ಗಣ್ಯರು ಕಂಡಂತೆ ತಲ್ಲೂರು ರಾಯನಗೌಡರು

Authors

  • ಯಲ್ಲಪ್ಪ ಬಸಪ್ಪ ಕಡಕೋಳ ಸಂಶೋಧನಾ ವಿದ್ಯಾರ್ಥಿ, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

Keywords:

ತಲ್ಲೂರು, ರಾಯನಗೌಡರು, ಸ್ವಾತಂತ್ರ್ಯ ಹೋರಾಟ, ಕಿತ್ತೂರು, ಸಾಹಿತಿ, ಸ್ಮರಣೆ, ಬಂಡಾಯ, ದತ್ತಿ ಪಾಟೀಲ

Abstract

“ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ” ಬಹುಮುಖಿಯಾಗಿ ನಡೆಯುವಂತದ್ದು. ರಾಯನಗೌಡರು ಬಹುಮುಖ ವ್ಯಕ್ತಿತ್ವ ಹೊಂದಿದವರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣ ಜೊತೆಗೆ ಸಾಹಿತ್ಯ ಸಂಶೋಧನೆಯಲ್ಲಿ ಅವರ ವ್ಯಕ್ತಿತ್ವವನ್ನು ದಾಖಲೆಗಳ ಮೂಲಕ ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಅವರ ನಿಧನ 30-9-1982 ರ ನಂತರ ಅವರ ಅಳಿಯ ಅಂದರೆ ರಾಯನಗೌಡರ ಮಗಳಾದ ದೇವಿಕಾರಾಣಿಯವರ (ಸದ್ಯ ಬೆಂಗಳೂರಿನಲ್ಲಿ ಇದ್ದಾರೆ) ಅವರ ಪತಿ ದಿವಂಗತ ಪ್ರೊ. ಬಸನಗೌಡ. ಆರ್. ಪಾಟೀಲರು ತಮ್ಮ ಮಾವನವರ ವ್ಯಕ್ತಿತ್ವ ಕುರಿತು ಅಗ್ರಗಣ್ಯ ಸ್ವಾತಂತ್ರ್ಯ ಯೋಧ ತಲ್ಲೂರು ರಾಮನಗೌಡರು ಜೀವನ ದರ್ಶನ ಗ್ರಂಥ ಪ್ರಕಟಣೆಯ ಯೋಜನೆ ಹಾಕಿಕೊಂಡ ಸಂದರ್ಭದಲ್ಲಿ, ಅವರು ರಾಯನಗೌಡರ ಅತ್ಯಂತ ನಿಕಟವರ್ತಿಗಳನ್ನು ಭೇಟಿಯಾದರು. ಅವರಲ್ಲಿ ಬಹುತೇಕರು ಇಂದು ಜೀವಂತವಿಲ್ಲ. ಅಂತವರ ಅನುಭವ ಧಾರೆಗಳು ಬರಹ ರೂಪದಲ್ಲಿ ರಾಯನಗೌಡರ ವ್ಯಕ್ತಿತ್ವವನ್ನು ತೆರೆದಿಟ್ಟವು. ಈ ಕೃತಿಯಲ್ಲಿ ಅವುಗಳನ್ನು ನಾವು ಕಾಣಬಹುದು. ಹಾಗೆಯೇ ಎಂ. ಎಂ. ಕಲಬುರ್ಗಿಯವರು ಕೂಡ ಕಿತ್ತೂರು ಸಂಸ್ಥಾನ ಭಾಗ 1, 2, 3, ಕೃತಿಗಳಲ್ಲಿ ರಾಯನಗೌಡರ ವ್ಯಕ್ತಿತ್ವವನ್ನು ತೆರೆದಿಟ್ಟಿರುವರು. ಜೊತೆಗೆ ಎಂ. ಎಂ. ಕಲಬುರ್ಗಿಯವರ ಭಾರತ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಲಿಂಗಾಯತರ ಪಾತ್ರ ಎಂಬ ಕೃತಿಯಲ್ಲಿಯೂ ಕೂಡ ರಾಯನಗೌಡರ ಹೋರಾಟದ ಹಾದಿಯನ್ನು ದಾಖಲಿಸಿರುವರು. ಈ ದಿಸೆಯಲ್ಲಿ ಈ ಎಲ್ಲ ಕೃತಿಗಳ ಅವಲೋಕನದ ಜೊತೆಗೆ ರಾಯನಗೌಡರ ಸಮಗ್ರ ವ್ಯಕ್ತಿತ್ವವನ್ನು ಹಿಡಿದಿಡುವ ಪ್ರಯತ್ನ ಈ ಅಧ್ಯಾಯದಲ್ಲಿ ಸಾಗಿದೆ.

References

ತಳವಾರ ಆರ್. ಎಫ್. (1991). ತಲ್ಲೂರು ರಾಯನಗೌಡರು. ವೀರಶೈವ ಅಧ್ಯಯನ ಸಂಸ್ಥೆ. ಗದಗ.

ಬಸನಗೌಡ ಆರ್. ಪಾಟೀಲ. (2010). ಸಂಶೋಧಕ ಸಾಹಿತಿ ತಲ್ಲೂರು ರಾಯನಗೌಡರು. ತಲ್ಲೂರು ರಾಯನಗೌಡ ವಿಶ್ವಸ್ಥ ಸಂಸ್ಥೆ. ಬೆಂಗಳೂರು.

ಬಸನಗೌಡ ಆರ್. ಪಾಟೀಲ. (2010) ಮಲ್ಲಸರ್ಜ ಕಾವ್ಯ ಮತ್ತು ಕಿತ್ತೂರು ಬಂಡಾಯ. ತಲ್ಲೂರು ರಾಯನಗೌಡ ವಿಶ್ವಸ್ಥ ಸಂಸ್ಥೆ. ಬೆಂಗಳೂರು.

ಗೋಪಾಲರಾವ್ ಎಚ್. ಎಸ್. (2020) ಕರ್ನಾಟಕ ಏಕೀಕರಣ ಇತಿಹಾಸ. ನವಕರ್ನಾಟಕ ಪಬ್ಲಿಕೇಷನ್. ಬೆಂಗಳೂರು.

ತಲ್ಲೂರು ರಾಯನಗೌಡರು & ಕರ್ಕಿ ಡಿ. ಎಸ್. (1963) ಶರೀಫರ ಜನಪ್ರಿಯ ಪದಗಳು. ಶರೀಫ್ ಸಾಹಿತ್ಯ ಸಮೀತಿ. ಶಿಶುವಿನಾಳ (ಹುಬ್ಬಳ್ಳಿ).

ಬಸನಗೌಡ ಆರ್. ಪಾಟೀಲ. (2010) ಅಗ್ರಗಣ್ಯ ಸ್ವಾತಂತ್ರ್ಯ ಯೋಧ ತಲ್ಲೂರು ರಾಯನಗೌಡರು. ತಲ್ಲೂರು ರಾಯನಗೌಡ ವಿಶ್ವಸ್ಥ ಸಂಸ್ಥೆ. ಬೆಂಗಳೂರು.

Downloads

Published

07.05.2024

How to Cite

ಯಲ್ಲಪ್ಪ ಬಸಪ್ಪ ಕಡಕೋಳ. (2024). ಗಣ್ಯರು ಕಂಡಂತೆ ತಲ್ಲೂರು ರಾಯನಗೌಡರು. AKSHARASURYA, 3(06), 143 to 152. Retrieved from http://aksharasurya.com/index.php/latest/article/view/399

Issue

Section

ಪ್ರಬಂಧ. | ESSAY.