ತೇಜಸ್ವಿ ಕಂಡ : ಪರಿಸರ ಜಗತ್ತು

Authors

  • Umesh Naik N. Huliyar

Abstract

ತೇಜಸ್ವಿಯವರು ನವ್ಯ ಕಾಲಘಟ್ಟದಲ್ಲಿ ಬರುವ ಲೇಖಕರಲ್ಲಿ ಸ್ವತಂತ್ರ ಪ್ರವೃತ್ತಿಯ ಬರಹಗಾರರು ಹಾಗೂ ಸಮಾಜವಾದಿ ಚಿಂತಕ. ಸಮಾಜದಲ್ಲಿ ತಾಂಡವವಾಡುತ್ತಿದ್ದ ಬಡತನ, ಅಸಮಾನತೆ, ಶೋಷಣೆಯ ಬಗ್ಗೆ ಸಾಹಿತ್ಯದ ಮೂಲಕ ಸದಾ ಧ್ವನಿ ಎತ್ತುತ್ತಿದ್ದ ಅದ್ಭುತ ಲೇಖಕ. ಇಡೀ ಬದುಕಿನ ತುಂಬಾ ರಚಿಸಿದ ಸಾಹಿತ್ಯದಲ್ಲಿ ಕಲೆ, ಸಂಸ್ಕೃತಿ, ಪರಿಸರ ಮತ್ತು ಕೃಷಿಯ ವಿಷಯಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಪಟ್ಟಣ ಜೀವನವನ್ನು ಅಷ್ಟೊಂದು ಇಷ್ಟಪಡದ ತೇಜಸ್ವಿಯವರು ಪರಿಸರದೊಂದಿಗೆ ಬದುಕು ಕಳೆದ ಪರಿಸರ ಪ್ರೇಮಿ. ಇವರು ಬೇರೆ ಲೇಖಕರಿಗಿಂತ ಭಿನ್ನವಾಗಿ ಕಾಣುತ್ತಾರೆ. ಯಾವುದೇ ಕಾಲ್ಪನಿಕ ವಸ್ತು ವಿಷಯವನ್ನು ತಮ್ಮ ಕೃತಿಗಳಲ್ಲಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳದೇ ಅವರ ಸುತ್ತಮುತ್ತಲಿನ ದೈನಂದಿನ ಬದುಕಿನಲ್ಲಿ ನೋಡಿದ ವಿಚಾರ ಸಾಹಿತ್ಯದ ಮುಖೇನ ಕುತೂಹಲ ಕೆರಳಿಸುವ ರೀತಿಯಲ್ಲಿ ಕತೆಗಳನ್ನು ಸೃಷ್ಟಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ತೇಜಸ್ವಿಯವರಿಗೆ ಸಲ್ಲುತ್ತದೆ.

References

ಪರಿಸರದ ಕತೆ(1991) : ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ ಸರಸ್ವತಿಪುರಂ, ಮೈಸೂರು

ಕರ್ವಾಲೋ (1980): ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ, ಸರಸ್ವತಿಪುರಂ-ಮೈಸೂರು.

ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು(1993): ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ, ಸರಸ್ವತಿಪುರಂ-ಮೈಸೂರು.

ಪೆದ್ದು ಚೆರುವಿನ ರಾಕ್ಷಸ (ಕಾಡಿನ ಕಥೆಗಳು)1993: ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ, ಸರಸ್ವತಿಪುರಂ-ಮೈಸೂರು.

ಕಿರಿಯರಿಗಾಗಿ ಪರಿಸರ (1991) ಬೇರೆಯವರೊಡನೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ, ಸರಸ್ವತಿಪುರಂ-ಮೈಸೂರು.

Downloads

Published

05.02.2023

How to Cite

Umesh Naik N. Huliyar. (2023). ತೇಜಸ್ವಿ ಕಂಡ : ಪರಿಸರ ಜಗತ್ತು. AKSHARASURYA, 2(02), 04 to 07. Retrieved from http://aksharasurya.com/index.php/latest/article/view/43

Issue

Section

Article