ಉಷಾನವರತ್ನರಾಮ್ ಅವರ ಅತಿಕ್ರಮಣ ಕಾದಂಬರಿಯಲ್ಲಿ ಮಹಿಳಾ ಶೋಷಣೆ.

Authors

  • Puneethkumar H. R.

Abstract

ಒಂದು ದೇಶದ ಅಥವಾ ಸಮಾಜದ ಮಹಿಳಾ ಅಸಮಾನತೆ ಅಲ್ಲಿನ ಕುಟುಂಬ ರಾಜಕಾರಣ ನೆಲೆಯಿಂದ ಉಗಮವಾಗತ್ತವೆ. ಮಹಿಳಾ ಅಸಮಾನತೆಯ ದೃಷ್ಟಿಕೋನ ಶೋಷಣೆಯ ಭಿನ್ನತೆಯನ್ನು ಆರಂಭಗೊಳಿಸುವುದನ್ನು ಗಮನಿಸಬಹುದು. ನ್ಯಾ. ನಾಗಮೋಹನ್‌ದಾಸ್ ಅವರು ಮಹಿಳಾ ಅಸಮಾನತೆಗೆ ರಾಜಕೀಯ ನಿರ್ಬಲೀಕರಣ, ಅರ್ಥಿಕ ನಿರ್ಬಲೀಕರಣ, ಧಾರ್ಮಿಕ ಕಟ್ಟುಪಾಡುಗಳು, ಸಾಮಾಜಿಕ ಮಾಲ್ಯಗಳು ಮತ್ತು ಮೂಡನಂಬಿಕೆಗಳು ಎಂಬ ಐದು ಕಾರಣಗಳನ್ನು ತಿಳಿಸುತ್ತಾರೆ. ಮಹಿಳಾ ಸಮಾನತೆಯನ್ನು ನೈಜವಾಗಿ ಚಿತ್ರಿಸುವಲ್ಲಿ ಕನ್ನಡ ಕಾದಂಬರಿ ಪ್ರಮುಖ ಸಾಹಿತ್ಯ ಪ್ರಕಾರವಾಗಿವೆ. ಕನ್ನಡ ಮಹಿಳಾ ಕಾದಂಬರಿ ಆರಂಭಿಕ ಅವಧಿಯಲ್ಲಿ ತಿರುಮಾಲಂಭ. ಕಲ್ಯಾಣಮ್ಮ, ವೈದೇಹಿ, ಸಾರಾ ಅಬೂಬಕ್ಕರ್, ತ್ರಿವೇಣಿ ಮುಂತಾದವರ ಕಾದಂಬರಿಗಳು ಮಹಿಳಾ ಶೋಷಣೆಯನ್ನು ಅಮುಲಾಗ್ರವಾಗಿ ಚಿತ್ರಿಸಿವೆ. ಕನ್ನಡ ಕಾದಂಬರಿಗಳನ್ನು ಜನಪ್ರಿಯ ಎಂಬ ಭಿನ್ನತೆಯಿಂದ ಕೆಲವು ಕಾದಂಬರಿಕಾರ್ತಿಯರನ್ನು ಮತ್ತು ಅವರ ಕಾದಂಬರಿಗಳನ್ನು ನಿರ್ಲಕ್ಷಿಸಲಾಗಿದೆ. ಈ ವಿಧವಾಗಿ ಕಾದಂಬರಿಗಳನ್ನು ಭಿನ್ನ ನೆಲೆಯಲ್ಲಿ ನೋಡುವುದೇ ತಪ್ಪು ಎಂಬುದು ನನ್ನ ಅಭಿಪ್ರಾಯ. ಇತಂಹ ಕಾದಂಬರಿಕಾರ್ತಿಯರಲ್ಲಿ ಉಷನವರತ್ನರಾಮ್ ಪ್ರಮುಖರು ಕನ್ನಡ ಕಾದಂಬರಿ ಪ್ರಪಂಚದಲ್ಲಿ ಇವರನ್ನು ಕಾದಂಬರಿ ಕಣಜ ಎಂದೇ ಕರೆಯಲಾಗುತ್ತದೆ. “ಬಹುಕಾಲ ನೆನಪಿನಾಲದಲ್ಲಿ ಉಳಿದು ಬಿಡುವ ಪದೇ ಪದೇ ಓದಬೇಕೆನಿಸುವ ಅಂತಃಕರಣ ಕಲಕುವ, ವಿಶ್ವಾಂಬರದಷ್ಟೆ ವರ್ಣವೈವಿಧ್ಯತೆ, ಕಥೆ-ಕಥನ, ಪಾತ್ರ ಚಿತ್ರಣ, ಓರಣ, ಸಾಮಾಜಿಕ -ಸಮಕಾಲೀನ ಇತಿ ವೃತ್ತ – ವಿಷಯ ಚಿಂತನ – ಮಂಥನ. ಮಾನವ ಸಹಜ ತುಡಿತ ಸಂಬಂಧಗಳ ಒಳತೋಟಿ ತಂಬೆಲರಿನ ತಂಪು ಮೋಹನ ಮುರುಲಿಯ ಮೋಹಕತೆ, ಪಯಸ್ವಿನಿಯ ಮಧುರ ನಿನಾದ ಕಂಡಾಗ ಆಸ್ವಾದಿಸಿದಾಗ ಆಗುವ ಹರುಷ....”. ಉಷಾ ಅವರದು ವಿಸ್ತೃತ ಅನುಭವ. ಬರವಣಿಗೆ ಸೃಜನಶೀಲ. ಇವರ ಬರಹಗಳಲ್ಲಿ ಪರಿಪಕ್ವ ಮನಸ್ಸನ್ನು ಕಾಣುತ್ತೇವೆ. ಯಾವ ಕಾದಂಬರಿಯನ್ನೇ ಓದಿದಾಗಲೂ ಓದುಗರಿಗಾಗುವ ಗಾಢ ಅನುಭವ ಕಾದಂಬರಿಯ ಪಾತ್ರಗಳು ನಿತ್ಯ ಜೀವನದಲ್ಲಿ ಕಣ್ಣೆದುರಿಗೆ ನೋಡುವಂಥವು. ಉಷಾನವರತ್ನರಾಮ್‌ರ ಕೆಲವು ಕಾದಂಬರಿಗಳು ಬೆಳ್ಳಿ ತೆರೆಯನ್ನು ಕಡಿರುವುದು ಕಾದಂಬರಿಗಳ ಜನಪ್ರಿಯತೆಗೂ ಅವುಗಳಲ್ಲಿನ ಕಥನ ಕಲೆಗೂ ಸಾಕ್ಷಿಯಾಗಿದೆ. ಸುಮಾರು ಅರವತ್ತಕ್ಕು ಹೆಚ್ಚು ಕಾದಂಬರಿಗಳನ್ನು ಬರೆದಿರುವ ಉಷಾನವರತ್ನರಾಮ್ ವಾಸ್ತವದ ನೆಲೆಯನ್ನು ತೀರ ಸರಳವಾದ ರೀತಿಯಲ್ಲಿ ವಿಶ್ಲೇಷಿಸುತ್ತಾರೆ.

References

ಅತಿಕ್ರಮಣ, ಉಷಾನವರತ್ನರಾಮ್, ಓಂ ಶಕ್ತಿ ಪ್ರಕಾಶನ, ಬೆಂಗಳೂರು, 2016.

ನಮಗೆ ಗೋಡೆಗಳಿಲ್ಲ, ಬಿ.ಸುಜ್ಞಾನಮೂರ್ತಿ(ಅನು), ಲಡಾಯಿ ಪ್ರಕಾಶನ, ಗದಗ, 2017.

ಬೆ ಗೋ ರಮೇಶ್, ಸಾಹಿತ್ಯಲೋಕದ ಪ್ರಾತ:ಸ್ಮರಣಿಯರು ಉಷಾನವರತ್ನರಾಮ್, ದಿವ್ಯಚಂದ್ರ ಪ್ರಕಾಶನ, ಬೆಂಗಳೂರು, 2005, ಪು, 14.

ಮಹಿಳೆ ದುಡಿಮೆ ಮತ್ತು ಬಿಡುವು, ಡಾ. ಹೆಚ್ ಎಸ್ ಶ್ರೀಮತಿ(ಸಂ), ಮಹಿಳಾ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2007, ಪು, 47.

ಮಹಿಳಾ ಅಸಮಾನತೆ, ನ್ಯಾ. ನಾಗಮೋಹನ ದಾಸ್, ಚಿಂತನ ಪುಸ್ತಕ ಪ್ರಕಾಶನ, ಬೆಂಗಳೂರು, 2015.

ಹೆಣ್ಣುಸಿರ ತಲ್ಲಣಗಳು, ರೂಪ ಹಾಸನ(ಸಂ), ಅಭಿರುಚಿ ಪ್ರಕಾಶನ, ಮೈಸೂರು, 2015.

Downloads

Published

05.02.2023

How to Cite

Puneethkumar H. R. (2023). ಉಷಾನವರತ್ನರಾಮ್ ಅವರ ಅತಿಕ್ರಮಣ ಕಾದಂಬರಿಯಲ್ಲಿ ಮಹಿಳಾ ಶೋಷಣೆ. AKSHARASURYA, 2(02), 11 to 14. Retrieved from http://aksharasurya.com/index.php/latest/article/view/45

Issue

Section

Article