ಪ್ಯಾಸೆಂಜರ್ ಗಾಡಿ
Keywords:
ನಿಷ್ಕರ್ಷೆ, ಅವರ್ಣನೀಯ, ಬಡಬಾ, ಯಾತನಾಮಯ, ಪೂರ್ವವೃತ್ತಾಂತAbstract
ಮನುಷ್ಯನ ಸ್ವಭಾವವು ಏಕಾಂತದಲ್ಲಿದ್ದಾಗಲೂ, ಸಭೆಯಲ್ಲಿದ್ದಾಗಲೂ ಬಹು ವ್ಯತ್ಯಾಸವಾಗಿಯೇ ವರ್ತಿಸುತ್ತದೆ. ಏಕೆಂದರೆ ಅದಕ್ಕೆ ಒಳಗೆ ಒಂದು ಭಯ ಕಾಡುತ್ತಿರುತ್ತದೆ. ಅದೆಂದರೆ ವ್ಯಕ್ತಿ ತಾನು ವಾಸಿಸುತ್ತಿರುವ ಪರಿಸರದ ಸಾಮಾಜಿಕ ಕಟ್ಟಳೆಗಳು. ತನಗೆ ಇಷ್ಟವಿರಲಿ ಇಲ್ಲದಿರಲಿ ಅವುಗಳನ್ನು ಪಾಲಿಸಲೇಬೇಕು. ಇದು ಬಹುವಾಗಿ ಇತರ ಜನರೆದುರು ಪಾಲಿಸಿದಂತೆ ನಟಿಸಿದರೂ ಏಕಾಂತದಲ್ಲಿ, ಅಂತರಂಗದಲ್ಲಿ ಅದಕ್ಕೆ ಹಲವು ಸಲ ನೆಲೆಯೇ ಇರುವುದಿಲ್ಲ. ಇಂತಹ ಅನೇಕ ಅಮೂರ್ತ ಕಲ್ಪನೆಗಳಲ್ಲಿ ಒಂದು ಜಾತಿ. ಇದು ಎಷ್ಟೋ ಸಮಾಜಗಳನ್ನು ತನ್ನ ಬಡಬಾನಲದ ಒಡಲಿಗೆ ಆಹಾರವಾಗಿಸಿದೆ; ಇಂದಿಗೂ ಆಗಿಸುತ್ತಿದೆ ಕೂಡ. ಅಂತೆಯೇ ಲಿಂಗಭೇದ. ಗಂಡು-ಹೆಣ್ಣಿನ ನಡುವಿನ ಶಾರೀರಿಕ ಕ್ಷಮತೆಯ ಗುಣಾವಗುಣಗಳನ್ನು ನಿಷ್ಕರ್ಷಿಸಿ ಒಡಂಬಡದ ಜನರು ಇವರಿಬ್ಬರ ಸಮಾನತೆಯ ದೀಪಕ್ಕೆ ಎಣ್ಣೆಯನ್ನೇ ಹಾಕರು. ಅದು ಎಂದೂ ಬೆಳಗದಂತೆ ಮುತುವರ್ಜಿ ವಹಿಸುವಲ್ಲಿ ಜಾಣರು. ಜಾತಿ ಮತ್ತು ಲಿಂಗ ಎಂಬುದು ಮನುಷ್ಯನ ಬದುಕನ್ನು ಕರಾಳವಾಗಿಸುವ ರೀತಿ ಅವರ್ಣನೀಯವಾದುದು. ಈ ಹಿನ್ನೆಲೆಯಲ್ಲಿ ತಮಿಳಿನ ಬಹುಪ್ರಸಿದ್ಧ ಕವಿಯಾದ ‘ಜಯಕಾಂತನ್’ ಅವರ ‘ಪ್ಯಾಸೆಂಜರ್ ಗಾಡಿಯಲ್ಲಿ ಒಂದು ಹಗಲು’ ಎಂಬ ಕಥೆಯನ್ನು ವಿಮರ್ಶಿಸುವ ಕಾಯಕವನ್ನಿಲ್ಲಿ ಮಾಡಲಾಗಿದೆ.
References
ನಾರಾಯಣ್ ಹೆಚ್. ವಿ. (ಅನು). (1973). ಜಯಕಾಂತನ್ ಅವರ ಕಥೆಗಳು. ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ. ಹೊಸದೆಹಲಿ.
ವೆಂಕಟರಾಮಯ್ಯ ಸಿ. ಕೆ. (ಅನು). (1989). ಸಾವಿರದೊಂದು ರಾತ್ರಿ. ಸಾಹಿತ್ಯ ಅಕಾಡೆಮಿ. ನವದೆಹಲಿ.
ಬರಗೂರು ರಾಮಚಂದ್ರಪ್ಪ. (2016). ಒಂದು ಊರಿನ ಕಥೆಗಳು. ಅಂಕಿತ ಪುಸ್ತಕ. ಬೆಂಗಳೂರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್. (2015). ಶ್ರೀನಿವಾಸರ ಸಣ್ಣಕಥೆಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.