ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಸ್ಥಾನಮಾನ

Authors

  • ಪ್ರವೀಣ್ ಕುಮಾರ್ ಜೆ. ಎಂ.ಕಾಂ. ವಿದ್ಯಾರ್ಥಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಸೆಂಟ್ರಲ್ ಕಾಲೇಜು ಆವರಣ.
  • ವನಜಾಕ್ಷಿ ಆರ್ ಹಳ್ಳಿಯವರ ಪ್ರಾಂಶುಪಾಲರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ರಾಜಾಜಿನಗರ, ಬೆಂಗಳೂರು.

Keywords:

ಸ್ತ್ರೀವಾದ, ಮಹಿಳಾ ಸಾಹಿತ್ಯ, ಸ್ವಾತಂತ್ರ್ಯ, ಕನ್ನಡ ಸಾಹಿತ್ಯ, ಮಹಿಳೆ

Abstract

ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನನ್ಯವಾದುದು. ಚರಿತ್ರೆಯ ಎಲ್ಲಾ ಕಾಲಘಟ್ಟಗಳಲ್ಲೂ‌ ಸಾಹಿತ್ಯದ ಮೂಲಕ ವರ್ತಮಾನದ ತಲ್ಲಣಗಳನ್ನು ವಿಶೇಷವಾಗಿ ಮಹಿಳೆಯ ದುಃಖ ದುಮ್ಮಾನಗಳಿಗೆ ಒತ್ತು ಕೊಟ್ಟು ನೋವುಗಳನ್ನು ಮಹಿಳಾ ಸಾಹಿತಿಗಳು ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ಉದಾಹರಣೆಗಳ ಮೂಲಕ ಇಲ್ಲಿ ಚರ್ಚಿಸಲಾಗಿದೆ. ವಚನ ಸಾಹಿತ್ಯದಿಂದ ಹಿಡಿದು ಆಧುನಿಕ ಕನ್ನಡ‌ ಸಾಹಿತ್ಯದ ಉಪಲಬ್ಧವಿರುವ ಮಹಿಳಾ ಸಾಹಿತಿಗಳನ್ನು ಗುರುತಿಸಿ ಪ್ರಾತಿನಿಧಿಕವಾಗಿ ಒಂದು ವಚನವನ್ನು ಮತ್ತು ಆಯ್ದ ಸಾಲುಗಳನ್ನು ಈ ಲೇಖನದಲ್ಲಿ ವಿಮರ್ಶಿಸಲಾಗಿದೆ. ಆ ಮೂಲಕ ಕನ್ನಡ ಸಾಹಿತ್ಯದಿಂದ ಮಹಿಳೆ ಸ್ಥಾನಮಾನವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆ ಸಾಹಿತ್ಯಿಕವಾಗಿ ಎದುರಿಸುತ್ತಿರುವ ಸವಾಲನ್ನು ಕೂಡ ತುಣುಕಾಗಿ ಅರ್ಥೈಸಲಾಗಿದೆ. ಸಾಹಿತ್ಯಿಕ ಸನ್ನಿವೇಶಗಳ ವಾಸ್ತವಕ್ಕಿಂತ ಹೇಗೆ ಭಿನ್ನವಾಗಿದೆ ಮತ್ತು ಭಿನ್ನವಾಗಿಲ್ಲ ಎಂಬುದನ್ನು ನಮೂದಿಸಲಾಗಿದೆ. ಒಟ್ಟಾರೆಯಾಗಿ, ಮಹಿಳಾ ಸಾಹಿತ್ಯ ಬೆಳೆದು ಬಂದ ದಾರಿ, ಸ್ತ್ರೀವಾದ ಮತ್ತು ಮಹಿಳಾ ಸಬಲೀಕರಣದಲ್ಲಿ ಸಾಹಿತ್ಯ ಪ್ರಮುಖ ಪಾತ್ರವನ್ನು ವಹಿಸಿದೆ ಎಂಬುದನ್ನು ಗುರುತಿಸಲಾಗಿದೆ.

References

ಶ್ರೀಮತಿ ಎಚ್. ಎಸ್. (2006). ಆಧುನಿಕ ಮಹಿಳಾ ಸಾಹಿತ್ಯ ಚರಿತ್ರೆ. ಕನ್ನಡ ವಿಶ್ವವಿದ್ಯಾಲಯ. ಹಂಪಿ.

ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ. (2014). ಸ್ತ್ರೀವಾದಿ ಸಾಹಿತ್ಯ ವಿಮರ್ಶೆ. ಅನುಭವ ಪ್ರಕಾಶನ. ಬೆಂಗಳೂರು.

ಪುಷ್ಟ ಎಚ್. ಎಲ್. (2015). ಸ್ತ್ರೀ ಎಂದರೆ ಅಷ್ಟೇ ಸಾಕೆ. ಯಾಜಿ ಪ್ರಕಾಶನ. ಹೊಸಪೇಟೆ.

ಶೇಷಗಿರಿರಾವ್ ಎಲ್. ಎಸ್. (2010). ಹೊಸಗನ್ನಡ ಸಾಹಿತ್ಯ ಚರಿತ್ರೆ. ಸ್ವಪ್ನ ಬುಕ್ ಹೌಸ್. ಬೆಂಗಳೂರು.

ಶ್ರೀಮತಿ ಎಚ್. ಎಸ್. (2010). ಹೆಣ್ಣುತನ ಎಂಬ ಕಣ್ಕಟ್ಟು. ಪ್ರಗತಿ ಗ್ರಾಫಿಕ್ಸ್. ಬೆಂಗಳೂರು.

ಯೋಗರಾಜು ಎಸ್. ಡಿ. (2013). ಮಹಿಳಾ ಸಬಲೀಕರಣ. ಶ್ರಿ ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್. ನೆಲಮಂಗಲ.

Downloads

Published

11.08.2024

How to Cite

ಪ್ರವೀಣ್ ಕುಮಾರ್ ಜೆ., & ವನಜಾಕ್ಷಿ ಆರ್ ಹಳ್ಳಿಯವರ. (2024). ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಸ್ಥಾನಮಾನ . AKSHARASURYA, 4(04), 68 to 75. Retrieved from http://aksharasurya.com/index.php/latest/article/view/441

Issue

Section

ಸಂಶೋಧನಾ ಲೇಖನಗಳು. | RESEARCH ARTICLE.