ಶಿವಶರಣರ ದೃಷ್ಟಿಯಲ್ಲಿ ಆರ್ಥಿಕ ಸಿದ್ಧಾಂತ

Authors

  • ಶಂಭುಲಿಂಗ ಹುಬ್ಬಳ್ಳಿ ಸಂಶೋಧನಾ ವಿದ್ಯಾರ್ಥಿ, ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

Keywords:

ಕಾಯಕ, ಕೈಲಾಸ, ಸಂಪತ್ತು, ದಾಸೋಹ, ಬಿಜ್ಜಳನ ಭಂಡಾರ, ಚೇಳು

Abstract

12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅಂದಿನ ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತಹ ಸುಧಾರಣೆಯನ್ನು ತರಲು ಬಯಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಕಾಯಕದಲ್ಲಿ ತೊಡಗಬೇಕು. ಆ ಕಾಯಕದಿಂದ ಬಂದ ಹಣದಿಂದ ತನ್ನ ಅಗತ್ಯತೆಗಳನ್ನು ಪೂರೈಸಿಕೊಂಡು ಉಳಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಸದ್ವಿನಿಯೋಗ ಮಾಡಬೇಕು ಎಂಬುದು ಶರಣರ ಆಲೋಚನೆಯಾಗಿತ್ತು. ಜೊತೆಗೆ ಸಮಾಜದಲ್ಲಿನ ಸಂಪತ್ತು ಎಲ್ಲ ಜನರಿಗೆ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ಪರಿಕಲ್ಪನೆಯನ್ನು ಹೊಂದಿದ್ದರು. ಅಂತೆಯೆ ‘ಶಿವಶರಣರ ದೃಷ್ಟಿಕೋನದಲ್ಲಿ ಆರ್ಥಿಕ ಸಿದ್ದಾಂತ’ ಎಂಬ ಈ ಲೇಖನದಲ್ಲಿ ಅರ್ಥಶಾಸ್ತ್ರದ ಪರಿಕಲ್ಪನೆಗಳಾದ ಕೃಷಿ, ಉದ್ಯೋಗ, ಉತ್ಪಾದನೆ, ವಿತರಣೆ, ಆದಾಯ, ಅನುಭೋಗ, ಉಳಿತಾಯ ಮುಂತಾದ ಅಂಶಗಳ ಬಗ್ಗೆ ಬೆಳಕನ್ನು ಚೆಲ್ಲಲಾಗಿದೆ. ಉತ್ಪಾದನಾ ಸಿದ್ದಾಂತದಲ್ಲಿ ಕಾಯಕವು ಮಹತ್ವದ ಪಾತ್ರವನ್ನು ವಹಿಸುತ್ತದೆ. ‘ಕಾಯಕವೇ ಕೈಲಾಸ’ ಎಂಬ ಶರಣರ ಸಿದ್ದಾಂತವನ್ನು ಅರ್ಥಶಾಸ್ತ್ರ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಲಾಗಿದೆ. ಅಂದರೆ ಸಮಾಜದಲ್ಲಿ ಆರ್ಥಿಕ ಸಮಾನತೆಯು ಸಮಾಜದ ಏಳಿಗೆಗೆ ಭದ್ರ ಬುನಾದಿ ನೀಡುತ್ತದೆ ಎಂಬ ವಿಷಯದ ಬಗ್ಗೆ ವಿವರಿಸಲಾಗಿದೆ. ಪ್ರಸ್ತುತ ಆಧುನಿಕ ಅರ್ಥವ್ಯವಸ್ಥೆ ಮತ್ತು ಶರಣರ ಆರ್ಥಿಕ ಚಿಂತನೆಗಳಲ್ಲಿ ಹಣ ಬದುಕಿನ ಅವಿಭಾಜ್ಯ ಅಂಗ ಎಂಬುದನ್ನು ಅಲ್ಲಗಳೆದು ಸಂಪತ್ತಿನ ಸಂಗ್ರಹವನ್ನು ಸಮಾಜದ ಅಭಿವೃದ್ಧಿಗೆ ತೊಡಗಿಸಿದಲ್ಲಿ ದೇಶದ ಕಲ್ಯಾಣ ಸಾಧ್ಯವೆಂಬ ಅರ್ಥಶಾಸ್ತ್ರದ ತತ್ವ ಸಿದ್ಧಾಂತವನ್ನು ಸ್ಪಷ್ಟವಾಗಿ ವಿಶ್ಲೇಷಿಸಲಾಗಿದೆ.

References

ಮರುಳಸಿದ್ದಪ್ಪ ಕೆ. & ನಾಗರಾಜ ಕಿ. ರಂ. (ಸಂ). (1979). ವಚನ ಕಮ್ಮಟ. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ. ಬೆಂಗಳೂರು.

ರಾಮರೆಡ್ಡಿ ಎಸ್. ರಡ್ಡೇರ. (2005). ದೇವರ ದಾಸಿಮಯ್ಯನ ಜೀವನ ಮತ್ತು ಸಾಹಿತ್ಯ. ವೆಂಕಾಮಣಿ ಪ್ರಕಾಶನ. ರಾಣೆಬೆನ್ನೂರು.

ನಾಗಭೂಷಣಸ್ವಾಮಿ ಓ. ಎಲ್. (ಸಂ). (2014). ವಚನ ಸಾವಿರ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ಹಿರೇಮಠ ಆರ್. ಸಿ. (ಸಂ). (1968). ಶ್ರೀ ಬಸವೇಶ್ವರ ವಚನಾಮೃತ. ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.

ಕಲಬುರ್ಗಿ ಎಂ. ಎಂ. (1993). ಸಂಕೀರ್ಣ ವಚನ ಸಂಪುಟಗಳು. ಕನ್ನಡ ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.

Downloads

Published

07.05.2024

How to Cite

ಶಂಭುಲಿಂಗ ಹುಬ್ಬಳ್ಳಿ. (2024). ಶಿವಶರಣರ ದೃಷ್ಟಿಯಲ್ಲಿ ಆರ್ಥಿಕ ಸಿದ್ಧಾಂತ . AKSHARASURYA, 3(06), 137 to 142. Retrieved from http://aksharasurya.com/index.php/latest/article/view/398

Issue

Section

ಪ್ರಬಂಧ. | ESSAY.