ಪ್ರಸ್ತುತ ರಂಗ ಶಿಬಿರಗಳಲ್ಲಿ ಮಕ್ಕಳ ನಾಟಕಗಳ ಸ್ವರೂಪ
Keywords:
ರಂಗಭೂಮಿ ಹಿನ್ನೆಲೆ, ತರಬೇತಿಯ ಅಂಶಗಳು, ಬೇಸಿಗೆ ಶಿಬಿರದ ರೂಪರೇಷಗಳು, ಶಿಬಿರಾರ್ಥಿಗಳ ಕಲಿಕೆಯ ಕ್ರಮAbstract
ಬೇಸಿಗೆ ರಜೆ ಬಂದರೆ ಸಾಕು ಮಕ್ಕಳಿಗೆ ಸ್ವಲ್ಪ ಮನಸ್ಸು ಹಗುರವಾಗುತ್ತದೆ. ಈ ಮನಸ್ಸು ಒಂದು ರೀತಿಯಲ್ಲಿ ಗಿಡದಲ್ಲಿ ಬೆಳೆಯುತ್ತಿರುವ ಒಂದು ಹೂವಿನ ಮೊಗ್ಗುವಿದ್ದಾದಂತೆ. ಈ ಮೊಗ್ಗು ಹೂವಾಗಿ ಹರಳುವುದಕ್ಕೆ ಹೇಗೆ ಪ್ರಯತ್ನಿಸುತ್ತದೆಯೋ ಹಾಗೆ ಮಕ್ಕಳ ಮನಸ್ಸು ಸಹ ಬೇಸಿಗೆ ಯಾವಾಗ ಬರುತ್ತದೆ, ನಾವು ಬೇಸಿಗೆ ಶಿಬಿರದಲ್ಲಿ ಕುಣಿದು ಕೊಪ್ಪಳಿಸೋದು ಯಾವಾಗ ಎಂದು ಮಕ್ಕಳ ಮನಸ್ಸು ಚಟಪಡಿಸುತ್ತಿರುತ್ತದೆ. ಬೇಸಿಗೆ ಶಿಬಿರದಲ್ಲಿ ಬಣ್ಣ ಹಚ್ಚಿ ಅಲಂಕಾರ ಮಾಡಿ ಇನ್ನಷ್ಟು ಮನಸ್ಸು ಹೂವಿನಂತೆ ಹರಳುವುದಕ್ಕೆ ರಂಗ ಶಿಬಿರಗಳು ಮಕ್ಕಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ರಂಗಶಿಬಿರದ ಪೋಸ್ಟರ್, ಬಿತ್ತಿ ಚಿತ್ರಗಳು, ಹಾಗೂ ಮೊಬೈಲ್ ನಿಂದ ಹರಿದಾಡುವ ಸೋಶಿಯಲ್ ಮೀಡಿಯಾ ಪ್ರಚಾರದ ಸದ್ದು ಜೋರಾದಾಗ ಮಕ್ಕಳ ಪೋಷಕರಿಗೆ ಸ್ವಲ್ಪ ನೆಮ್ಮದಿಯ ಬಿಡು ಸಿಕ್ಕಂತಾಗುತ್ತದೆ. ಶಾಲೆ ರಜೆ ಕೊಟ್ಟರೆ ಸಾಕು ಮಕ್ಕಳನ್ನು ಒಂದು ಕಡೆ ಹಿಡಿದಿಡುವುದು ಪೋಷಕರಿಗೆ ದೊಡ್ಡ ಸಾವಲಾಗಿರುತ್ತದೆ. ಮಕ್ಕಳು ಒಂದು ಕಡೆ ಕುಳಿತಲ್ಲೇ ಕುಳಿತುಕೊಳ್ಳದೆ ನಿಂತಲ್ಲೇ ನಿಂತುಕೊಳ್ಳದೆ ಮಕ್ಕಳ ತುಂಟಾಟ ಹೆಚ್ಚಾದಾಗ ಈ ರಂಗಶಿಬಿರಗಳು ಆ ಮಕ್ಕಳನ್ನು ಕೈಬೀಸಿ ಕರೆದು ಸಾಂಸ್ಕೃತಿಕ ಕಲೆಗಳ ಶಿಕ್ಷಣವನ್ನು ಕೊಡಲಿಕ್ಕೆ ಮುಂದಾಗುವುದನ್ನು ನಾವು ಇವತ್ತಿಗೂ ನೋಡುತ್ತಾ ಬಂದಿದ್ದೇವೆ. ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಾಗಿರುತ್ತದೆ. ಆ ಕ್ರಿಯಾಶೀಲತೆಗೆ ಅನುಗುಣವಾಗಿ ರಂಗ ಶಿಬಿರಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಿಸಿಕೊಂಡು ಏಕಾಗ್ರತೆಯಿಂದ ಕಲಿಕೆಗಳ ಕಡೆ ಮುಖ ಮಾಡಿದಾಗ ರಂಗ ಶಿಬಿರಗಳಿಗೆ ಪರಿಪೂರ್ಣವಾದ ಅರ್ಥ ಸಿಗುತ್ತದೆ. ರಂಗಶಿಬಿರದಲ್ಲಿ ಭಾಗವಹಿಸಿದ ಮಗು ತನ್ನ ಇಡೀ ಜೀವನದ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದರ ಜೊತೆಗೆ ರಂಗ ಶಿಬಿರಗಳಲ್ಲಿ ತನ್ನನ್ನು ತಾನು ಮರೆತು ಸಮಾಜದಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಾಧಕನಾಗಿ ಹೊರಹೊಮ್ಮಲಿಕ್ಕೆ ಸಾಧ್ಯವಾಗುತ್ತದೆ. ರಂಗಶಿಬಿರಗಳಲ್ಲಿ ಪಾಲ್ಗೊಂಡ ನೂರಾರು ಸಾಧಕರ ಇತಿಹಾಸವನ್ನು ರಂಗಭೂಮಿಯಲ್ಲಿ ಕಾಣಬಹುದಾಗಿದೆ. ರಂಗಭೂಮಿಯ ಇತಿಹಾಸವನ್ನು ಸೃಷ್ಟಿಸಲಿಕ್ಕೆ ರಂಗಶಿಬಿರಗಳು ಮುಖ್ಯ ಪಾತ್ರ ವಹಿಸುತ್ತವೆ. ರಂಗಶಿಬಿರಗಳು ಇಲ್ಲದೆ ರಂಗಭೂಮಿ ಬೆಳವಣಿಗೆ ಕಾಣಲಿಕ್ಕೆ ಸಾಧ್ಯವಿಲ್ಲ, ರಂಗಭೂಮಿ ಇಲ್ಲದೆ ರಂಗಶಿಬಿರಗಳು ಹುಟ್ಟಲಿಕ್ಕೆ ಸಾಧ್ಯವಿಲ್ಲ. ರಂಗ ಶಿಬಿರಗಳು ಪ್ರತಿಯೊಂದು ಮಗುವಿನ ವಿಕಾಸಕ್ಕೆ ಶಕ್ತಿಯನ್ನು ತುಂಬಿ ಸಮಾಜದೊಟ್ಟಿಗೆ ಸಾಗಲಿಕೆ ಚಾಲನೆಯನ್ನು ನೀಡುತ್ತದೆ. ಆದ್ದರಿಂದ ರಂಗ ಶಿಬಿರಗಳ ಪ್ರಾಮುಖ್ಯತೆ ಮತ್ತು ಉದ್ದೇಶ, ಮಹತ್ವದ, ಜೊತೆಗೆ ಪ್ರಸ್ತುತ ರಂಗ ಶಿಬಿರಗಳ ಅವಲೋಕನವನ್ನು ರಂಗಶಿಬಿರಗಳಲ್ಲಿ ಮಕ್ಕಳ ನಾಟಕಗಳ ಸ್ವರೂಪವನ್ನು ಹಾಗೂ ಈ ಲೇಖನದಲ್ಲಿ ಕ್ಷೇತ್ರಕಾರ್ಯ ವಿಧಾನ ಹಾಗೂ ವಿಶ್ಲೇಷಣಾತ್ಮಕ ವಿಧಾನವನ್ನು ಬಳಸಿಕೊಂಡು ನಾನು ಕಂಡುಕೊಂಡಂತಹ ರಂಗ ಶಿಬಿರಗಳ ಫಲಿತಗಳನ್ನು ಚರ್ಚಿಸಲಿದ್ದೇನೆ.
References
ಅಕ್ಷರ ಕೆ. ವಿ. (೧೯೯೪). ರಂಗ ಪ್ರಪಂಚ. ಅಕ್ಷರ ಪ್ರಕಾಶನ. ಸಾಗರ.
ಆದ್ಯ ರಂಗಾಚಾರ್ಯ. (೧೯೮೫). ನಾಟ್ಯಶಾಸ್ತ್ರ. ಅಕ್ಷರ ಪ್ರಕಾಶನ. ಸಾಗರ.
ಕೃಷ್ಣಶಾಸ್ತ್ರಿ ಎ. ಆರ್. (೧೯೯೦). ಸಂಸ್ಕೃತ ನಾಟಕ. ಬಿ. ಪಾರ್ಥಸಾರಥಿ. ಬೆಂಗಳೂರು.
ರಾಮನಾಥ್ ಎಚ್. ಕೆ. (೧೯೯೦). ಕನ್ನಡ ರಂಗಭೂಮಿಯ ವಿಕಾಸ. ಅಭಿನಯ ಪ್ರಕಾಶನ. ಮೈಸೂರ್.
ನಿಂಗು ಸೊಲಗಿ. (೨೦೧೨). ಮಕ್ಕಳ ರಂಗಭೂಮಿ: ಪ್ರದರ್ಶನ-ಪ್ರಕ್ರಿಯೆ. ಚಿಲಿಪಿಲಿ ಪ್ರಕಾಶನ. ಧಾರವಾಡ.
ಅಮೃತಾ ಆರ್. ಕಟಕೆ. (೨೦೦೨). ಹೈದರಾಬಾದ್ ಕರ್ನಾಟಕದ ಸಾಹಿತ್ಯ: ಒಂದು ಅಧ್ಯಯನ. ಯಮುನಾ ಪ್ರಕಾಶನ. ಗುಲ್ಬರ್ಗ.
ಪ್ರಸನ್ನ. (೨೦೦೭). ನಟನೆಯ ಪಾಠಗಳು. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ಮರುಳಸಿದ್ದಪ್ಪ ಕೆ. (೨೦೦೩). ಒಡನಾಟ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.