ಸಂಕ್ರಾಂತಿ ನಾಟಕದ ವಿಭಿನ್ನ ನೆಲೆಗಳು

Authors

  • ರೇಷ್ಮಾ ಟಿ. ಎಸ್. ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೈರಳಿ ನಿಕೇತನ್ ಗೋಲ್ಡನ್ ಜೂಬಿಲಿ ಡಿಗ್ರಿ ಕಾಲೇಜ್, ಇಂದಿರಾನಗರ, ಬೆಂಗಳೂರು.

Keywords:

ವಚನ ಚಳುವಳಿ, ಜಾತೀಯತೆ, ಪ್ರೇಮ ಪ್ರಕರಣ, ರಾಜಕೀಯ, ಸಾಮಾಜಿಕ ಕ್ರಾಂತಿ, ಬಂಡಾಯ

Abstract

ಕಾವ್ಯ, ಕಥೆ, ಕಾದಂಬರಿಗಳಂತೆ ನಾಟಕ ಒಂದು ಸಾಹಿತ್ಯ ಪ್ರಕಾರ. ದೃಶ್ಯದ ಮೂಲಕ ರಂಗ ಮಾಧ್ಯಮದಲ್ಲೂ ಶ್ರವ್ಯದ ಮೂಲಕ ಸಾಹಿತ್ಯ ಮಾಧ್ಯಮದಲ್ಲೂ ಸಲ್ಲುವುದರಿಂದ ಒಂದು ವಿಶಿಷ್ಟ ಮಾಧ್ಯಮವೆನಿಸಿದೆ. ಜೀವನದ ಸಂಗತಿಗಳನ್ನು ಅರ್ಥವತ್ತಾಗಿ ಪರಿಣಾಮಕಾರಿಯಾಗಿ ನಟನೆಯ ಮೂಲಕ ತಿಳಿಯಪಡಿಸುವುದು ನಾಟಕದ ಉದ್ದೇಶ. ಪ್ರೇಕ್ಷಕರಿಗೆ ಆನಂದ ನೀಡುವುದು ಅದರ ಪರಿಣಾಮದ ಉದ್ದೇಶ.

ಸಮಕಾಲೀನ ನಾಟಕಕಾರರಲ್ಲಿ ಲಂಕೇಶ್ ಅವರು ಮುಖ್ಯರು. ಪಾಶ್ಚತ್ಯ ಆಧುನಿಕ ನಾಟಕ ಚಳುವಳಿಯ ಪರಿಚಯ ಪ್ರಭಾವಗಳಿಂದ ಸ್ಫೂರ್ತಿಗೊಂಡು ವಿಭಿನ್ನ ಬಗೆಯ ನಾಟಕಗಳನ್ನು ರಚಿಸಿದ ಲಂಕೇಶರು ಕನ್ನಡದ ನವ್ಯ ನಾಟಕಗಾರರಲ್ಲಿ ಪ್ರಮುಖರಾಗಿದ್ದಾರೆ. ಪ್ರಸ್ತುತ ಪ್ರಬಂಧದಲ್ಲಿ ಲಂಕೇಶರ ಸಂಕ್ರಾಂತಿ ನಾಟಕದ ವಿಭಿನ್ನ ನೆಲೆಗಳನ್ನು ವಿವರಿಸಲಾಗಿದೆ. ಸಂಕ್ರಾಂತಿ ನಾಟಕದಲ್ಲಿ ಚರಿತ್ರೆಯ ವಸ್ತು ಮತ್ತು ವ್ಯಕ್ತಿಗಳನ್ನಾಧರಿಸಿ ಅದರ ಹಿನ್ನೆಲೆಯಲ್ಲಿ ಸಮಕಾಲೀನ ಸಮಾಜವನ್ನು ನೋಡಿದ್ದಾರೆ.

ಪಿ. ಲಂಕೇಶ್‌ರವರ ಸಂಕ್ರಾಂತಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮಹತ್ವಪೂರ್ಣ ನಾಟಕ. ಬಸವಣ್ಣನವರ ಚಳುವಳಿಯನ್ನು ವಸ್ತುವಾಗಿ ಇಟ್ಟುಕೊಂಡು ಅಂದಿನ ಚಳುವಳಿಯನ್ನು ನೇರವಾಗಿ ಸ್ಪಷ್ಟವಾಗಿ ಇಂದಿನ ಕಾಲದಲ್ಲಿಟ್ಟು ನೋಡುವಲ್ಲಿ ಯಶಸ್ವಿಯಾಗಿದೆ.

References

ಲಂಕೇಶ್ ಪಿ. (1973). ಸಂಕ್ರಾಂತಿ. ಲಂಕೇಶ ಪ್ರಕಾಶನ. ಶಿವಮೊಗ್ಗ.

ನಾಯಕ ಹಾ. ಮಾ. (1983). ಸ್ವಸ್ತಿ. ಮೈಸೂರು ಪ್ರಕಾಶನ. ಮೈಸೂರು.

ಶೇಷಗಿರಿ ರಾವ್ ಎಲ್. ಎಸ್. (1999). ಹೊಸಗನ್ನಡ ಸಾಹಿತ್ಯ ಚರಿತ್ರೆ. ಅಂಕಿತ ಪ್ರಕಾಶನ. ಬೆಂಗಳೂರು.

Downloads

Published

07.05.2024

How to Cite

ರೇಷ್ಮಾ ಟಿ. ಎಸ್. (2024). ಸಂಕ್ರಾಂತಿ ನಾಟಕದ ವಿಭಿನ್ನ ನೆಲೆಗಳು . AKSHARASURYA, 3(06), 74 to 85. Retrieved from http://aksharasurya.com/index.php/latest/article/view/392

Issue

Section

ಪುಸ್ತಕ ವಿಮರ್ಶೆ. | BOOK REVIEW.