ಟಿ. ವಿ ಮಾಧ್ಯಮದಲ್ಲಿ ಮಹಿಳೆಯರ ಸ್ಥಾನಮಾನ
Keywords:
ಮಹಿಳೆ, ಟಿ. ವಿ ಮಾಧ್ಯಮ, ಪತ್ರಕರ್ತೆ, ನಿರೂಪಕಿ, ನಿರ್ದೇಶಕಿ, ನಿರ್ಮಾಪಕಿAbstract
ಟಿ. ವಿ ಮಾಧ್ಯಮದಲ್ಲಿ ಮಹಿಳೆಯ ಸ್ಥಾನಮಾನಗಳ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಜನಸಾಮಾನ್ಯರ ಮೇಲೆ ಅತಿ ಹೆಚ್ಚು ಪ್ರಭಾವವನ್ನು ಬೀರುತ್ತಿವೆ. ಸುದ್ದಿಯಾಗಲಿ, ಮನರಂಜನೆಯಾಗಲಿ ಇನ್ನೂ ಮತ್ತಿತರ ವಿಷಯಗಳಾಗಲಿ ದಿನದಿಂದ ದಿನಕ್ಕೆ ಭಿನ್ನತೆಯನ್ನು ಪಡೆದುಕೊಳ್ಳುತ್ತಿವೆ. ಈ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರಗಳೂ ಸಹ ಬದಲಾಗುತ್ತಿವೆ. ಮಾಧ್ಯಮಗಳು ಮಹಿಳೆಯನ್ನು ಹೆಚ್ಚು ಹೆಚ್ಚು ಕಡೆ ಪ್ರಬಲೆಯಾಗಿ, ಧೈರ್ಯದ ಮೂರ್ತಿಯಾಗಿ, ಸಧೃಡೆಯಾಗಿ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ಅದಕ್ಕೆ ವೈರುಧ್ಯವೆಂಬಂತೆ ಖಳನಾಯಕಿಯಾಗಿ, ಧೂರ್ತೆಯಾಗಿ, ಅಬಲೆಯಾಗಿ ಬಿಂಬಿಸುತ್ತಲೂ ಇವೆ. ಉದ್ಯೋಗಸ್ಥ, ವಿಚಾರವಂತ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಮಾಧ್ಯಮಗಳು ತಮ್ಮ ಕಾರ್ಯಕ್ರಮಗಳನ್ನು ರೂಪಿಸುವುದು ತೀರಾ ಕಡಿಮೆ. ಹಾಗೆಂದ ಮಾತ್ರಕ್ಕೆ ಮಾಧ್ಯಮದಿಂದ ಮಹಿಳೆಗೆ ಏನೂ ಅನುಕೂಲಗಳಾಗಿಲ್ಲ ಎಂದಲ್ಲ. ಆಕೆಯನ್ನು ದಿಟ್ಟೆಯನ್ನಾಗಿ ಬೆಳೆಸಲು ಮಾಧ್ಯಮ ಅನೇಕ ದಾರಿಗಳನ್ನು ಮಾಡಿಕೊಟ್ಟಿದೆ. ಭಾರತದಲ್ಲಿ ಗಂಭೀರ ಪತ್ರಿಕೋದ್ಯಮ ಮಹಿಳೆಯ ಸ್ಥಾನಮಾನಗಳನ್ನು ಕುಗ್ಗಿಸಿಲ್ಲ. ಪತ್ರಕರ್ತೆಯಾಗಿ, ನಟಿಯಾಗಿ, ನಿರೂಪಕಿಯಾಗಿ, ಕಾರ್ಯಕ್ರಮ ನಿರ್ವಾಹಕಿಯಾಗಿ, ವಾರ್ತಾವಾಚಕಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಮಾಧ್ಯಮ ಸಂಸ್ಥೆಗಳಲ್ಲಿ ಮಹಿಳೆ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಆದರೆ ಎಷ್ಟೆ ಸಾಧನೆಯನ್ನು ಆಕೆ ಮಾಡುತ್ತಿದ್ದರೂ ಶೋಷಣೆಯ ಮುಖಗಳು ಮಾತ್ರ ಮುಚ್ಚಿಲ್ಲ. ಹೆಣ್ಣನ್ನು ಅಧಿಕಾರಯುತವಾದ ಸ್ಥಾನಗಳಿಗೆ ನೇಮಿಸುವುದರಿಂದ ಹಿಡಿದು ಆಕೆಯನ್ನು ಬಿಂಬಿಸುತ್ತಿರುವ ರೀತಿ, ಆಕೆಯ ಉಡುಗೆ – ತೊಡುಗೆಗಳು ಎಲ್ಲಾ ವಿಚಾರಗಳಲ್ಲೂ ಶೋಷಣೆ ನಡೆಯುತ್ತಿದೆ. ಒಂದು ಕಡೆ ಮಾಧ್ಯಮಗಳ ಮೂಲಕ ಹೆಣ್ಣು ಹೆಚ್ಚು ಬೆಳವಣಿಗೆಯನ್ನು ಕಾಣುತ್ತಿದ್ದರೆ ಮತ್ತೊಂದು ಕಡೆ ಹೆಣ್ಣಿನ ಮೇಲೆ ಶೋಷಣೆಗಳು ನಡೆಯುತ್ತಿವೆ. ಈ ಎಲ್ಲಾ ಅಂಶಗಳ ಕುರಿತು ಚರ್ಚೆ ನಡೆಯಬೇಕಿದೆ.
References
ಶ್ರೀಮತಿ ಎಚ್. ಎಸ್. (2009). ಸ್ತ್ರೀವಾದಿ ಭಾಷಾಶಾಸ್ತ್ರ ಪ್ರವೇಶಿಕೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಕಲಾವತಿ ಜೆ. ಬಿ. (2010). ಜಾಹಿರಾತುಗಳಲ್ಲಿ ಮಹಿಳಾ ಪ್ರತಿನಿಧೀಕರಣ. ಪ್ರಗತಿ ಗ್ರಾಫಿಕ್ಸ್. ಬೆಂಗಳೂರು.
ಸರೋಜಾ ಕೆ. (2004). ಮಹಿಳೆ ಮತ್ತು ಸಮೂಹ ಮಾಧ್ಯಮಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಗೀತಾ ಪ್ರಸಾದ್. (2009). ಆಧುನಿಕ ಮಹಿಳಾ ಅಭಿವ್ಯಕ್ತಿ. ಧಾತ್ರಿ ಪುಸ್ತಕ. ಬೆಂಗಳೂರು.
ನಾಗಮಣಿ ಎಸ್. ರಾವ್. (2012). ಸ್ತ್ರೀಪಥ. ನವಕರ್ನಾಟಕ ಪ್ರಕಾಶನ. ಬೆಂಗಳೂರು.
ಮಂಜುಳಾ ಸಿ. ಪಿ. (05-01-2021). ಮಾಧ್ಯಮಗಳಲ್ಲಿ ಮಹಿಳೆ: ಅಗೋಚರ ಅಡೆತಡೆ (ಲೇಖನ). ಋತುಮಾನ.
ಸಂಜ್ಯೋತಿ ವಿ. ಕೆ. (31 ಡಿಸೆಂಬರ್ 2019). ಸುದ್ದಿ, ಸಿನೆಮಾ ಮಾಧ್ಯಮಗಳಲ್ಲಿ ಹೆಣ್ಣು ಮತ್ತು ನೋಟ (ಲೇಖನ). ವಾರ್ತಾಭಾರತಿ.