ಮಲೆನಾಡಿನ ಜನಪದ: ಅಭಿವ್ಯಕ್ತಿ ಮೀಮಾಂಸೆ
(ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕನ್ನು ಅನುಲಕ್ಷಿಸಿ)
Keywords:
ಭೂಮಿ ಹುಣ್ಣಿಮೆ, ಕೂರಿಗೆ ಶಾಸ್ತ್ರ, ಕುಡುಗೋಲು ಶಾಸ್ತ್ರ, ಭೂತನ ಹಬ್ಬ, ಗಿಡಮೂಲಿಕೆ, ಗೇಣಿ, ಕಾಗೋಡು ಸತ್ಯಾಗ್ರಹAbstract
‘ಮಲೆನಾಡಿನ ಜನಪದ: ಅಭಿವ್ಯಕ್ತಿ ಮೀಮಾಂಸೆ’ ಈ ಲೇಖನವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜನಪದೀಯ ಸಂಸ್ಕೃತಿ ಸಮೀಕ್ಷೆಯಾಗಿದೆ. ಪ್ರತಿಯೊಂದು ಸ್ಥಳವೂ ತನ್ನದೇ ಆದ ಆಧೀಮ ಸಂಸ್ಕೃತಿಯಿಂದ ಗುರುತಿಸಿಕೊಳ್ಳುವ ಹಾಗೆ ಅಪ್ಪಟ ಮಲೆನಾಡಿನ ಸೊಗಡನ್ನು, ಕಂಪನ್ನು ಹೊಂದಿದ ಸಾಗರ ತಾಲ್ಲೂಕಿನ ಪರಿಸರವು ಜೀವವೈವಿಧ್ಯತೆ, ಜನವೈವಿಧ್ಯತೆಯ ಜೊತೆಗೆ ಬದುಕಿನ ವೈವಿಧ್ಯತೆಗಳಿಂದ ಕೂಡಿದೆ. ಇಲ್ಲಿನ ಜನರ ಆಚರಣೆ, ಆರಾಧನೆ, ದೈವ, ಹಬ್ಬ, ಕೃಷಿ, ಪಶುಪಾಲನೆ, ಅಡುಗೆ, ಉಡುಗೆ, ತೊಡುಗೆ, ಸಂಪ್ರದಾಯ, ಪದ್ಧತಿ, ಮದುವೆ, ಹುಟ್ಟು, ಸಾವು ಮುಂತಾದ ಸಂದರ್ಭಗಳಲ್ಲಿ ಸಮುದಾಯಗಳ ಬದುಕಿನ ವಿನ್ಯಾಸದ ಸ್ವರೂಪಗಳು ಭಿನ್ನತೆಗಳಿಂದ ಕೂಡಿವೆ. ಇಲ್ಲಿನ ಜನರ ಆಚರಣೆಗಳು ಆರಿದ್ರಾಮಳೆ ಹಬ್ಬ, ಕೂರಿಗೆ ಹಬ್ಬ, ಪಂಚಮಿ, ಗಣೇಶ ಚತುರ್ಥಿ, ಭೂಮಿ ಹುಟ್ಟಿಮೆ, ದೀಪಾವಳಿ, ಕಣಬ್ಬ, ಸುಗ್ಗಿ ಹಬ್ಬಗಳು, ಊರ ಹಬ್ಬಗಳಾದ ಮಾರಿಜಾತ್ರೆ, ಬೀರನ ಜಾತ್ರೆ, ದ್ಯಾಮವ್ವನ ಜಾತ್ರೆ, ಮಲಕವ್ವನ ಜಾತ್ರೆ ಇತ್ಯಾದಿಗಳಾಗಿವೆ. ಹಾಗೆಯೇ ವಿಶೇಷ ಸಂದರ್ಭಗಳಲ್ಲಿ ಕುರಿ, ಕೋಳಿ, ಮೀನಿನ ಖಾಧ್ಯಗಳು, ಅಕ್ಕಿರೊಟ್ಟಿ, ಕಜ್ಜಾಯ, ಕೊಟ್ಟೆ ಕಡುಬು ಇಲ್ಲಿನ ತಿನಿಸುಗಳಾಗಿವೆ. ಮದುವೆ, ಜಾತ್ರೆ, ಹಬ್ಬದ ಸಂದರ್ಭಗಳಲ್ಲಿ ಡೊಳ್ಳು ಕುಣಿತ, ತಮಟೆ ವಾದ್ಯ, ಕೋಲಾಟ, ಸೋಬಾನೆ ಪದ, ಯಕ್ಷಗಾನ, ಚಾಪೆ ಹೆಣೆಯುವುದು, ಅಂಟಿಗೆ ಪಿಂಟಿಗೆ, ಹಾಡು-ಹಸೆ, ಮುಂತಾದವುಗಳು ಗಮನ ಸೆಳೆಯುತ್ತವೆ.
References
ದೇವರಾಜ ಜವರೇಗೌಡ. (2001). ಜಾನಪದ ಅಧ್ಯಯನ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ಪರಮಶಿವಯ್ಯ ಜಿ. ಶಂ. (1989). ಜಾನಪದ ಸಮೀಕ್ಷೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೇಂಗಳೂರು.
ಡಿಸೋಜ ನಾ. (2002). ಚಿತ್ತಾರ. ರವಿಂದ್ರ ಪುಸ್ತಕಾಲಯ. ಸಾಗರ.
ಪುಟ್ಟಣ್ಣ ವೈ. ಎಸ್. (1991). ನಾ ಕಂಡ ಮಲೆನಾಡು. ಚಂದನ ಪ್ರಿಂಟರ್ಸ್. ಬೆಂಗಳೂರು.
ಮೊಹನ ಎಚ್. ಎಸ್. (2009). ದೀವರ ಮಕ್ಕಳು. ಧಾತ್ರಿ ಪಸ್ತಕ. ಬೆಂಗಳೂರು.
ರಾಗೌ. (2012). ಜಾನಪದ ಸಂಶೋಧನೆ. ತನಮನು ಪ್ರಕಾಶನ. ಮೈಸೂರು.
ಅಪ್ಪಗೆರೆ ತಿಮ್ಮರಾಜು. (2022). ಜನಪದ ಕಲೆಗಳು ಮತ್ತು ಪ್ರಾಯೋಗಿಕತೆ. ಸಪ್ನ ಬುಕ್ ಹೌಸ್. ಬೆಂಗಳೂರು.
ಬೋರಲಿಂಗಯ್ಯ ಹಿ. ಚಿ. & ಹುಚ್ಚಪ್ಪ ಮಾಸ್ತರ್ ಎನ್. (ಸಂ). (2002). ಕಾಗೋಡು ಚಳುವಳಿಯ ಸುವರ್ಣ ಸಂಪುಟ. ಮಲೆನಾಡು ಜನಪದ ಲೋಕ. ಶಿವಮೊಗ್ಗ.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.