ಪಂಪನ ಕಥಾಸತ್ಯ ಮತ್ತು ಕಾವ್ಯ ನಿಷ್ಠೆ ಹಾಗೂ ಕಾಮವಾಸನೆ: ಆದಿ ಪುರಾಣವನ್ನು ಅನುಲಕ್ಷಿಸಿ.
Keywords:
ಭಾವಸಂಪತ್ತಿ, ಕಾವ್ಯಸತ್ತೆ, ಸತ್ಯಸತ್ವ, ರಸತ್ವ, ಪರಿಪಕ್ವಾವಸ್ಥೆ, ಸ್ವರ್ಗಸೌಖ್ಯ, ಕಾಮಸೌಧ, ಕಾಮನೆಂಬ ಮದ್ದಾನೆ, ಕಾವ್ಯಭಿತ್ತಿ, ಪಾತ್ರಾಂತರAbstract
‘ಜನ್ಮಾಂತರಗಳಲ್ಲಿ ನಂಭಿಕೆಯಿಟ್ಟು ಸ್ಮರತತ್ವವನ್ನು ಸಂಪೂರ್ಣವಾಗಿ ವಿರೋಧಿಸುತ್ತ, ದಕ್ಕಿದ ಭೋಗ-ವೈಭವಗಳನ್ನೆಲ್ಲ ಬದಿಗಿಟ್ಟು, ತಲೆಗೂದಲನ್ನು ಕಿತ್ತು ದೀಕ್ಷೆ ಕೈಕೊಂಡು, ಗತಪ್ರಾಣನಾಗುವುದರಿಂದ ಜೀವನಿಗೆ ಪುನರ್ ಜನ್ಮದಲ್ಲಿ ಅತ್ಯಾನಂತವಾದ ಪದವಿ-ಫಲಗಳು ಸಹಸ್ರಸಾಗರೋಪಮಾನ ಕಾಲದವರೆಗೆ ಸಿಕ್ಕುತ್ತವೆ’ಎನ್ನುವುದು ಜೈನ ಪುರಾಣಗಳ ಪ್ರಬಲವಾದ ನಿಲುವು. ಇದನ್ನು ತನ್ನ ಆದಿಪುರಾಣ ಕಾವ್ಯದಲ್ಲಿ ನಿರೂಪಿಸಲು ಹೊರಟಿರುವ ಪಂಪನಿಗೆ ಇದು ಸುಲಭವಾದ ಕೆಲಸವಾಗಿರಲಿಲ್ಲ. ಬಹುಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವ ಧಾರ್ಮಿಕ ಕಲ್ಪನೆ ಕನ್ನಡ ನಾಡಿನಲ್ಲಿ ಪಂಪನ ಕಾಲಕ್ಕಾಗಲೇ ಪರ-ವಿರೋಧಗಳನ್ನು ಸ್ವೀಕರಿಸುತ್ತ, ಎದುರಿಸುತ್ತ, ಕುಂಟುತ್ತ ಸಾಗಿತ್ತು. ಅಂಥ ಸಂದರ್ಭದಲ್ಲಿ ಪಂಪನು ಧಾರ್ಮಿಕ ಕಲ್ಪನೆಯನ್ನು ಕಾವ್ಯಸತ್ಯವನ್ನಾಗಿಸುವುದರ ಮೂಲಕ ಜೈನಧರ್ಮಕ್ಕೆ ಈ ನಾಡಿನಲ್ಲಿ ವಿಶೇಷವಾದ ರಾಜ್ಯಮನ್ನಣೆಯನ್ನೊ ದಕ್ಕಿಸಿಕೊಟ್ಟು ಜೈನಧರ್ಮಕ್ಕೆ ನವ ಜೈತನ್ಯವನ್ನು ತುಂಬುತ್ತಾನೆ. ಜನಸಾಮಾನ್ಯರಲ್ಲಿ ಜನ್ಮಾಂತರಗಳ ವಿಷಯದಲ್ಲಿ ಇರುವ ನಂಭಿಕೆ-ನಿರ್ಲಕ್ಷ್ಯಗಳನ್ನು ಕಾವ್ಯದ ಸಂದರ್ಭದಲ್ಲಿ ಚರ್ಚಿಸುತ್ತಾನೆ. ‘ಜೈನಧರ್ಮಮೆ ಧರ್ಮಮಮಂ’ ಎಂದು ಪ್ರತಿಷ್ಠಾಪಿಸಲು ಸಾಕಷ್ಟು ಸ್ಪಷ್ಟೀಕರಣವನ್ನು ನೀಡುತ್ತಾನೆ; ಆ ಮೂಲಕ ತನ್ನ ಕಾವ್ಯ ಸತ್ಯದ ಸತ್ವವನ್ನು ಅನಾವರಣಗೊಳಿಸುತ್ತಾನೆ.
References
ನರಸಿಂಹಶಾಸ್ತ್ರೀ ಕೆ. ಎಲ್. (1999). ಆದಿಪುರಾಣ (ಗದ್ಯಾನುವಾದ). ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.