ಎಲ್.ಎಸ್.ಶೇಷಗಿರಿ ರಾವ್ರವರ ‘ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ’ ವಿಮರ್ಶಾ ಕೃತಿಯ ಅವಲೋಕನ
Keywords:
ಕಾದಂಬರಿ, ಸಾಹಿತ್ಯ ಚರಿತ್ರೆ, ವಿಮರ್ಶೆ, ಎಲ್.ಎಸ್. ಶೇಷಗಿರಿ ರಾವ್Abstract
ಎಲ್.ಎಸ್. ಶೇಷಗಿರಿರಾವ್ ಅವರು ಖ್ಯಾತ ವಿಮರ್ಶಕರೆಂದೇ ಗುರುತಿಸಿಕೊಂಡವರು. ವಿಮರ್ಶಕರಲ್ಲದೆ ಬಹುಮುಖ ಪ್ರತಿಭೆ ಉಳ್ಳವರು ಎಂಬುದು ಇವರ ವಿಭಿನ್ನ ಸಾಹಿತ್ಯ ಕೃತಿಗಳಿಂದ ಗೋಚರವಾಗುತ್ತದೆ. ವಿಮರ್ಶೆಯಲ್ಲಿಯೂ ನಾವು ಇವರನ್ನು ಯಾವುದೇ ಒಂದು ಕಾಲಘಟ್ಟಕ್ಕೆ ಅಥವಾ ಒಂದೇ ಸಾಹಿತ್ಯ ಪ್ರಕಾರದ ವಿಮರ್ಶೆಯೊಳಗೆ ಗುರುತಿಸಲಾಗದು. ಎಲ್ಲ ಕಾಲಘಟ್ಟದ ಸಾಹಿತ್ಯ ಕೃತಿಗಳನ್ನು ವಿಮರ್ಶಿಸಿ ಸಮನ್ವಯ ಸಾಧಿಸಿದ ವಿಮರ್ಶಕರು ಇವರು. ಇಂಗ್ಲಿಷ್ ಸಾಹಿತ್ಯದಲ್ಲಿಯೂ ಇವರ ವಿಮರ್ಶೆ ಹೀಗೆಯೇ ಸಾಗಿದೆ. ಸಾಹಿತ್ಯದ ವಿವಿಧ ಕಾಲಘಟ್ಟಗಳ ಧ್ಯೇಯ ಧೋರಣೆಗಳನ್ನು ಬಲ್ಲವರಾಗಿದ್ದ ಇವರು ಒಂದು ಭಾಷೆಯ ಸಾಹಿತ್ಯದ ಸಮೀಕ್ಷೆಯನ್ನು, ಚರಿತ್ರೆಯನ್ನು ಬರೆದಿದ್ದಾರೆ. ಗ್ರೀಕ್ ರಂಗಭೂಮಿ ಮತ್ತು ನಾಟಕ, ಇಂಗ್ಲಿಷ್ ಸಾಹಿತ್ಯ ಚರಿತ್ರೆ, ಹೊಸಗನ್ನಡ ಸಾಹಿತ್ಯ ಚರಿತ್ರೆ ಬರೆದಿರುವ ಇವರ ಈ ಕೃತಿಗಳ ವಿಷಯಗಳ ಹಿಂದೆ ಅವರ ಆಸಕ್ತಿ, ಪರಿಶ್ರಮ, ತಮ್ಮ ತಾಯಿ ನಾಡಿನ ಓದುಗರಿಗೆ ಜಗತ್ತಿನ ಸಾಹಿತ್ಯವನ್ನು ಪರಿಚಯಿಸಬೇಕೆಂಬ ಹಂಬಲ ಎಲ್ಲವು ಕಾರಣಗಳಾಗಿವೆ. ಹಾಗಾಗಿ ಈ ಲೇಖನದ ಮೂಲಕ ಇವರ ವಿಮರ್ಶಾ ಕೃತಿಯನ್ನು ಪರಿಚಯಿಸುವ ಉದ್ದೇಶವನ್ನು ಪ್ರಸ್ತುತ ಲೇಖನವು ಹೊಂದಿದೆ.
ಆರಂಭದಲ್ಲಿ ಕತೆಗಾರರಾಗಿ ಸಾಹಿತ್ಯ ರಂಗಕ್ಕೆ ಪ್ರವೇಶ ಮಾಡಿದರೂ ಶೇಷಗಿರಿರಾಯರೂ ವಿಮರ್ಶೆಯ ನೆಲೆಯಲ್ಲಿಯೇ ತಮ್ಮನ್ನು ಮುಂದೆ ಗುರುತಿಸಿಕೊಂಡರು. ಇವರು ಬರೆದ ವಿಮರ್ಶಾ ಕೃತಿಗಳಲ್ಲಿ ಸಾಹಿತ್ಯ ಪ್ರಕಾರಗಳನ್ನು ತಮ್ಮ ಸೈದ್ಧಾಂತಿಕ ಚಿಂತನೆಯಲ್ಲಿ ವಿವೇಚಿಸಿರುವ ಕೃತಿಯ ಸಾಲಿಗೆ ಪ್ರಸ್ತುತ ಕೃತಿ ಸೇರುತ್ತದೆ. ಪಾಶ್ಚಾತ್ಯ ಸಾಹಿತ್ಯದ ಕಾದಂಬರಿ ಪ್ರಕಾರದ ಆಳ ಅಗಲಗಳನ್ನು ಅರಿತಿದ್ದ ಇವರಿಗೆ ಕನ್ನಡದ ಕಾದಂಬರಿ ಪ್ರಕಾರ ಓದುಗರನ್ನು ಹೆಚ್ಚು ಆಕರ್ಷಿಸಿರುವ ಅಂಶ ಬಹುಬೇಗನೆ ತಿಳಿಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಆಹ್ವಾನದ ಮೇರೆಗೆ 1957ರಷ್ಟು ಹಿಂದೆಯೇ ಬರೆದ ಮೊಟ್ಟಮೊದಲ ರಾಯರ ವಿಮರ್ಶಾ ಕೃತಿ ಇದು. ವಸಂತ ಪ್ರಕಾಶನವು ಈ ಕೃತಿಯ ಮೂರನೆಯ ಮುದ್ರಣವನ್ನು 2008ರಲ್ಲಿ ತಂದಿದೆ. ಈ ಕೃತಿಯಲ್ಲಿ ಒಟ್ಟು ಒಂಬತ್ತು ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯದಿಂದ ಅದರ ವಿಶೇಷತೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
References
ಶೇಷಗಿರಿರಾವ್ ಎಲ್. ಎಸ್. (2008). ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ. ವಸಂತ ಪ್ರಕಾಶನ. ಬೆಂಗಳೂರು.
ಮಾವಿನಕೆರೆ ರಂಗನಾಥನ್ (ಸಂ). (2007). ಎಲ್.ಎಸ್.ಶೇಷಗಿರಿರಾವ್ ಬದುಕು ಬರಹ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ನಾರಾಯಣ ಪಿ. ವಿ. (2006). ಎಲ್. ಎಸ್. ಶೇಷಗಿರಿರಾವ್. ನವ ಕರ್ನಾಟಕ ಪ್ರಕಾಶನ. ಬೆಂಗಳೂರು.