ಬೆಸಗರಹಳ್ಳಿ ರಾಮಣ್ಣ ಅವರ ‘ಬೇಲ’ ಕಥೆಯಲ್ಲಿನ ಬಹುತ್ವದ ಬೆರಗು
Keywords:
ಪಾರುಪತ್ಯ, ಜನಾಂಗೀಯ ದ್ವೇಷ, ಕೋಮುಗಲಭೆ, ಧರ್ಮಸಂಘರ್ಷ, ಸ್ವಾತಂತ್ರ್ಯಹರಣ, ಅಸಹಿಷ್ಣುತೆ, ಪೂರ್ಣದೃಷ್ಠಿAbstract
ಕನ್ನಡ ಕಥಾ ಜಗತ್ತಿನಲ್ಲಿ ಬೆಸಗರಹಳ್ಳಿ ರಾಮಣ್ಣನವರು ಮೂಡಿಸಿದ ಛಾಪು ಓದುಗ ಲೋಕಕ್ಕೆ ಇಂದಿಗೂ ಆಪ್ತವಾಗಿಯೇ ಇದೆ. ತಮ್ಮ ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಸಾಮರಸ್ಯವನ್ನು ಕಾಯ್ದುಕೊಂಡು ಅವರು ಮಾಡಿದ ಸಾಹಿತ್ಯ ಕೃಷಿ ವಿಶೇಷವಾದದ್ದು. ತಮ್ಮ ಬರಹಗಳಲ್ಲಿ ಮೂಡಿ ಬಂದಿರುವ ನಿರಾಡಂಬರ ಹಾಗೂ ಸಹಜತೆ ತಮ್ಮ ಬರಹದ ಶಕ್ತಿಯನ್ನು ಹೆಚ್ಚಿಸಿದೆ. ಒಬ್ಬ ಓದುಗನಿಗೆ ಕತೆಗಾರ, ಕಾದಂಬರಿಕಾರ ಕೊಡಮಾಡುವ ಭಾವನಾತ್ಮಕ ಸಾಂತ್ವನ ಇವರ ರಚನೆಗಳಲ್ಲಿ ಅಗಾಧವಾದ ಇಳುವರಿಯನ್ನು ನೀಡಿದೆಯೆಂದರೆ ತಪ್ಪಾಗಲಾರದು. ಇವರು ಸಮಾಜವನ್ನು ಕಂಡ, ಕಟ್ಟಿಕೊಟ್ಟ ನೋಟಕ್ರಮವೇ ಭಿನ್ನವಾದದ್ದು. ಸಾಮಾಜಿಕವಾದ ಹಾವು ಏಣಿಯಾಟದಲ್ಲಿ ಜಮೀನ್ದಾರಿ ಪದ್ದತಿ ಹಾಗೂ ವೇಶ್ಯಾವೃತ್ತಿಯ ಕರಾಳ ಮುಖವನ್ನು ‘ಬೇಲ’ ಕತೆಯಲ್ಲಿ ಅನಾವರಣಗೊಳಿಸಿದ್ದಾರೆ. ವೃತ್ತಿಯಲ್ಲಿ ನರ್ತಕಿಯಾದ ಸ್ಪುರದ್ರೂಪಿ ಹೆಣ್ಣು ಬೇಲ. ತನ್ನ ಮೈ-ಮಾಟದಿಂದಲೇ ಎಂಥವರನ್ನೂ ಸೆಳೆವ ಮಾಂತ್ರಿಕಶಕ್ತಿಯಿದ್ದವಳು. ಆದರವಳು ಈ ಕಥೆಗಾರನನ್ನು ಮೆಚ್ಚಿ ಹಚ್ಚಿಕೊಳ್ಳವ ಬಗೆ ಅವಳ ಅಂತರಂಗವನ್ನು ಬಹಿರಂಗಗೊಳಿಸುತ್ತದೆ. ಸದಾ ಸಮಾನತೆಗಾಗಿ ತುಡಿವ ಕತೆಗಾರನಿಗೆ ಅದೇ ಗುಣದ ಬೇಲ ಶರಣಾಗಿ ತನ್ನ ಕಾಯಕದ ಮೂಲಕವೇ ತನ್ನದೇ ಗಂಧರ್ವ ಜಾತಿಯಲ್ಲಿ ತನ್ನಂತೆ ಸ್ವಾವಲಂಬಿಯಾಗಿ ಬದುಕಲಾಗದೆ ಹವಣಿಸುತ್ತಿರುವ, ಅಸಹಾಯಕತೆಯ ಬಲೆಯಲ್ಲಿ ಸಿಲುಕಿರುವ ಅಸಂಖ್ಯ ಅಬಲೆಯರ ಪರವಾದ ದನಿಯಾಗಿ ನಿಲ್ಲುವ ಪ್ರಯತ್ನ ಹಾಗೂ ವ್ಯವಸ್ಥೆಯ ಬಗೆಗಿನ ಪ್ರತಿರೋಧ ಅವಳಲ್ಲಿನ ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ. ವೈದ್ಯ ವೃತ್ತಿಯಲ್ಲಿ ಗ್ರಾಮೀಣ ಶ್ರಮಿಕವರ್ಗಕ್ಕೆ ಸೇವೆ ಸಲ್ಲಿಸಿ ಸಾರ್ಥಕತೆಯನ್ನು ಮೆರೆದು, ಕೇವಲ ಕಥೆಯ ದೃಷ್ಟಿಯಿಂದಲ್ಲದೆ ನಿಜ ಬದುಕಿನಲ್ಲೂ ಸಾಮಾಜಿಕ ಬದಲಾವಣೆಗಾಗಿ ತಮ್ಮ ಗುರಿಗಳನ್ನು ನಿಶ್ಚಲವಾಗಿರಿಸಿಕೊಂಡು ಬದುಕಿದ ನಿಜ ಜೀವಿ ಬೆಸಗರಹಳ್ಳಿ ರಾಮಣ್ಣನವರು.
References
ಬೆಸಗರಹಳ್ಳಿ ರಾಮಣ್ಣ. (2015). ಬೆಸಗರಹಳ್ಳಿ ರಾಮಣ್ಣ ಅವರ ಸಮಗ್ರ ಕಥೆಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ರವಿಕಾಂತೇಗೌಡ ಬಿ. ಆರ್. (2023). ಬೆಸಗರಹಳ್ಳಿ ರಾಮಣ್ಣನವರ ಆಯ್ದ ಕಥೆಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಅಮೂರ ಜಿ. ಎಸ್. (1981). ಸಮಕಾಲೀನ ಕಥೆ ಕಾದಂಬರಿ: ಹೊಸ ಪ್ರಯೋಗಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಗಿರಡ್ಡಿ ಗೋವಿಂದರಾಜ. (1965). ಸಣ್ಣಕಥೆಯ ಹೊಸ ಒಲವುಗಳು. ಸಂಕ್ರಮಣ ಪ್ರಕಾಶನ. ಧಾರವಾಡ.
ನಾಯಕ ಜಿ. ಹೆಚ್. (1982). ಕನ್ನಡ ಸಣ್ಣ ಕಥೆಗಳು. ನ್ಯಾಷನಲ್ ಬುಕ್ ಟ್ರಸ್ಟ್. ನವದೆಹಲಿ.
ರಾಜೇಂದ್ರ ಚೆನ್ನಿ. (1987). ಅಧ್ಯಯನ. ಪರಿಸರ ಸಾಹಿತ್ಯ ಪ್ರಕಾಶನ. ಶಿವಮೊಗ್ಗ.
ಕೋದಂಡರಾಮ ಎನ್. ಕೆ. (1996). ಕನ್ನಡ ಕಥಾ ಸಾಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ. ಗಾಯತ್ರಿ ಸ್ಮಾರಕ ಗ್ರಂಥಮಾಲೆ. ಮೈಸೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.