ಕರ್ನಾಟಕದ ಜಾನಪದ ನಂಬಿಕೆಗಳು
Keywords:
ಜನಪದ, ನಂಬಿಕೆ, ಮೂಢನಂಬಿಕೆಗಳು, ತೊಟ್ಟಿಲುಶಾಸ್ತ್ರ, ಸಾಂಸ್ಕೃತಿಕ, ವೈಚಾರಿಕ, ಪರಂಪರೆAbstract
ಜನರಿಗೆ ಸಂಬಂಧಿಸಿದ್ದು ಜನಪದ ಎಂದು ಸರಳವಾಗಿ ಹೇಳಬಹುದು. ಜೀವಕೋಟಿಯ ನಿರ್ದಿಷ್ಟ ಜನ ಸಮುದಾಯ ತನ್ನ ಉಳಿವಿಗೆ, ಸಂಸಾರಕ್ಕೆ, ಸಮಾಜಕ್ಕೆ, ಬದುಕಿಗೆ, ಸಾವಿಗೆ, ಹುಟ್ಟಿನಿಂದ ಅಂತ್ಯವರಿಗೂ ಕೆಲವು ಸಂಪ್ರದಾಯ ರೀತಿ ನೀತಿ, ಆಚಾರ-ವಿಚಾರ, ಆಚರಣೆ ಆಲೋಚನೆ ಮೊದಲಾದವುಗಳನ್ನು ರೂಢಿಗೆ ತಂದಿತ್ತು. ಇದೆಲ್ಲ ಜನಪದದ ಅಂಗವಾಯಿತು. ಜನರು ಮತ್ತು ಜನರಬದುಕು ಜನಪದವಾಯಿತು. ಜನಪದ ಶಬ್ದವು ಜನ, ಜನರ ಭಾಷೆ, ಅವರು ನೆಲೆಸಿರುವ ಸ್ಥಳ, ಜಾತಿ-ಪಂಗಡ, ಆಚಾರ-ವಿಚಾರ, ಕಲೆ, ಸಾಹಿತ್ಯ ಮೊದಲಾದವುಗಳೆಲ್ಲವನ್ನು ಒಳಗೊಂಡಿದೆ. ಆಚಾರ ವಿಚಾರಗಳಲ್ಲಿ ಏಕ ರೀತಿಯ ಗುಣಲಕ್ಷಣವಿರುವ, ಭೌತಿಕ ಹಾಗೂ ಭಾವನೆಗಳಲ್ಲಿ ಸಮಾನತೆ ಕಾಣುವ ಜನರ ಗುಂಪನ್ನು ಜನಪದ ಎಂದಿದ್ದಾರೆ. ಪರಂಪರೆಯತ್ತ ಮುಖ ಮಾಡಿರುವ ಯಾವುದೇ ಜನಸಮುದಾಯ ಜನಪದರು ಎನಿಸಿಕೊಳ್ಳುತ್ತಾರೆ.
ಜನಪದಕ್ಕೆ ಸಂಬಂಧಿಸಿದ್ದು ಜನಪದ, ಸಮಸ್ತವನ್ನು ಒಳಗೊಂಡಿದ್ದು ಜಾನಪದ. ಸಂಸ್ಕೃತಿ ಜನರಿಂದ ಜನರಿಗೆ, ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಬಂದಿದೆ. ಇಂಗ್ಲಿಷ್ ಭಾಷೆಯಲ್ಲಿ ‘Floklore’ ಎಂದು ಬಳಸುತ್ತಿರುವ ಶಬ್ದಕ್ಕೆ ಸಮನಾರ್ಥಕವಾಗಿ ‘ಜಾನಪದ’ ಪದ ಬಳಕೆಯಾಗುತ್ತಿದೆ. ‘Floklore’ ಪದಕ್ಕೆ ಪ್ರಾಚೀನ ಕಾಲದ, ಪ್ರಾಚೀನ ಜನರ ಸಮಸ್ತ ಸಂಸ್ಕೃತಿಯ ಸಾರರೂಪವೇ ಜಾನಪದ. ಅದರ ಅಭ್ಯಾಸವೇ ಜಾನಪದದ ಅಭ್ಯಾಸ, ಜಾನಪದ ಅಭ್ಯಾಸವೆಂದರೆ ಮನುಕುಲದ ಸಾಂಸ್ಕೃತಿಕ ಪರಂಪರೆಯ ಅಭ್ಯಾಸವೆಂದೇ ಅರ್ಥ.
References
ಲಕ್ಕಪ್ಪ ಗೌಡ ಎಚ್. ಜೆ. (ಪ್ರ.ಸಂ.). (1997). ಜಾನಪದ ಕೈಪಿಡಿ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ಪರಮಶಿವಯ್ಯ ಜಿ. ಶಂ. (1982). ಕರ್ನಾಟಕ ಜಾನಪದ ಸಮೀಕ್ಷೆ. ಪ್ರಥಮ ವಿಶ್ವಕನ್ನಡ ಸಮ್ಮೇಳನ ಸಾಹಿತ್ಯ ಮಾಲೆ, ಕರ್ನಾಟಕ ಸರ್ಕಾರ. ಬೆಂಗಳೂರು.
ವಿವೇಕ ರೈ ಬಿ. ಎ. (1995). ಅನ್ವಯಿಕ ಜಾನಪದ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ಲಿಂಗಯ್ಯ ಡಿ. & ಸಂಧ್ಯಾ ರೆಡ್ಡಿ ಕೆ. ಆರ್. (2006). ಜಾನಪದ ಸ್ವರೂಪ ಮತ್ತು ಸಾಹಿತ್ಯ ಸಂಪಾದಕರು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ರಾಮಚಂದ್ರೇಗೌಡ ಹಿ. ಶಿ. (ಸಂ). (2004). ಜಾನಪದ ಗ್ರಹಿಕೆ, ಪರಿಕಲ್ಪನೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ. ಬೆಂಗಳೂರು.
ರಾಮಚಂದ್ರೇಗೌಡ ಹಿ. ಶಿ. (1997). ಜಾನಪದ ಸಾಂಸ್ಕೃತಿಕ ಆಯಾಮಗಳು. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ಹಿರೇಮಠ ಎಸ್. ಎಸ್. (2005). ಜನಪದ ಸಮಾಜ ಸಂಸ್ಕೃತಿ. ಸೂರ್ಯ ಪ್ರಕಾಶನ. ಚಿತ್ರದುರ್ಗ ಜಿಲ್ಲೆ.
ಸಿ.ಪಿ.ಕೆ. (1969). ಜಾನಪದ ಪ್ರತಿಭೆ. ತ.ವೆಂ. ಸ್ಮಾರಕ ಗ್ರಂಥಮಾಲೆ. ಮೈಸೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.