ಕ್ರೀಡಾ ಮಹಿಳೆ : ಸಮಸ್ಯೆ ಮತ್ತು ಸವಾಲುಗಳು
Keywords:
ಕ್ರೀಡೆ, ಹೆಣ್ಣು, ಗಂಡು, ಕ್ರೀಡಾಮಹಿಳೆ, ಕೌಟುಂಬಿಕ ವಾತಾವರಣ, ಶಿಕ್ಷಣ, ವಿಜ್ಞಾನ, ಸಮಸ್ಯೆ, ಸವಾಲು, ಪಟುಗಳುAbstract
‘ಆಗದಾಗದು ಏನು ನನ್ನಿಂದ’ ಎನ್ನುವ ಬದಲು ಏನಾದಿತೋ ನೋಡೋಣ ಸಾಧ್ಯವಾದಷ್ಟು ಪ್ರಯತ್ನಿಸೋಣ ಎನ್ನುವ ನಿರ್ಧಾರ ಬದುಕಿನ ಹೊಲದಲ್ಲಿ ಬಂಗಾರದ ಬೀಜ ನೆಡುತ್ತದೆ. ಸಾಧಕನ ಹಾದಿಯಲ್ಲಿ ಇದೊಂದು ಮಹತ್ತರ ಹೆಜ್ಜೆ. ಯಾರೇ ಆಗಲಿ ಒಂದು ಹೆಜ್ಜೆ ಮುಂದಿಡದಿದ್ದರೆ ಪಯಣವಾದರೂ ಸಾಗುವುದೆಂತು? ಪಯಣ ಪ್ರಾರಂಭವಾಗುವುದೇ ಮುಂದೆ ಹೋಗಬೇಕೆಂಬ ಮನೋಬಲದ ಕ್ರಿಯೆಯಿಂದ, ಆಚರಣೆಯಿಂದ. ಹೀಗಿಲ್ಲದ ಮನುಜರ ಅದೆಷ್ಟೋ ಚಿಂತನೆಗಳು ಎಂದು ರೆಕ್ಕೆ ಹೊತ್ತಿ ಹಾರುವುದೇ ಇಲ್ಲ. ಮುಂದೆ ಕಾರಣವೆಂದರೆ ನನಸಾಗುವ ಸಾಮರ್ಥ್ಯ ಸಿದ್ಧಿಸಬೇಕಾದರೆ ಅನುಷ್ಠಾನದಲ್ಲಿ ಅಚಲ ನಂಬಿಕೆ ಇರಬೇಕು. ಸಾಧಿಸುವ ಅದಮ್ಯ ಉತ್ಸಾಹ ಪುಟಿಯುತ್ತಿರಬೇಕು. ಇಂಥ ಅದಮ್ಯ ಉತ್ಸಾಹವನ್ನಿರಿಸಿಕೊಂಡು ಕ್ರೀಡಾರಂಗದಲ್ಲಿ ಸಾಧನೆ ಮಾಡುತ್ತಿರುವ ಶರ್ಮಿಳಾನಿಕೋಲೇಟ್. ದೀಪಿಕಾಪಲ್ಲಿಕಲ್ ಸೈನಾನೆಹ್ವಾಲ್, ಸಾನಿಯಾಮಿರ್ಜಾ, ಅಕ್ಷಾಂಕ್ಷಸಿಂಗ್. ಸೋನಿಕಾ ಕಲಿರಾಮನ್, ಜವ್ಲಾಗಿಟ್ಟಾ. ಸುನೀತರಾವ್, ಪಿ. ಟಿ. ಉಷಾ- ಮೊದಲಾದ ಕ್ರೀಡಾ ಮಹಿಳೆಯರು ಇಂದು ದೇಶದ ಆಸ್ತಿಯಾಗಿದ್ದಾರೆ. ಇಂತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಹೇಳುವುದೇ ಈ ಲೇಖನದ ಉದ್ದೇಶವಾಗಿದೆ.
References
ಗಂಗಾನಾಯಕ್ ಕೆ. ಎನ್. (ಪ್ರ. ಸಂ). (2011). ಕ್ರೀಡೆಗಳು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ಹೇಮಲತಾ ಎಚ್. ಎಂ. (2003). ಮಹಿಳಾ ನಶಸ್ತೀಕರಣ. ಅಭಿರುಚಿ ಪ್ರಕಾಶನ. ಮೈಸೂರು.
ಸದಾನಂದ ಕನವಳ್ಳಿ. (1982). ಒಲಿಂಪಿಕ್ಸ್ ನಡೆದು ಬಂದು ದಾರಿ. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ. ಬೆಂಗಳೂರು.
ಗಂಗಾನಾಯಕ್ ಕೆ. ಎನ್. ಆರ್ಯಾಂ ಭ ಪಟ್ಠಾಭಿ (ಪ್ರ. ಸಂ. ). (2011). ಟೆನ್ನಿಸ್. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ಯುವ ಕರ್ನಾಟಕ. ಮಾಸಿಕ. ಆಗಸ್ಟ್ 2014.
ಯುವ ಕರ್ನಾಟಕ. ಮಾಸಿಕ. ಸೆಪ್ಟೆಂಬರ್-ಅಕ್ಟೋಬರ್ 2015.