ಗಂಗರಸ: ಮೈಲಾರದ ಶಾಸನೋಕ್ತ ವಿಜಯನಗರ ಅಧಿಕಾರಿ
Keywords:
ಮೈಲಾರ, ಭಂಡಾರಿ, ದೇವರಾಯ, ನಾಗಣ್ಣ, ಹೆಗ್ಗಡೆದೇವರಸ, ಗಂಗರಸ, ಗಂಗಣಾಖ್ಯAbstract
ವಿಜಯನಗರ ಸಾಮ್ರಾಟರ ಆಡಳಿತವು ಅತ್ಯಂತ ವೈಭವದಿಂದ ನಡೆದಿರುವುದು ಅವರ ಕೈಕೆಳಗಿನ ಅಧಿಕಾರಿಗಳಿಂದ. ಅವರು ಆಡಳಿತಾಧಿಕಾರಿಗಳಾಗಿರಬಹುದು, ಅಥವಾ ಸೇನಾಧಿಕಾರಿಗಳಾಗಿರಬಹುದು ಅಥವಾ ಭಂಡಾರದ ಅಧಿಕಾರಿಗಳಾಗಿರಬಹುದು ಅಥವಾ ಸ್ಥಳೀಯ ಅಧಿಕಾರಿಗಳಾಗಿರಬಹುದು. ಇಂಥ ಅಧಿಕಾರಿಗಳು ತಮ್ಮ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತನದಿಂದ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂಥ ಪ್ರಾಮಾಣಿಕ ಅಧಿಕಾರಿಗಳಲ್ಲಿ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದ ಭಂಡಾರದ ಅಧಿಕಾರಿ ಗಂಗರಸನೂ ಒಬ್ಬ. ಈತ ವಂಶಪಾರಂಪರ್ಯ ಭಂಡಾರಿಯಾಗಿದ್ದಾನೆ. ತನಗೆ ಬಂದ ಆದಾಯದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾನೆ. ಈತನು ವಿಜಯನಗರ ಸಂಗಮ ದೊರೆಗಳಾದ 1ನೇ ದೇವರಾಯ, ವಿಜಯರಾಯ ಮತ್ತು 2ನೇ ದೇವರಾಯನ ಆಳ್ವಕೆಯಲ್ಲಿ ಭಂಡಾರಿಯಾಗಿ ಕಾರ್ಯನಿರ್ವಹಿಸಿದ್ದಾನೆ.
References
ದೇವರಕೊಂಡಾರೆಡ್ಡಿ ಮತ್ತು ಇತರರು (ಸಂ). (1998). ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.