ಪ್ರಬಂಧ ಸಾಹಿತ್ಯ ಚರಿತ್ರೆಯ ವಿಸ್ತಾರ

(ಡಾ. ಮಹಾದೇವ್ ಬಡಿಗೇರರವರ ಪ್ರಬಂಧ ಸಾಹಿತ್ಯ)

Authors

  • ಭೀಮಣ್ಣ ಎಚ್. ಸಹ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಫರಹತಾಬಾದ, ಕಲಬುರಗಿ.

Keywords:

ಸಾಹಿತ್ಯ ಪ್ರಕಾರ, ವಿಮರ್ಶೆ, ಸಂಶೋಧನೆ, ಲಲಿತ ಪ್ರಬಂಧಗಳು

Abstract

ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಸಾಹಿತ್ಯವು ದಶಕಗಳಿಂದ ಬೆಳೆದು ಬಂದಿದೆ. ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರಬಂಧಕಾರರು ತಮ್ಮ ಬರಹದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ. ಪ್ರಮುಖವಾಗಿ ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಸಾಹಿತ್ಯವನ್ನು ನಗೆ ಬರಹ, ವ್ಯಕ್ತಿ ಚಿತ್ರಗಳು, ನೀತಿ ಬೋದೆ, ಲಲಿತ ಪ್ರಬಂಧಗಳು ಎಂದು ಪರಿಗಣಿಸುತ್ತಿದ್ದರು. ನಂತರ ಇಂಗ್ಲಿಷ್ ಭಾಷೆಯ ಎಸ್ಸೆ ಪದಕ್ಕೆ ಸಂವಾಧಿಯಾಗಿ ಪ್ರಬಂಧ ಎಂದು ಕರೆಯತೊಡಗಿದರು. ಇದು ಕನ್ನಡ ಸಾಹಿತ್ಯದಲ್ಲಿ ಹೆಂಮ್ಮರವಾಗಿ ಬೆಳೆಯ ತೊಡಗಿತು.
ಡಾ. ಮಹಾದೇವ ಬಡಿಗೇರವರು ಈ ಪ್ರಬಂಧ ಸಾಹಿತ್ಯದಲ್ಲಿ ಲಲಿತ ಪ್ರಬಂಧ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಸಂಶೋಧನೆ ಮಾಡುವುದರ ಮೂಲಕ ಒಂದೆಡೆ ಕಲೆ ಹಾಕಿ ಸಾಹಿತ್ಯ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಪ್ರಬಂಧ ಸಾಹಿತ್ಯದ ಸೂಕ್ಷ್ಮ ಸಂವೇದನೆಯ ಹೊರನೋಟ ಮತ್ತು ಒಳನೋಟಗಳನ್ನು ಒರೆಗಲ್ಲಿಗೆ ಹಚ್ಚಿ ವಿಶ್ಲೇಷಿಸಿದ್ದಾರೆ. ಲಲಿತ ಪ್ರಬಂಧ ಸಾಹಿತ್ಯದ ಅಧ್ಯಯನವನ್ನು ಮೀಮಾಂಸೆ, ಸಾಹಿತ್ಯ ಚರಿತ್ರೆ ಮತ್ತು ಸಮೀಕ್ಷೆ ಅಧ್ಯಯನದ ಮುಖಾಂತರ ಸಾಹಿತ್ಯದ ಅಂತರ್ಶಿಸ್ತಿಯ ಅಧ್ಯಯನಕ್ಕೆ ಒಳಪಡಿಸಿ ಸಾಹಿತ್ಯದ ರೂಪವಾಗಿ ಲಲಿತ ಪ್ರಬಂಧ ಸಾಹಿತ್ಯದ ಹಲವು ನೆಲೆಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಅಧ್ಯಯನದಲ್ಲಿ ಪ್ರಬಂಧ ಸಾಹಿತ್ಯದ ಸ್ವರೂಪ, ಲಕ್ಷಣ, ಪ್ರಕಾರಗಳು, ಪ್ರಬಂಧ ಸಾಹಿತ್ಯ ಚರಿತ್ರೆ, ಅನುವಾದಕ, ಸಂಪಾದಕ ಇಂತಹ ಹಲವು ವಿಷಯಗಳನ್ನು ಮಹಾದೇವ್ ಬಡಿಗೇರ ಅವರ ಸಂಶೋಧನಾತ್ಮಕ ನೆಲೆಗಳುಳ್ಳ ಪ್ರಬಂಧ ಸಾಹಿತ್ಯದ ರಚನೆಯು ಕನ್ನಡ ಸಾಹಿತ್ಯಕ್ಕೆ ಅತ್ಯಂತ ಮಹತ್ವದಾಗಿದೆ. ಲಲಿತ ಪ್ರಬಂಧ ಸಾಹಿತ್ಯ ಚರಿತ್ರೆ ಅಧ್ಯಯನದ ಕೊನೆಯ ಭಾಗದಲ್ಲಿ ಲೇಖಕರು ಪ್ರಬಂಧ ಸಾಹಿತ್ಯದ ಕೊಡುಗೆ, ಅಧ್ಯಯನದ ಇತಿಮಿತಿಗಳು ಜೊತೆಗೆ ಸಾಧ್ಯತೆಗಳನ್ನು ಕುರಿತು ವಿವರಿಸಿದ್ದಾರೆ.

References

ಮಹಾದೇವ ಬಡಿಗೇರ. (2019). ಎರಡು ನಾಟಕಗಳು. ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ. ಕಲಬುರಗಿ.

ಮಹಾದೇವ ಬಡಿಗೇರ. (2018). ಪ್ರಬಂಧ ಸಾಹಿತ್ಯ ಚರಿತ್ರೆ. ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ. ಕಲಬುರಗಿ.

ಮಹಾದೇವ ಬಡಿಗೇರ. (2013). ಲಲಿತ ಪ್ರಬಂಧ ಸಾಹಿತ್ಯ ಸಮೀಕ್ಷೆ. ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ. ಕಲಬುರಗಿ.

ಮಹಾದೇವ ಬಡಿಗೇರ. (2017). ಅಪೂರ್ವ ಸನ್ಯಾಸಿ (ನಾಟಕ). ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ. ಕಲಬುರಗಿ.

ಮಹಾದೇವ ಬಡಿಗೇರ. (2013). ಬದುಕಿನ ವಚನಗಳು. ಕನ್ನಡ ನಾಡು ಲೇಖಕರ ಮತ್ತು ಓದುಗರ ಸಂಘ ನಿಮಿತ. ಕಲಬುರಗಿ.

Downloads

Published

08.06.2024

How to Cite

ಭೀಮಣ್ಣ ಎಚ್. (2024). ಪ್ರಬಂಧ ಸಾಹಿತ್ಯ ಚರಿತ್ರೆಯ ವಿಸ್ತಾರ : (ಡಾ. ಮಹಾದೇವ್ ಬಡಿಗೇರರವರ ಪ್ರಬಂಧ ಸಾಹಿತ್ಯ). AKSHARASURYA, 4(02), 157 to 161. Retrieved from http://aksharasurya.com/index.php/latest/article/view/439

Issue

Section

ಪ್ರಬಂಧ. | ESSAY.