ಸಾಲಿ ವೆಂಕಣ್ಣಯ್ಯರ ‘ಗಿರಿಜಾಕಲ್ಯಾಣ’ ಯಕ್ಷಗಾನ ಕಾವ್ಯ ಒಂದು ಪಕ್ಷಿನೋಟ
Keywords:
ಸಾಲಿವೆಂಕಣ್ಣಯ್ಯ, ಗಿರಿಜಾ ಕಲ್ಯಾಣ, ಬಯಲಾಟ, ಕಥೆಯ ನಿರೂಪಣೆ, ಹರಿಹರನ ಮೂಲAbstract
ಗಿರಿಜಾ ಕಲ್ಯಾಣ ಕಥೆಯು ಪುರಾಣ ಪ್ರಸಿದ್ಧವಾಗಿದೆ. ಸುಮಾರು 15 ಪುರಾಣಗಳಲ್ಲಿ ಅಲ್ಪ ಸ್ವಲ್ಪ ಮರ್ಪಾಡುಗಳಲ್ಲಿ ಕಂಡುಬರುವ, ಶಿವ ಪಾರ್ವತಿಯರ ವಿವಾಹ ವಸ್ತುವಿರುವ ಈ ಕಥೆಯನ್ನು ಕುರಿತು ಕಾಳಿದಾಸನು ಸಂಸ್ಕೃತದಲ್ಲಿ ಕುಮಾರಸಂಭವನ್ನು, ಕನ್ನಡದಲ್ಲಿ ಹರಿಹರ ಕವಿಯು ಗಿರಿಜಾಕಲ್ಯಾಣವನ್ನು ಬರೆದು ಪ್ರಸಿದ್ಧಗೊಳಿಸಿದ್ದಾರೆ. ಹಾಗೆಯೇ ಕನ್ನಡ ಸಾಹಿತ್ಯದ ತ್ರಿಪದಿ, ಷಟ್ಪದಿ, ಸಾಂಗತ್ಯ ಮುಂತಾಗಿ ಹಲವು ಪ್ರಕಾರಗಳಲ್ಲಿಯಲ್ಲದೆ ಜನಪದರ ಹಾಡು ಕಥೆಗಳಲ್ಲಿಯೂ, ಯಕ್ಷಗಾನ ಬಯಲಾಟಗಳ ರೂಪದಲ್ಲಿಯೂ ರಚನೆಯಾಗಿವೆ. ಈ ನಿಟ್ಟಿನಲ್ಲಿ ಸಾಲಿವೆಂಕಣ್ಣಯ್ಯರೂ ಕೂಡ ಯಕ್ಷಗಾನ ಬಯಲಾಟ ಪ್ರಕಾರದಲ್ಲಿ ಈ ಕಥೆಯನ್ನು ಬರೆದಿದ್ದಾರೆ. ಅವರ ಕಿರು ಪರಿಚಯದೊಂದಿಗೆ ಅವರ ಗಿರಿಜಾಕಲ್ಯಾಣ ಯಕ್ಷಗಾನ ಕೃತಿಯನ್ನು ಪರಿಚಯಿಸುವುದು ಮತ್ತು ಹರಿಹರನ ಗಿರಿಜಾಕಲ್ಯಾಣದೊಂದಿಗೆ ಈ ಕೃತಿಗೆ ಇರುವ ಆಕರಗಳನ್ನು ಪರಿಶೀಲಿಸುವುದು ಈ ಲೇಖನದ ಆಶಯವಾಗಿದೆ.
References
ದುರ್ಗಾದಾಸ್ ಕೆ. ಆರ್. & ನಾಗರಾಳ ಎಚ್. ಎಸ್. (ಸಂ.). (1995). ಸಾಲಿ ವೆಂಕಣ್ಣಯ್ಯ ಕೃತ ಗಿರಿಜಾ ಕಲ್ಯಾಣ ಬಯಲಾಟ. ಬೆಳಗಾವಿ.
ಹರಿಹರ. ನಂಜುಂಡಾರಾಧ್ಯ ಎಂ. ಜಿ. (ಗದ್ಯಾನುವಾದ). (2004). ಗಿರಿಜಾಕಲ್ಯಾಣ ಮಹಾಪ್ರಬಂಧ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಪಂಡಿತ ವೆಂಕಟರಾವ್. (1945). ಶಿವಮಹಾಪುರಾಣ: ಭಾಗ-4 ರುದ್ರಸಂಹಿತಾ ಪಾರ್ವತೀಖಂಡ. ಜಯಚಾಮರಾಜೇಂದ್ರ ಗ್ರಂಥಮಾಲ. ಮೈಸೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.