕಾವ್ಯಾಭ್ಯಾಸಕರಿಗೆ ಕಾಣುತ್ತಾನೆ. ಕಾವ್ಯದ ಉದ್ದಕ್ಕೂ ಕಾಣುವ ಕಾರ್ಯೋತ್ಸುಕತೆಯೂ ಪೌರುಷವು ಲಕ್ಷ್ಮಣನದು. ಲಕ್ಷ್ಮಣನು ಕಥಾನಾಯಕನಲ್ಲ. ಆದರೆ ಕಥೆಯ ಉದ್ದಕ್ಕೂ ಪಾತ್ರವಹಿಸಿದ್ದಾನೆ. ರಾಮನು ಪಿತೃವಚನ ಪರಿಪಾಲಕನೆನಿಸಿಕೊಂಡರೆ ನಾಗಚಂದ್ರನ ಲಕ್ಷ್ಮಣನು ಮಾತೃ ವಚನ ಪರಿಪಾಲಕ ಎನಿಸಿಕೊಳ್ಳುವನು. ಸೀತೆಯಲ್ಲಿ ಮಾತೆಯನ್ನು ಕಂಡ ಲಕ್ಷ್ಮಣನು ಆಕೆಯನ್ನು ಅಡವಿಗಟ್ಟುವ ರಾಮನ ನಿಷ್ಕುರುಣೆಯ ನಿರ್ಧಾರವನ್ನು ಪ್ರತಿರೋಧಿಸುವ ಮೂಲಕ ಅಣ್ಣನ ಮಾತಿನ ಅಂಧಾನುಪಾಲಕನಲ್ಲ ವಿವೇಚನೆಯುಳ್ಳವನು ಎಂಬಂತೆ ನಡೆದುಕೊಂಡನು. ವನವಾಸದುದ್ದಕ್ಕೂ ಯುದ್ಧ ಸನ್ನಿವೇಶಗಳು ನಿಯಮಿತವಾಗಿ ಅವರ್ತವಾಗಿವೆ. ಇಲ್ಲಿ ಲಕ್ಷ್ಮಣನ ಕ್ಷಾತ್ರತನ ಪ್ರತಾಪವು ರಾಮನನ್ನು ನೇಪಥ್ಯಕ್ಕೆ ಸರಿಸುವಂತಿವೆ. ರಾಮನ ಜೀವನದುದ್ದಕ್ಕೂ ಲಕ್ಷ್ಮಣನು ಅತಿ ಸಮೀಪಾವರ್ತಿಯಾಗಿದ್ದನು. ಅದು ರಾಮನ ಯುದ್ಧ, ವಿವಾಹ, ವನವಾಸ, ವಿಜೃಂಭಣೆ ಮಾತ್ರವಲ್ಲದೆ ವಿರಹ-ವಿಯೋಗಗಳ ಸನ್ನಿವೇಶದಲ್ಲೂ ಲಕ್ಷ್ಮಣನೇ ಜೊತೆಗಿದ್ದನು. ಆದ್ದರಿಂದ ಲಕ್ಷ್ಮಣನಿಲ್ಲದ ಶೂನ್ಯತೆಯನ್ನು ಸಹಿಸಕೊಳ್ಳಲಾಗದೆ ರಾಮನು ಚಿತ್ತಭ್ರಮಣೆಗೊಂಡನು. ಒಟ್ಟಾರೆ, ವಂಶಗೌರವ ರಕ್ಷಿಸುವಲ್ಲಿ, ಭ್ರಾತೃತ್ವದಲ್ಲಿ ಹಾಗೂ ಕ್ಷಾತ್ರಗುಣದಲ್ಲಿ ಲಕ್ಷ್ಮಣನು ಒಂದು ಮಾದರಿಯೇ ಆಗಿದ್ದಾನೆ. ವೀರಾವೇಶವು ಸದಾ ಶಿಖರ ಮುಖಿಯಾಗಿರುವಂತೆ ಸಂತಾಪ-ಸಮಾದಾನ ಮತ್ತು ಪಾಪಪ್ರಜ್ಞೆಗಳು ಸಮಪಾತಳಿಯಲ್ಲಿ ಅಭಿವ್ಯಕ್ತಗೊಂಡಿವೆ. ಆದ್ದರಿಂದ, ನಾಗಚಂದ್ರನ ಪಂಪರಾಮಾಯಣವು ಜೈನ ಪರಿಕಲ್ಪನೆಯಂತೆ ‘ವಾಸುದೇವ-ಪ್ರತಿವಾಸುದೇವ’ ಕೇಂದ್ರಿತವಾಗಿರುವುದರಿಂದ ಇದು ರಾಮ-ಲಕ್ಷ್ಮಣರ ನಾಯಕತ್ವದ, ರಾವಣನ ಪ್ರತಿನಾಯಕತ್ವದ ಗುಣಾವಗುಣಗಳನ್ನು ಮಥಿಸುವ ಕಥೆಯಂತೆ ಕಾಣುತ್ತದೆ. ಇದನ್ನು ಕಥೆಯ ಸನ್ನಿವೇಶಗಳು ಪುರಾವೆಗೊಳಿಸುತ್ತವೆ.
References
ಹಿರೇಮಠ ಆರ್. ಸಿ. (1975). ನಾಗಚಂದ್ರ ವಿರಚಿತ ರಾಮಚಂದ್ರ ಚರಿತ ಪುರಾಣಂ. ಭಾರತೀಯ ಜ್ಞಾನಪೀಠ ಪ್ರಕಾಶನ. ನವದೆಹಲಿ.
ಶೆಟ್ಟಿ ಎಸ್. ಡಿ. (2017). ಕವಿ ನಾಗಚಂದ್ರ ಮತ್ತು ಆತನ ಕೃತಿಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ನಾರಾಯಣ ಪಿ. ವಿ. (2013). ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ-4: ಚಂಪೂ ಕವಿಗಳು. ಸ್ವಪ್ನಬುಕ್ ಹೌಸ್. ಬೆಂಗಳೂರು.
ನಾಗರಾಜಯ್ಯ ಹಂಪ (ಸಂ). (1985) ದಿವ್ಯಧ್ವನಿ. ರವಿ ಪ್ರಿಂಟರ್ಸ್. ಬೆಂಗಳೂರು.
ಶೇಷಗಿರಿರಾವ್ ಡಿ. ವಿ. (1974). ಕವಿ ನಾಗಚಂದ್ರ. ಕನ್ನಡ ಕಿವಿ-ಕೃತಿಮಾಲೆ, ಸಮಾಜ ಪುಸ್ತಕಾಲಯ ಪ್ರಕಟಣೆ. ಧಾರವಾಡ.
ಕನ್ನಡ ಸಾಹಿತ್ಯ ಪರಿಷತ್ತು. (1921). ಪಂಪ ರಾಮಾಯಣ ಎಂಬ ರಾಮಚಂದ್ರಚರಿತ ಪುರಾಣಂ. ಕನ್ನಡ ಸಾಹಿತ್ಯ ಪರಿಷತ್. ಬೆಂಗಳೂರು.
ರೈಸ್ ಬಿ. ಎಲ್. (1892). ಅಭಿನವಪಂಪನೆಂಬ ನಾಗಚಂದ್ರ ಕೃತ ರಾಮಚಂದ್ರಚರಿತ ಪುರಾಣಂ. ಮೈಸೂರು ಗವರ್ನಮೆಂಟ್ ಸೆಂಟ್ರಲ್ ಪ್ರೆಸ್. ಬೆಂಗಳೂರು.
ಶ್ರೀನಿವಾಸ ಹಾವನೂರ (ಸಂ). (2007). ಪಂಪ ರಾಮಾಯಣ ಗದ್ಯ ಕಥಾನಕ. ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ. ಸೋಮೇಶ್ವರ, ಉಚಿಲ.
ಮುಗಳಿ ರಂ. ಶ್ರೀ. (2014). ಕನ್ನಡ ಸಾಹಿತ್ಯ ಚರಿತ್ರೆ. ಗೀತಾ ಬುಕ್ ಹೌಸ್. ಮೈಸೂರು.
ಶಿವರುದ್ರಪ್ಪ ಜಿ. ಎಸ್. (ಸಂ). (1975). ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ: ಸಂಪುಟ-2. ಬೆಂಗಳೂರು ವಿಶ್ವವಿದ್ಯಾಲಯ. ಬೆಂಗಳೂರು.
ಮಂಜುನಾಥ ಬೇವಿನಕಟ್ಟಿ (ಸಂ). (2015). ರಾಮಾಯಣ: ಮರುದರ್ಶನ: ಶಬ್ದಪಾರಮಾರ್ಗಮಶಕ್ಯಂ. ಪ್ರಸಾರಾಂಗ, ದಾವಣಗೆರೆ ವಿಶ್ವವಿದ್ಯಾಲಯ. ದಾವಣಗೆರೆ.
Singh K. S. & Birendra Nath Datta. (1993). Ramakata in Tribal and Folk Traditions of India. Anthropological Survey of India. Calcutta.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.