ರವೀಂದ್ರನಾಥ ಠಾಗೋರ್: ಜೀವನ, ಸಾಹಿತ್ಯ ಮತ್ತು ಸಂಘರ್ಷ
Keywords:
ಆಶಾವಾದ, ಗೇಯ, ಅವಸ್ಥೆ, ಗಲ್ಪಗುಚ್ಛ, ಚೈತನ್ಯ, ಆಳಕ್ಕಿಳಿ, ಅನುಸಂಧಾನAbstract
ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಏಷ್ಯಾ ಖಂಡದ ಮೊದಲ ಕವಿ ರವೀಂದ್ರನಾಥ ಠಾಗೋರ್. ಗುರುದೇವ್ ಎಂಬ ಅಂಕಿತ ನಾಮದೇಯರಾದ ಇವರು ಬಂಗಾಳಿಯ ಮಹಾ ವಿದ್ವಾಂಸ ಕವಿ, ಕಾದಂಬರಿಕಾರ, ಸಂಗೀತಕಾರ ಮತ್ತು ಪ್ರಗತಿಪರ ನಾಟಕಕಾರರಾಗಿದ್ದಾರೆ. ಇವರು 19-20ನೇ ಶತಮಾನಗಳ ಸಂಧಿಕಾಲದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪವನ್ನು ತಂದು ಕೊಟ್ಟವರಾಗಿದ್ದಾರೆ. ಇವರು ರಚಿಸಿದ ಕವನಗಳು, ಸಣ್ಣ ಕಥೆಗಳು ಮತ್ತು ಕಾದಂಬರಿಗಳು ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲತೆಗೆ, ವಾಸ್ತವಿಕತೆಗೆ ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಸಾಣೆಯಂತಿವೆ. ಇವರು ರಚಿಸಿದ ಎರಡು ಗೀತೆಗಳು ಭಾರತ ಮತ್ತು ಬಾಂಗ್ಲಾ ದೇಶಗಳ ರಾಷ್ಟ್ರಗೀತೆಗಳಾಗಿವೆ. ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದ ಠಾಗೋರ್ ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳು ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳಲೆಲ್ಲ ಅನುರಣಿಸಿವೆ. ಇವರು ಸ್ಥಾಪಿಸಿದ ಸಂಸ್ಥೆ ‘ವಿಶ್ವಭಾರತಿ ವಿಶ್ವಾವಿದ್ಯಾನಿಲಯ’ ಮತ್ತು ಬಹುದೊಡ್ಡ ‘ಗ್ರಂಥಮಾಲೆ’ ಇವು ಠಾಗೋರ್‌ರು ಜಗತ್ತಿಗೆ ನೀಡಿದ ಪ್ರಮುಖ ಕೊಡುಗೆಗಳಾಗಿವೆ.
References
ತಾರಾಚಂದ (ಮೂಲ). ದೀಕ್ಷಿತ್ ಜಿ. ಎಸ್. (ಅನು). ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ: ಸಂಪುಟ-2.
ದತ್ತ ಆರ್. ಸಿ. ಕಲ್ಚರಲ್ ಆಫ್ ಹೆರಿಟೇಜ್ ಆಫ್ ಬಂಗಾಳ.
ರಾಜೇಶ್ವರಿ ಕೃಷ್ಣ. ರವೀಂದ್ರನಾಥ ಠಾಕೂರ. ಸ್ವಪ್ನ ಬುಕ್ ಹೌಸ್, ಬೆಂಗಳೂರು.
Chakravarty A. (1961). A Tagore Reader. Beacon Press. United States.
Dutta K. & Robinson A. (1995). Rabindranath Tagore: The Myriad-Minded Man. St. Martin’s Press. United States.
Dutta K. (editor). Robinson A. (editor) (1997). Rabindranath Tagore: An Anthology. St. Martin’s Press. United States.
Roy B. .K (1977). Rabindranath Tagore: The Man and His Poetry, Folcroft Library Editions.
https://www.parabaas.com/rabindranath/articles/pMeyer.html
https://www.nobelprize.org/prizes/literature/1913/tagore/biographical/
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.