ರಂಗಕಲಾವಿದೆಯರು ಮತ್ತು ಚಳವಳಿಗಳು

(ಮೈಸೂರು ಸಂಸ್ಥಾನ ಮತ್ತು ಅಖಂಡ ಕರ್ನಾಟಕವನ್ನು ಅನುಲಕ್ಷಿಸಿ)

Authors

  • ರವಿ ಎನ್. ಸಿ. ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ.

Keywords:

ಅನಿವರ್ತತೆ, ಕಲಾದೃಷ್ಟಿ, ಹೆಜ್ಜೆಗುರುತು, ಹೊಟ್ಟೆಪಾಡು, ಸ್ವಾತಂತ್ರ್ಯಚಳವಳಿ, ಪ್ರಭುತ್ವ, ಅಸ್ತಿತ್ವ, ಕ್ರಿಯಾತ್ಮಕ, ಏಕೀಕರಣ, ದೇಶಭಕ್ತಿ

Abstract

ಅನೇಕ ರಂಗಕಲಾವಿದೆಯರು ಬದುಕಿನ ಅನಿವಾರ್ಯತೆಗಾಗಿ, ಮತ್ತೆ ಕೆಲವರು ಅಭಿವ್ಯಕ್ತಿಯ ತುಡಿತದಿಂದಾಗಿ ರಂಗಭೂಮಿಗೆ ಪ್ರವೇಶಿಸಿದವರು. ಕಲಾದೃಷ್ಟಿಯಿಂದ ತಮ್ಮ ವೃತ್ತಿಯಲ್ಲಿ ಅಮೋಘವಾದದ್ದನ್ನು ಸಾಧಿಸಿದ್ದಾರೆ. ಕೆಲವರು ಬದುಕಿನ ಅನಿವಾರ್ಯತೆಯಿಂದ ಉಪಜೀವನಕ್ಕಾಗಿ ಎಂಬಂತೆ ಇದನ್ನು ಆರಂಭದಲ್ಲಿ ಆಶ್ರಯಿಸಬೇಕೆಂಬ ಹಂಬಲದಿಂದ ಬಂದವರು ಕೂಡ ವೃತ್ತಿ ರಂಗಭೂಮಿಯ ಹಿನ್ನೆಲೆಯಲ್ಲಿ ಇವರು ಸಾಧಿಸಿದ್ದ ಕಲಾಸಾದನೆ ಬೆಟ್ಟದಷ್ಟು ಎಂಬುವುದನ್ನು ಮರೆಯಬಾರದು. ಅನೇಕರು ಬಣ್ಣ ಬಳಿದು ಕಲೆಯೆಂಬ ಸಾಧನಾ ಪಥದಲ್ಲಿ ಸಿದ್ಧಿ ಕಾಣಬೇಕೆಂಬ ಅಪೇಕ್ಷೆಯಿಲ್ಲದೆ ರಂಗಭೂಮಿಗೆ ಪ್ರವೇಶಿಸಿದರೂ ಕೂಡ ನಂತರ ತಮ್ಮ ಬದುಕಿನ ದಡ ಮುಟ್ಟಲು ತಡಕಾಡಿದರೂ ಕೂಡ ಅವರಿಗರಿವಿಲ್ಲದೆ ಕಲಾಲೋಕದಲ್ಲಿ, ತಾವಾರಿಸಿಕೊಂಡ ಬಣ್ಣದ ಲೋಕದ ಕಲಾ ಪ್ರಪಂಚದಲ್ಲಿ ಗುರುತರವಾದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಅನೇಕ ರಂಗಕಲಾವಿದೆಯರಿಗೆ ರಂಗಜೀವನ ಅದು ತಮಗೆ ಬದುಕಿನ ಒಂದು ಭಾಗ ಎಂದು ಭಾವಿಸಿದ್ದರು ಅನೇಕ ಸಂದರ್ಭಗಳಲ್ಲಿ ವೃತ್ತಿನಾಟಕ ಕಂಪನಿಗಳಲ್ಲಿ ಅಧ್ಯಯನದ ಇತಿಹಾಸದಲ್ಲಿ ಕಲಾದೃಷ್ಟಿಯಿಂದ ರಂಗಕಲಾವಿದೆಯರೇ ಕಂಪನಿಯಾಗಿ, ಅಥವಾ ಕಂಪನಿಯೇ ರಂಗಕಲಾವಿದೆಯರಾಗಿ ಕಾಣಿಸಿಕೊಂಡಿರುವುದುಂಟು. ಯಾಂತ್ರಿಕ ಜಗತ್ತಿನಲ್ಲಿ ಬೇಸತ್ತ ಮನುಷ್ಯ, ರಂಗಭೂಮಿಯ ಕಲಾ ಪ್ರಕಾರದಲ್ಲಿ ನೂತನತೆಯನ್ನು ಬಯಸಿದಾಗ ಆ ಕಾರಣಕ್ಕಾಗಿಯೇ ಪೌರಾಣಿಕ, ಐತಿಹಾಸಿಕ, ಧಾರ್ಮಿಕ, ಭಕ್ತಿಪ್ರಧಾನವಾದ, ಸಾಮಾಜಿಕ ವಸ್ತುಗಳುಳ್ಳ ಹೊಸ ಅಲೆಯ ನಾಟಕಗಳಲ್ಲಿ ರಂಗಕಲಾವಿದೆಯರು ಅಭಿನಯಿಸಿ ನೂತನತೆಯನ್ನು ಸಾಧಿಸಿದ್ದಾರೆ.

References

ಗುಡಿಹಳ್ಳಿ ನಾಗರಾಜ. (2019). ಜನಪರ ರಂಗಭೂಮಿ. ಗೀತಾಂಜಲಿ ಪುಸ್ತಕ ಪ್ರಕಾಶನ. ಶಿವಮೊಗ್ಗ.

ಗಣೇಶ ಅಮೀನಗಡ (ಸಂ). (2019). ರಹಿಮಾನವ್ವ ಕಲ್ಮನಿ. ಕವಿತಾ ಪ್ರಕಾಶನ. ಮೈಸೂರು.

ಗುಡಿಹಳ್ಳಿ ನಾಗರಾಜ. (2013). ತೆರೆ ಸರಿಯಿತು. ಕೆ.ಬಿ.ಪ್ರಗತಿ, ಬರಹ ಪಬ್ಲಿಷಿಂಗ್ ಹೌಸ್. ಬೆಂಗಳೂರು.

ಸೀತಾರಾಮಯ್ಯ ಹ. ವೆಂ. (ನಿರೂಪಣೆ). ಗುಡಿಹಳ್ಳಿ ನಾಗರಾಜ (ಪರಿಷ್ಕರಣೆ). ಅಭಿನಯ ವಿಶಾರದೆ. ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು.

ರಹಮತ್ ತರೀಕೆರೆ. (2012). ಅಮೀರಬಾಯಿ ಕರ್ನಾಟಕಿ. ಅಭಿನವ ಪ್ರಕಾಶನ. ಬೆಂಗಳೂರು.

ಗಿರಿಜಾ ಲೋಕೇಶ್. ಜೋಗಿ (ನಿರೂಪಣೆ). (2021). ಗಿರಿಜಾ ಪರಸಂಗ. ಅಂಕಿತ ಪುಸ್ತಕ. ಬೆಂಗಳೂರು.

ಪ್ರಕಾಶ ಗರುಡ. (2015). ಕಂಪನಿ ನಾಟಕ ಅರ್ಥಾತ್ ವೃತ್ತಿ ರಂಗಭೂಮಿ. ಯಾಜಿ ಪ್ರಕಾಶನ. ಹೊಸಪೇಟೆ.

ಜಯಶ್ರೀ ಬಿ. ಪ್ರೀತಿ ನಾಗರಾಜ್ (ನಿರೂಪಣೆ). (2019). ಕಣ್ಣಾ ಮುಚ್ಚೇ... ಕಾಡೆ ಗೂಡೇ... ಮನೋಹರ ಗ್ರಂಥ ಮಾಲಾ. ಧಾರವಾಡ.

Downloads

Published

13.08.2024

How to Cite

ರವಿ ಎನ್. ಸಿ. (2024). ರಂಗಕಲಾವಿದೆಯರು ಮತ್ತು ಚಳವಳಿಗಳು: (ಮೈಸೂರು ಸಂಸ್ಥಾನ ಮತ್ತು ಅಖಂಡ ಕರ್ನಾಟಕವನ್ನು ಅನುಲಕ್ಷಿಸಿ). AKSHARASURYA, 4(05 (special Issue), 43 to 52. Retrieved from http://aksharasurya.com/index.php/latest/article/view/472