ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ: ಸಂಕೇತಗಳ ಪರಾಮರ್ಶೆ
Keywords:
ಜ್ಯೋತಿಗಳು, ಗಿಡಮೂಲಿಕೆ/ಬೇರು, ಹಾವು/ನಾಗಪ್ಪ, ಕಥೆ ಮತ್ತು ಹಾಡು, ಕನಸು, ಹಗಲು ಮತ್ತು ರಾತ್ರಿAbstract
ಪ್ರಮುಖ ಚಿಂತಕರಲ್ಲಿ ಒಬ್ಬರಾದ ಎ ಕೆ ರಾಮಾನುಜನ್ ಅವರು ಹೇಳಿದ ಜನಪದ ಕಥೆಯನ್ನು ಆಧರಿಸಿ ನಾಟಕ ಕ್ಷೇತ್ರದ ಧೀಮಂತ ಪ್ರತಿಭೆಗಳಾದ ಗಿರೀಶ್ ಕಾರ್ನಾಡರು ನಾಗಮಂಡಲ ನಾಟಕವನ್ನೂ, ಕಂಬಾರರು ಸಿರಿಸಂಪಿಗೆ ನಾಟಕವನ್ನೂ ರಚಿಸಿದ್ದಾರೆ. ಎರಡು ನಾಟಕಗಳ ವಸ್ತು ಒಂದೇ ಆದರೂ ನಿರೂಪಣಾ ಶೈಲಿ, ನಾಟಕದ ತಂತ್ರಗಾರಿಕೆ ಹಾಗೂ ಧೋರಣೆಗಳು ಭಿನ್ನವಾಗಿವೆ. ನಾಟಕಗಳು ಮೇಲ್ನೋಟಕ್ಕೆ ಸರಳವಾದ ವಸ್ತುವನ್ನು ಒಳಗೊಂಡಂತೆ ಕಂಡರೂ ಓದುಗರಿಗೆ ಒಂದು ಸುಂದರವಾದ, ಅದ್ಭುತವಾದ ಸತ್ಯದ ಅನಾವರಣ ಮಾಡಿಸುತ್ತದೆ. ನಾಗಮಂಡಲ ನಾಟಕವು ಸಾಂಸ್ಕೃತಿಕ, ಧಾರ್ಮಿಕ, ಮಾನಸಿಕ ಮತ್ತು ಸಾಮಾಜಿಕ ಜೀವನವನ್ನು ಸಂಕೇತಗಳ ಬಳಕೆಯ ಮೂಲಕ ಪ್ರತಿಬಿಂಬಿಸುತ್ತದೆ. ನಾಟಕವು ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಪುರುಷನ ನ್ಯೂನ್ಯತೆಗಳನ್ನು, ವರ್ತನೆಯ ರೀತಿಯನ್ನು ಹಾಗೂ ಪುರಾತನ ಸಾಂಪ್ರದಾಯಿಕ ಮೌಲ್ಯಗಳು ಮತ್ತು ನಂಬಿಕೆಗಳ ಬಗೆಗೆ ದೋಷಾರೋಪಣೆ ಮಾಡುತ್ತದೆ. ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಪರಿಕಲ್ಪನೆಗಳಾದ ಮಹಿಳೆಯರ ಸ್ಥಾನಮಾನ, ಗಂಡು-ಹೆಣ್ಣಿನ ಸಂಬಂಧ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳು ಮಹಿಳೆಯರ ಮೇಲೆ ಉಂಟುಮಾಡಬಹುದಾದ ಪರಿಣಾಮ ಮತ್ತು ಪ್ರಭಾವ ಮುಂತಾದ ವಿಚಾರಗಳನ್ನು ನಾಟಕವು ಚರ್ಚಿಸುತ್ತದೆ.
ನಾಟಕದಲ್ಲಿ ಬಳಸುವ ಸಾಂಸ್ಕೃತಿಕ ಸಂಕೇತಗಳು, ಮೌಲ್ಯಗಳು, ವರ್ತನೆಗಳು, ನಂಬಿಕೆಗಳು, ಕಲ್ಪನೆಗಳು, ಮೂಢನಂಬಿಕೆಗಳು ಭಾರತೀಯ ಸಂಸ್ಕೃತಿ ಮತ್ತು ಸಮುದಾಯವನ್ನು ಪ್ರತಿಬಿಂಬಿಸುತ್ತವೆ. ಈ ಹಿನ್ನೆಲೆಯಲ್ಲಿ ನಾಟಕದಲ್ಲಿ ಬಳಕೆಯಾಗಿರುವ ಸಂಕೇತಗಳು ನಾಟಕದಲ್ಲಿನ ಮುಖ್ಯ ಪಾತ್ರಗಳ ಬೆಳವಣಿಗೆಗೆ ಸಹಾಯಕವಾಗುವಂತೆ ಮೂಡಿರುವುದು ಕಂಡುಬರುತ್ತದೆ.
References
ಗಿರೀಶ್ ಕಾರ್ನಾಡ್. (1988). ನಾಗಮಂಡಲ. ಮನೋಹರ ಗ್ರಂಥ ಮಾಲಾ. ಧಾರವಾಡ.
ಚಂದ್ರಶೇಖರ ಕಂಬಾರ. (2012). ಸಿರಿಸಂಪಿಗೆ. ಅಂಕಿತ ಪುಸ್ತಕ. ಬೆಂಗಳೂರು.
ಕೀರ್ತಿನಾಥ ಕುರ್ತಕೋಟಿ. (2010). ಸಿರಿಸಂಪಿಗೆ ನಾಟಕದ ಮುನ್ನುಡಿ. ಅಂಕಿತ ಪುಸ್ತಕ. ಬೆಂಗಳೂರು.
ಕೀರ್ತಿನಾಥ ಕುರ್ತಕೋಟಿ. (1998). ನೂರು ಮರ ನೂರು ಸ್ವರ. ಕನ್ನಡ ವಿಶ್ವವಿದ್ಯಾಲಯ. ಹಂಪಿ.