ಶ್ರೀ ದೇವೀ ಮಹಾತ್ಮೆ ಮತ್ತು ಭಕ್ತಿ ಪರಂಪರೆ

Authors

  • ಶ್ರೀದೇವಿ ಸಂಶೋಧನಾ ವಿದ್ಯಾರ್ಥಿನಿ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.
  • ಧನಂಜಯ ಕುಂಬ್ಳೆ ಸಹಾಯಕ ಪ್ರಾಧ್ಯಾಪಕರು, ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.

Keywords:

ಶ್ರೀದೇವೀ ಮಹಾತ್ಮೆ, ಭಕ್ತಿ ಪರಂಪರೆ, ಶಾಕ್ತ್ಯ ಪರಂಪರೆ, ಪುರಾಣ, ಸಾಹಿತ್ಯ, ಯಕ್ಷಗಾನ

Abstract

ನಮ್ಮ ಸಂಸ್ಕೃತಿಯಲ್ಲಿ ಹಲವು ರೂಪಗಳೊಂದಿಗೆ, ಹಲವು ಮಾರ್ಪಾಡುಗಳೊಂದಿಗೆ ಭಕ್ತಿ ಪರಂಪರೆಯು ನಾಡಿನಾದ್ಯಂತ ಹಬ್ಬಿಕೊಂಡು ಬಂದಿದೆ. ಸಾಹಿತ್ಯಕವಾಗಿಯೂ, ಸಾಂಸ್ಕೃತಿಕವಾಗಿಯೂ ಭಕ್ತಿ ಪರಂಪರೆಯು ಹಲವು ಆಯಾಮಗಳಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರಲ್ಲಿರುವ ಭಕ್ತಿಯ ಭಾವ ಹಲವಾರು ವಿಧಾನಗಳ ಮೂಲಕ ಪ್ರಕಟಗೊಳ್ಳುತ್ತದೆ. ದೇವರನ್ನು ಪ್ರೀತಿಯಿಂದ, ಶ್ರದ್ಧಾ-ಭಕ್ತಿಯಿಂದ, ಆತ ನಮ್ಮವನೇ ಎಂಬ ಸಲಿಗೆಯಿಂದ, ಸಮರ್ಪಣಾ ಭಾವದಿಂದ ಹಲವರು ಹಲವು ರೀತಿಯಲ್ಲಿ ಒಲಿಸಿಕೊಳ್ಳುವ, ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನ ಭಕ್ತಿ ಪರಂಪರೆಯ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಹೇಳುತ್ತದೆ. ದೇವರ ಅನುಗ್ರಹಕ್ಕಾಗಿ ಜನರು ಇಂತಹ ವಿವಿಧ ಭಕ್ತಿ ಮಾರ್ಗದ ಮೂಲಕ ಪ್ರಯತ್ನಿಸುವುದೇ ಭಕ್ತಿ ಪರಂಪರೆಯ ವೈಶಿಷ್ಟ್ಯತೆ.
ಭಕ್ತಿ ಪರಂಪರೆ ಎಂದಾಕ್ಷಣ ನೆನಪಿಗೆ ಬರುವುದು ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪರಂಪರೆ. ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಪರಂಪರೆಗಳೆರಡೂ ಕೂಡಾ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಭಕ್ತಿ ಪರಂಪರೆ ಎನ್ನುವುದು ಇವಿಷ್ಟಕ್ಕೆ ಮಾತ್ರ ಸೀಮಿತವಾಗದೆ ಜನರ ನಂಬಿಕೆ, ಆಚರಣೆಗಳನ್ನೂ ಕೂಡಾ ಒಳಗೊಂಡಿರುವುದನ್ನು ಗಮನಿಸಲೇ ಬೇಕು. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕೂಡಾ ನಂಬಿಕೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಹಿನ್ನೆಲೆಯಿಂದ ಶ್ರೀದೇವೀ ಮಹಾತ್ಮೆ ಕಥನ ಪರಂಪರೆಯನ್ನು ಭಾರತೀಯ ಭಕ್ತಿ ಪರಂಪರೆಯ ಜೊತೆಗಿಟ್ಟು ಅಧ್ಯಯನ ನಡೆಸುವುದು ಈ ಲೇಖನದ ಉದ್ದೇಶ. ಶಾಕ್ತ್ಯ ಪರಂಪರೆ, ಪುರಾಣ, ಆರಾಧನೆ, ಸಾಹಿತ್ಯ ಮತ್ತು ಯಕ್ಷಗಾನ ಮೊದಲಾದ ಪ್ರಕಾರಗಳಲ್ಲಿ ದೇವೀ ಮಹಾತ್ಮೆಯ ಕಥೆ ಬೆಳೆದುಬಂದ ಬಗೆಯನ್ನು ಈ ಲೇಖನ ವಿಶ್ಲೇಷಿಸಿದೆ.

References

ಅ.ರಾ.ಸೇ. (ಸಂ). (2001). ಚಿದಾನಂದಾವಧೂತ ವಿರಚಿತ ಶ್ರೀದೇವೀಮಹಾತ್ಮೆ. ಕಾಮಧೇನು ಪುಸ್ತಕ ಭವನ. ಬೆಂಗಳೂರು.

ಕಬ್ಬಿನಾಲೆ ವಸಂತ ಭಾರಧ್ವಾಜ್. (2005). ಅಂಬುರುಹದಳ- ಯಕ್ಷಗಾನ ಲೇಖನಗಳು. ಕನ್ನಡ ಬಳಗ. ಬೆಂಗಳೂರು.

ನಾಗೇಶ ರಂಗೋ ಕುಲಕರ್ಣಿ (ಅನು). (2012). ಶ್ರೀಮದ್ ದೇವೀಭಾಗವತ. ಪ್ರತಿಭಾ ಗ್ರಂಥಮಾಲೆ. ಧಾರವಾಡ.

ಪಂಡಿತ್ ವೆಂಕಟರಾವ್ (ಅನು). (1944). ಶ್ರೀ ಕಾಲಿಕಾಪುರಾಣಂ. ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲಾ.

ಪಾದೆಕಲ್ಲು ವಿಷ್ಣು ಭಟ್ಟ (ಸಂ). (2014). ಮಹಾಜನಪದ. ರಾಷ್ಟ್ರಕವಿ ಗೋಂವಿದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು. ಉಡುಪಿ.

ಸ್ವಾಮಿ ಹರ್ಷಾನಂದ. (2016). ಶ್ರೀ ದುರ್ಗಾಸಪ್ತಶತೀ. ಶ್ರೀರಾಮಕೃಷ್ಣ ಆಶ್ರಮ. ಮೈಸೂರು.

Downloads

Published

11.08.2024

How to Cite

ಶ್ರೀದೇವಿ, & ಧನಂಜಯ ಕುಂಬ್ಳೆ. (2024). ಶ್ರೀ ದೇವೀ ಮಹಾತ್ಮೆ ಮತ್ತು ಭಕ್ತಿ ಪರಂಪರೆ. AKSHARASURYA, 4(04), 53 to 62. Retrieved from http://aksharasurya.com/index.php/latest/article/view/455

Issue

Section

ಸಂಶೋಧನಾ ಲೇಖನಗಳು. | RESEARCH ARTICLE.