ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ.

Authors

  • Ashwini Bellundagi

Abstract

19 ನೇ ಶತಮಾನದಲ್ಲಿ ಬಂದ ಹರಿದಾಸರ ಪೀಳಿಗೆಯು ದ್ವೈತ ಸಿದ್ದಾಂತದ ಅಡಿಪಾಯದ ಮೇಲೆ ‘ಭಕ್ತಿ’ ಯ ಸುಂದರ ಸೌಧವನ್ನು ನಿರ್ಮಿಸಿ ಆಕರ್ಷಕವಾಗಿಸಿದರು. ಸರಳ, ಸುಂದರ ಮತ್ತು ಸಂಗೀತದ ಮಾಧುರ್ಯದ ಮೂಲಕ ‘ಭಕ್ತಿ’ ಸಾಹಿತ್ಯಕ್ಕೆ ಹೊಸ ಮೆರಗನ್ನು ಕೊಟ್ಟರು. ಸಂಸಾರದಲ್ಲಿದೇ ಸಂಸಾರವೆಂದರೆ ಏನೆಂಬುದನ್ನು ಅರಿತುಕೊಂಡ ಚಾಣಾಕ್ಷಮತಿಗಳು ಹರಿದಾಸರು ಲೌಕಿಕದಲ್ಲಿದ್ದೂ ಇಲ್ಲದಂತೆ ಬಾಳಿದ ರೀತಿ ನಿರ್ಲಿಪ್ತ ಬದುಕಿದ ಸಂಕೇತವೇ ಸರಿ. ಬದುಕನ್ನು ವಾಸ್ತವವಾಗಿ ಅನುಭವಿಸುತ್ತಲೇ ಅದರಲ್ಲಿರುವ ಸಮಸ್ಯೆಗಳನ್ನು ಕಂಡುಕೊಂಡು ಅವುಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಇವರದು. ಭಾರತದ ಪ್ರತಿಯೊಂದು ವ್ಯವಸ್ಥೆಯು ಸಮಾಜದಲ್ಲಿ ಮಾಡಿದ ಗಾಡಪರಿಣಾಮ ಹೇಳತೀರದು. ಮನುಷ್ಯನ ಸ್ವಾರ್ಥಪರತೆ, ಧಾರ್ಮಿಕ ಅಂದಾನುಕರಣೆ, ಆರ್ಥಿಕ ಅಸಮತೋಲನ, ಅಧಿಕಾರ-ಅಂತಸ್ತುಗಳಲ್ಲಿ ಭಿನ್ನತೆ, ದುಡಿಮೆಯಲ್ಲಿ ಕೆಳಮಟ್ಟದ ಯೋಜನೆ, ಸ್ವಾತಂತ್ರ್ಯದ ಹೆಸರಿನಲ್ಲಿ ಅಭಿವ್ಯಕ್ತಿರಣ ಮುಡನಂಬಿಕೆ ಅಂಧಶ್ರದ್ಧಾಚರಣೆಗಳು, ಗೂಡು ಸಂಪ್ರದಾಯಗಳ ಮೂಲಕ ಜನರ ಮನಸ್ಸಿನಲ್ಲಿ ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಮಾಡಿದರು. ಈ ಎಲ್ಲಾ ಅಂಶಗಳಿಗೆ ಬೆಳಕಾಗಿ ಬಂದರು. ಇವನ್ನೆಲ್ಲಾ ಹೋಗಲಾಡಿಸಲು ಶ್ರಮಿಸಿದರು. ಮನುಷ್ಯನು ನಡೆ-ನುಡಿ-ಶೀಲ-ಚಾರಿತ್ರ್ಯ ಹೊಂದುವಂತೆ ಮಾಡಿದರು. ಪಂಪನು ‘ಮಾನವ ಕುಲಂ ತಾನೊಂದೆವಲಂ’ ಅಂದ. ಕೀರ್ತನೆಕಾರ ಕನಕದಾಸರು ‘ಕುಲಕುಲವೆಂದು ಹೊಡೆದಾಡದಿರಿ’ ಎಂದು ಇವರಿಬ್ಬರ ಸಮತೆಯ ಮಧ್ಯ ಬೆಸುಗೆಯಾಗಿ ದಾಸರು ಸಾಮಾಜಿಕ ಸಾಮರಸ್ಯವನ್ನು ತಮ್ಮ ಅನುಭಾವದ ಮೂಲಕ ಹೇಳುತ್ತ ಅನುಭಾವವು ವೈಚಾರಿಕ ಪ್ರಜ್ಞೆಯಿಂದ ಕೂಡಿದ್ದೆಂದು ಸಾಬೀತು ಮಾಡಿದರು. ದಾಸರ ಈ ಸಾಮಾಜಿಕ ನಿಲುವು ನಮಗೆ ಇಂದಿಗೂ ಪ್ರಸ್ತುತವಾಗುತ್ತದೆ.

Downloads

Published

05.02.2023

How to Cite

Ashwini Bellundagi. (2023). ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ. AKSHARASURYA, 2(02), 15 to 17. Retrieved from http://aksharasurya.com/index.php/latest/article/view/46

Issue

Section

Article