ಹೆಣ್ಣು ಹದ್ದಿನ ಸ್ವಯಂವರ: ಆಧುನಿಕತೆ ಹಾಗೂ ಸ್ತ್ರೀ ವಾದವನ್ನು ಅನುಲಕ್ಷಿಸಿ
Keywords:
ಆಧುನಿಕತೆ, ತಂತ್ರಜ್ಞಾನ, ಸ್ತ್ರೀವಾದ, ಹೆಣ್ಣು-ಗಂಡು, ಸಮಾನತೆAbstract
ಬಾನು ಮುಶ್ತಾಕ್ ರವರ ಬಹುತೇಕ ಕತೆಗಳು ಮಹಿಳೆಯ ಬದುಕಿನ ಕುರಿತು ಆಶಾವಾದವನ್ನು ಹೊಂದಿವೆ. ಇತ್ತೀಚೆಗೆ ಬಿಡುಗಡೆಯಾದ ಅವರ ಕಥಾಸಂಕಲನ ‘ಹೆಣ್ಣು ಹದ್ದಿನ ಸ್ವಯಂವರ’ ದಲ್ಲಿನ ಇದೇ ಶಿರ್ಷಿಕೆಯ ಕತೆ ಆಧುನಿಕತೆ ಹಾಗೂ ಸ್ತ್ರೀವಾದಗಳ ನೈತಿಕತೆಯ ಹುಡುಕಾಟದಲ್ಲಿ ತೊಡಗಿರುವ ಆಶಾವಾದವನ್ನು ಝಳಪಿಸಿದ ಕತೆಯೆಂದೆ ಅನಿಸಿದೆ. ಇಲ್ಲಿ ಅನ್ಯ ಬದುಕಿನಿಂದ ಪಡೆದುಕೊಂಡ ಆಧುನಿಕತೆ ಹಾಗೂ ಸಹಜ ಸಂವೇದಿತ ಆಧುನಿಕತೆ – ಇವೆರಡೂ ಸಹ ಪರಸ್ಪರ ಪ್ರಭಾವಕ್ಕೆ, ಪ್ರಚೋದನೆಗೆ ಒಳಗಾಗಿರುವಂತಿದೆ. ಇಂದು ಕಂಡುಬರುತ್ತಿರುವ ಸೃಜನಶೀಲತೆ ಮತ್ತು ಸ್ವಂತಿಕೆಯ ಹೊಸ ಬದುಕಿನ ದೃಷ್ಟಿಕೋನವು ಇಲ್ಲಿದೆ. ಅಲ್ಲದೆ, ಸ್ತ್ರೀವಾದಿ ಚಿಂತನೆಯ ತಾತ್ವಿಕತೆಯಾದ ಪ್ರಜ್ಞೆಯ ಜಾಗೃತಿ ಹಾಗೂ ಸ್ವಾಭಿವ್ಯಕ್ತಿಯ ಜಿಜ್ಞಾಸೆಯೂ ಇಲ್ಲಿ ಒಡಮೂಡಿದೆ. ಲೇಖಕಿಯ ಹೆಣ್ಣಿನ ಅಸ್ತಿತ್ವದ ಭರವಸೆಯ ಕನಸು ಹಾಗೂ ಬದಲಾಗಬಹುದಾದ ಭವಿಷ್ಯದ ಎಚ್ಚರಿಕೆ ಇಲ್ಲಿದೆ. ಒಂದು ಕಾಲದಲ್ಲಿ ಗಂಡಿನ ಮೇಲುಗೈ, ಮತ್ತೊಂದು ಕಾಲಕ್ಕೆ ಹೆಣ್ಣಿಗೆ ಮನ್ನಣೆ. ಮನುಷ್ಯನ ಪ್ರಜ್ಞಾ ಪೂರ್ವಕ ಪ್ರಯತ್ನದಿಂದ ಮಾತ್ರ ಇಬ್ಬರೂ ಸಮಾನರು ಎಂಬ ಚಿಂತನೆಯನ್ನು ನೆಲೆಗೊಳಿಸಲು ಸಾಧ್ಯ.
References
ಬಾನು ಮುಶ್ತಾಕ್. (2023). ಹೆಣ್ಣು ಹದ್ದಿನ ಸ್ವಯಂವರ (ಕ.ಸಂ). ಅಭಿರುಚಿ ಪ್ರಕಾಶನ. ಮೈಸೂರು.
ಸುಮಿತ್ರಾಬಾಯಿ ಬಿ. ಎನ್. (2018). ಸ್ತ್ರೀವಾದ-ಒಂದು ಅವಲೋಕನ. ಅಹರ್ನಿಶಿ ಪ್ರಕಾಶನ. ಶಿವಮೊಗ್ಗ.
ತೇಜಸ್ವಿನಿ ನಿರಂಜನ & ಸೀಮಂತಿನಿ ನಿರಂಜನ. (1994) ಸ್ತ್ರೀವಾದಿ ಸಾಹಿತ್ಯ ವಿಮರ್ಶೆ. ಕ್ರೈಸ್ಟ್ ಕಾಲೇಜು ಕನ್ನಡ ಸಂಘ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.