ನವೋದಯ ಸಂದರ್ಭದಲ್ಲಿ ಮಹಿಳಾ ಸಾಹಿತ್ಯ ಬೆಳೆದು ಬಂದ ಬಗೆ.
Abstract
ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದಾಗ ಹಲವಾರು ಕಾಲಘಟ್ಟಗಳಾಗಿ ಸಾಹಿತ್ಯ ಚರಿತ್ರಾಕಾರರು ಗುರುತಿಸಿರುವುದು ಕಂಡುಬರುತ್ತದೆ. ಅವುಗಳಲ್ಲಿ ನವೋದಯ ಕಾಲಘಟ್ಟವು (ಕ್ರಿ.ಶ. 1919 -1940) ಹೊಸಗನ್ನದ ಸಾಹಿತ್ಯದ ಮೊದಲ ಘಟ್ಟದಲ್ಲಿ ಕಂಡು ಬರುತ್ತದೆ. ಹೀಗಾಗಿ ಆರಂಭದಲ್ಲಿ ಬಂದ ಸಾಹಿತ್ಯ ಚರಿತ್ರೆಗಳಿಂದ ಹಿಡಿದು ಇತ್ತಿಚಿಗೆ ಬಂದ ಎಲ್.ಎಸ್. ಶೇಷಗಿರಿರಾವ್ ಅವರ ‘ಹೊಸಗನ್ನಡ ಸಾಹಿತ್ಯ ಚರಿತ್ರೆಯವರೆಗೂ ಮಹಿಳಾ ಸಾಹಿತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಸಾಹಿತ್ಯ ಚರಿತ್ರೆಯನ್ನ ಕಟ್ಟಿರುವುದು ಒಂದು ವಿಷಾದನೀಯ ಸಂಗತಿ. ಹೀಗಾಗಿ ಎಚ್.ಎಸ್. ಶ್ರೀಮತಿಯವರು ಸಂಪಾದಿಸಿದ ‘ಮಹಿಳಾ ಸಾಹಿತ್ಯ ಚರಿತ್ರೆ’ ಹಾಗೂ ಇದುವರೆಗೂ ಬಂದ ಕೆಲವು ಸ್ತ್ರೀವಾದಿ ಬರಹಗಳ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನದಲ್ಲಿ ನವೋದಯ ಕಾಲಘಟ್ಟದಲ್ಲಿ ಬಂದ ಮಹಿಳಾ ಲೇಖಕಿಯರ ಮತ್ತು ಅವರ ಬರಹಗಳನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.