ಹರಿಹರನ ರಗಳೆಯಲ್ಲಿ ಶರಣ ಕೆಂಬಾವಿ ಭೋಗಣ್ಣ

Authors

  • ಸೋಮಶೇಖರ ಎಂ. ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಸ್. ಜಿ. ಆರ್. ಸಿ. ಎಂ. ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಬಳ್ಳಾರಿ.

Keywords:

ಕೆಂಭಾವಿ ಭೋಗಣ್ಣ, ಶಿವಶರಣ, ಶಿವಭಕ್ತ, ಜಂಗಮ ಸ್ವರೂಪಿ, ಸಾಮಾಜಿಕ ಕಳಕಳಿ, ಪವಾಡ ಪುರುಷ, ವಚನ ಚಳುವಳಿ

Abstract

ವಚನ ಸಾಹಿತ್ಯದ ಮಾತು ಬಂದ ತಕ್ಷಣವೇ ನಮ್ಮಲ್ಲಿ ಬಸವಾದಿ ಶರಣರ ಆಲೋಚನೆಗಳು ಸುಳಿದಾಡುತ್ತವೆ. ವಚನ ಸಾಹಿತ್ಯದ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿದೆ; ನಡೆಯತ್ತಲೇ ಇದೆ. ವಚನ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಬಸವಪೂರ್ವ ಯುಗ (11ನೇ ಶತಮಾನ), ಬಸವ ಯುಗ (12-13ನೇ ಶತಮಾನ), ಬಸವೋತ್ತರ ಯುಗ (15-19ನೇ ಶತಮಾನ) ಹಾಗೂ ಆಧುನಿಕ ಯುಗ (20ನೇ ಶತಮಾನ) ಎಂದೂ ವಿಭಾಗಿಸಿಕೊಳ್ಳಲಾಗಿದೆ. ಈ ಸಾಹಿತ್ಯ ಸೃಷ್ಟಿಯ ಪ್ರಮುಖ ಕಾರಣ ಹಾಗೂ ಪ್ರೇರಣೆಗಳೆಂದರೆ ಶರಣ ಧರ್ಮದ ತತ್ವಗಳ ಪ್ರಸಾರ ಮಾಡುವುದು ಹಾಗೂ ಅಂದಿನ ಸಮಾಜದಲ್ಲಿನ ಅಸಮಾನತೆಯನ್ನು ಹೊಡೆದೋಡಿಸುವುದು. ಹನ್ನೊಂದನೆಯ ಶತಮಾನದಲ್ಲಿ ಈ ಕಾರ್ಯವನ್ನು ಕೈಗೊಂಡವರು ಕೊಂಡಗುಳಿ ಕೇಶಿರಾಜ, ಕೆಂಬಾವಿ ಭೋಗಣ್ಣ, ಶಂಕರದಾಸಿಮಯ್ಯ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಸಕಳೇಶ ಮಾದರಸ, ಜೇಡರದಾಸಿಮಯ್ಯ ಹಾಗೂ ಚಂದಿಮರಸ. ಇವರೆಲ್ಲ ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯರು. ಕೆಂಬಾವಿ ಭೋಗಣ್ಣನ್ನು ಹೊರತು ಪಡಿಸಿ ಮಿಕ್ಕೆಲ್ಲರೂ ವಚನಗಳನ್ನು ರಚಿಸಿದ್ದಾರೆಂದು ಹಲವು ಸಂಶೋಧನೆಗಳಿಂದ ತಿಳಿದುಬರುತ್ತದೆ.
ಭೋಗಣ್ಣನು ವಚನಕಾರನೋ? ಅಲ್ಲವೋ? ಎಂಬುದಕ್ಕೆ ‘ಕೆಂಬಾವಿ ಭೋಗಣ್ಣ ಒಬ್ಬ ಐತಿಹಾಸಿಕ ವ್ಯಕ್ತಿಯಾಗಿದ್ದಾನೆ’ ಎಂದು ಎಂ. ಚಿದಾನಂದ ಮೂರ್ತಿ ಅವರು ‘ವಚನ ಸಾಹಿತ್ಯ’ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹಲವು ವಿದ್ವಾಂಸರು ಹರಿಹರನ ರಗಳೆಗಳ ಆಧಾರದ ಮೇಲೆಯೇ ಭೋಗಣ್ಣನ ಕಾಯಕ, ವ್ಯಕ್ತಿತ್ವವನ್ನು ದಾಖಲಿಸಿದ್ದಾರೆ. ಏನೇ ಚರ್ಚೆಗಳಿದ್ದರೂ ಭೋಗಣ್ಣನ ಕುರಿತಾದ ವೈಯಕ್ತಿಕ ಮಾಹಿತಿಗಿಂತಲೂ; ಆತನೊಬ್ಬ ಶಿವಶರಣನಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪ್ರಭುತ್ವ ವ್ಯವಸ್ಥೆಯ ಅಸಮಾನತೆಗಳಿಗೆ ಧ್ವನಿಯೆತ್ತುವ ಮುಖೇನ ಕೆಂಭಾವಿ ಪುರದ ಜನರ ಆರಾಧ್ಯ ದೈವವಾಗಿದ್ದನೆಂಬುದು ಸತ್ಯ. ಈ ವಿಚಾರವನ್ನು ಹರಿಹರ ತನ್ನ ರಗಳೆಯಲ್ಲಿ ಸೊಗಸಾಗಿ ಚಿತ್ರಿಸಿದ್ದನ್ನು ಕಾಣಬಹುದು.

References

ಕಲಬುರ್ಗಿ ಎಂ. ಎಂ. (ಸಂ). (2011). ಹರಿಹರನ ರಗಳೆಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.

ವಿಜಯಕುಮಾರ ಎಸ್. ಕಟಗಿಹಳ್ಳಿಮಠ. (2008). ಬಸವೋತ್ತರ ಯುಗದ ವಚನ ಸಾಹಿತ್ಯ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ಕಾಶೀಬಾಯಿ ಎಸ್. ಭೋಗಶೆಟ್ಟಿ. (2012). ಕೆಂಬಾವಿ ಭೋಗಣ್ಣ. ವೈಷ್ಣವಿ ಪ್ರಕಾಶನ. ಕಲಬುರ್ಗಿ.

ಕಲಬುರ್ಗಿ ಎಂ. ಎಂ. (1999). ಹರಿಹರನ ರಗಳೆಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ವಿದ್ಯಾಶಂಕರ ಎಸ್. (ಸಂ). (2001). ಸಂಕೀರ್ಣ ವಚನಸಂಪು-2. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.

ಕಲಬುರ್ಗಿ ಎಂ. ಎಂ. (ಸಂ). (2001). ಬಸವಣ್ಣನವರ ವಚನಸಂಪುಟ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.

Downloads

Published

08.06.2024

How to Cite

ಸೋಮಶೇಖರ ಎಂ. (2024). ಹರಿಹರನ ರಗಳೆಯಲ್ಲಿ ಶರಣ ಕೆಂಬಾವಿ ಭೋಗಣ್ಣ. AKSHARASURYA, 4(02), 145 to 156. Retrieved from http://aksharasurya.com/index.php/latest/article/view/438

Issue

Section

ಪ್ರಬಂಧ. | ESSAY.