ತಾಳಗುಂದ ಶಾಸನ ಮತ್ತು ಸಂಸ್ಕೃತಿ
Keywords:
ವಿದ್ಯೆಯ ಮಹತ್ವ, ಪ್ರಣವೇಶ್ವರ ದೇವಸ್ಥಾನ, ಕನ್ನಡಿಗರ ಸ್ವಾಭಿಮಾನ, ಗುಪ್ತರು ಮತ್ತು ಕದಂಬರ ಸಂಬಂಧ, ಕನ್ನಡದ ಮೊದಲ ಶಾಸನ ಕವಿAbstract
ತಾಳಗುಂದ ಶಾಸನವು ಕದಂಬರ ಪ್ರಮುಖ ಐತಿಹಾಸಿಕ ಶಾಸನವಾಗಿದೆ. ಕನ್ನಡ ಸಾಹಿತ್ಯ, ಶಾಸನ, ಕಲೆ, ಸಂಸ್ಕೃತಿ ಹಾಗೂ ಆ ಕಾಲದ ಜನರ ಜೀವನ ಕ್ರಮಗಳು ಈ ಶಾಸನದಲ್ಲಿ ಕಂಡುಬಂದಿವೆ. ವಿದ್ಯೆ ಕಲಿಯಲು ಹೋದ ಕನ್ನಡಿಗನಿಗೆ ಆದ ಅಪಮಾನದಿಂದ ಸಿಡಿದೆದ್ದು ಕನ್ನಡದ ಮೊದಲ ಸಾಮ್ರಾಜ್ಯ ನಿರ್ಮಾಣಕ್ಕೆ ಕಾರಣವಾದ ವಿವರ ಈ ಶಾಸನದಲ್ಲಿದೆ. ಕರ್ನಾಟಕದ ಮೊದಲ ಕೆರೆ ಹಾಗೂ ದೇವಾಲಯಗಳ ಸ್ಥಾಪನೆ, ಕನ್ನಡದ ರಾಜಮನೆತನವೊಂದು ಆ ಕಾಲಕ್ಕಾಗಲೇ ಉತ್ತರ ಭಾರತ ಹಾಗೂ ದಕ್ಷಿಣ ಭಾರತಗಳ ನಡುವೆ ವೈವಾಹಿಕ ಸಂಬಂಧ ಬೆಳೆಸಿಕೊಂಡಿತ್ತು ಎಂಬ ವಿವರ ಈ ಶಾಸನದಲ್ಲಿದೆ. ಕನ್ನಡಿಗರ ಸ್ವಾಭಿಮಾನ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ದೃಷ್ಟಿಯಿಂದ ತಾಳಗುಂದ ಶಾಸನ ಮಹತ್ವದ್ದಾಗಿದೆ. ಇತ್ತೀಚಿನ ಸಂಶೋಧನೆಗಳಿಂದ ಕರ್ನಾಟಕದ ಮೊದಲ ಪ್ರಾಚೀನ ಶಾಸನ ಎಂಬ ಹಿರಿಮೆಗೆ ಪಾತ್ರವಾಗಿದೆ.
References
ಮೇವುಂಡಿ ಮಲ್ಲಾರಿ. (2013). ಕನ್ನಡ ನಾಡಿನ ಶಾಸನ ಕವಿಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಚಿದಾನಂದಮೂರ್ತಿ ಎಂ. (2020). ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ. ಸ್ವಪ್ನ ಬುಕ್ಹೌಸ್. ಬೆಂಗಳೂರು.
ಬಸವರಾಜ ಕಲ್ಗುಡಿ. (2019). ಮಹಾಸತಿ ಒಂದು ಆಚರಣೆ. ಅಭಿನವ ಪ್ರಕಾಶನ. ಬೆಂಗಳೂರು.
ಭೋಜರಾಜ ಪಾಟೀಲ್. (2018). ನಾಗರಖಂಡ 70. ಸುವ್ವಿ ಪ್ರಕಾಶನ. ಶಿಕಾರಿಪುರ.
ವಸಂತ ಕುಮಾರ್ ಬಿ.ವಿ. (2005). ಶಿಕಾರಿಪುರದ ಸಾಂಸ್ಕೃತಿಕ ಸಂಕಥನ. ನೇಕಾರ ಪ್ರಕಾಶನ. ಸೊರಬ.
ಕಲ್ಬುರ್ಗಿ ಎಂ.ಎಂ. (2014). ಶಾಸನಗಳಲ್ಲಿ ಶಿವಶರಣರು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಎಫಿಗ್ರಾಫಿಯಾ ಕರ್ನಾಟಕ ಸಂಪುಟ. (2014). 14ನೇ ಆವೃತ್ತಿ. ಕರ್ನಾಟಕ ಸರ್ಕಾರ.