ಸಾಮಾಜಿಕ ಸುಧಾರಣೆಯಲ್ಲಿ ಕುವೆಂಪುರವರ ಕವಿತೆಗಳ ಪಾತ್ರ

Authors

  • ಜೆ. ರಾಜ ಗುಂಡಾಪುರ ಸಹ ಪ್ರಾಧ್ಯಾಪಕರು‌, ಕನ್ನಡ ವಿಭಾಗ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ರಾಮನಗರ.

Keywords:

ಕುವೆಂಪು, ಕವಿತೆ, ಸಾಮಾಜಿಕ, ಪುರೋಹಿತ, ಮನುಜ ಮತ, ವೈಚಾರಿಕತೆ, ಸರ್ವೋದಯ

Abstract

ಹೊಸಗನ್ನಡ ಸಾಹಿತ್ಯದ ಮಹತ್ವದ ಕವಿ, ರಾಷ್ಟ್ರಕವಿ, ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಂಡು ನಾಡಿಗೆಲ್ಲಾ ಹಬ್ಬಿದ ಕವಿ ಕುವೆಂಪು. 20ನೆಯ ಶತಮಾನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗಿದ ಮಹಾಕವಿ. ಹೊಸ ಸಾಂಸ್ಕೃತಿಕ ಸ್ಥಿತ್ಯಂತರದಲ್ಲಿ ವಸಾಹತು ಅನುಭವದೊಟ್ಟಿಗೆ ಬೆಳೆಯುತ್ತಲೇ ಕನ್ನಡ ನಾಡು-ನುಡಿಯ ಪುನಶ್ಚೇತನಕ್ಕೆ ಕಾರಣರಾದ ಮಹಾಚೇತನ ಕುವೆಂಪು.


ಕುವೆಂಪು ಕುಪ್ಪಳ್ಳಿಯಲ್ಲಿ ಹುಟ್ಟಿ ವಿಶ್ವಮಾನವರಾದ ಚರಿತೆ ಬಹಳ ದೊಡ್ಡದು. ಮಲೆನಾಡಿನ ದಟ್ಟ ಕಾಡಿನ ಮಧ್ಯದ ಊರಿನಿಂದ ಕುವೆಂಪುರವರ ಚಿಂತನೆಯು ಜಿಗಿದು ಅನಿಕೇತನವಾಗುವ, ನಿರಂಕುಶ ಮತಿಯಾಗುವ ಹಾದಿ ಸಾಧನೆಯ ಹಾದಿಯದು.


ಕುವೆಂಪುರವರು ನಮ್ಮ ಸಂಸ್ಕೃತಿ, ಆಚಾರ ವಿಚಾರ, ಪುರಾಣ, ವೇದ ಉಪನಿಷತ್ತುಗಳ ಆಳಕ್ಕೆ ಬೇರಿಳಿಸಿ ಸೋಸಿ ಇವತ್ತಿಗೂ ಅವಶ್ಯವಿರುವ ಮಾನವರ ಚಿಂತನೆಗಳನ್ನು ಹೀರಿ, ಪಾಶ್ಚತ್ಯ ಜ್ಞಾನ, ವಿಜ್ಞಾನ, ಸಾಹಿತ್ಯ, ತತ್ವಜ್ಞಾನದ ತಿಳುವಳಿಯನ್ನು ಮೈತುಂಬಿಕೊಂಡು ವೈಚಾರಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವವರು. ಪ್ರಾದೇಶಿಕತೆಯ ವಿಶಿಷ್ಟತೆಯೊಂದಿಗೆ ಜಾಗತಿಕವಾಗಬಲ್ಲ ಕೃತಿಗಳನ್ನು ರಚಿಸಿದರು. ಅವರು ರೂಪಿಸಿಕೊಟ್ಟ ಸರ್ವೋದಯ, ಸಮನ್ವಯ, ಮನಜಮತ ವಿಶ್ವಪಥ, ಪೂರ್ಣ ದೃಷ್ಟಿ ಎಂಬ ತಾತ್ವಿಕ ಚಿಂತನೆಗಳು ಕಲಾತೀತ ಮೌಲ್ಯಗಳಾಗಿವೆ. ಆತ್ಮಶ್ರೀಗಾಗಿ ನಿರಂಕುಶ ಮಿತಿಗಾಗಿ ಎಂದು ಯುವಕರಿಗೆ ಕರೆ ನೀಡುತ್ತಾ ಕುವೆಂಪುರವರು ನೀಡಿದ ವಿಚಾರ ಕ್ರಾಂತಿಗೆ ಆಹ್ವಾನ ಎಂಬುದು ಅಂದಿಗೆ ಸಾಂಸ್ಕೃತಿಕ ಕ್ರಾಂತಿಯೇ ಆಯಿತು. ಜೀವ ಜಗದೊಡನೆ ಮಾನವ ಜನಾಂಗವನ್ನು ಒಳಗೊಳ್ಳುವ ಕುವೆಂಪುರವರ ಚಿಂತನೆಗಳು ವೈಚಾರಿಕತೆಯಿಂದ ಪ್ರಗತಿಪರವಾಗಿವೆ.

References

ಶಿವಾರೆಡ್ಡಿ ಕೆ.ಸಿ. (ಸಂಯೋಜಕ ಸಂಪಾದಕರು). (2000). ಕುವೆಂಪು ಸಮಗ್ರ ಕಾವ್ಯ: ಸಂಪುಟ-01. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ಶಿವರುದ್ರಪ್ಪ ಜಿ. ಎಸ್. (2005). ಕುವೆಂಪು ಪುನರವಲೋಕನ. ಅಂಕಿತ ಪುಸ್ತಕ. ಬೆಂಗಳೂರು.

ಶಿವರುದ್ರಪ್ಪ ಜಿ. ಎಸ್. (ಸಂಪಾದಕರು). (2003). ಶ್ರೀ ಕುವೆಂಪು. ಪ್ರಸಾರಂಗ, ಬೆಂಗಳೂರು ವಿಶ್ವವಿದ್ಯಾಲಯ. ಬೆಂಗಳೂರು.

ಸುಬ್ಬಣ್ಣ ಕೆ. ವಿ. (1999). ಕುವೆಂಪು ಪುಟ್ಟ ಕನ್ನಡಿ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ಶಿವಾರೆಡ್ಡಿ ಕೆ. ಸಿ. (2003). ಕನ್ನಡದ ಹಾಡು. ಅಧ್ಯಯನ ಮಂಡಲ. ಬೆಂಗಳೂರು.

ಸುಜಾತಾ ಲಕ್ಷ್ಮಿಪುರ. (2021). ವಿಚಾರವಾದಿ ಕುವೆಂಪು. ಸಿವಿಜಿ. ಬೆಂಗಳೂರು.

Downloads

Published

11.08.2024

How to Cite

ಜೆ. ರಾಜ ಗುಂಡಾಪುರ. (2024). ಸಾಮಾಜಿಕ ಸುಧಾರಣೆಯಲ್ಲಿ ಕುವೆಂಪುರವರ ಕವಿತೆಗಳ ಪಾತ್ರ. AKSHARASURYA, 4(04), 76 to 83. Retrieved from http://aksharasurya.com/index.php/latest/article/view/457

Issue

Section

ಸಂಶೋಧನಾ ಲೇಖನಗಳು. | RESEARCH ARTICLE.