ಸುಧಾಮೂರ್ತಿ ಕಾದಂಬರಿಗಳಲ್ಲಿ ಸ್ತ್ರೀವಾದಿ ಪರಿಕಲ್ಪನೆಗಳು
Keywords:
ಸುಧಾಮೂರ್ತಿ, ಡಾಲರ್ ಸೊಸೆ, ಮಹಾಶ್ವೇತೆ, ಗೌರಮ್ಮ, ಜಮುನಾ, ವಿನುತಾ, ಬಾಂಬೆಗ್ರೋಸರಿ, ಅನುಪಮಾ, ಸ್ತ್ರೀವಾದಿ ಪರಿಕಲ್ಪನೆಗಳುAbstract
ಸುಧಾಮೂರ್ತಿಯವರು ಕನ್ನಡ ನಾಡಿನ ಪ್ರಮುಖ ಬರಹಗಾರರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲೇಖಕಿ, ಸರಳ ಸಜ್ಜನಿಕೆಯ ವ್ಯಕ್ತಿ, ಉತ್ತಮ ವಾಗ್ಮಿ, ಸದಾ ಕ್ರೀಯಾಶೀಲರು, ಸಮಾಜಕ್ಕೆ ಸ್ಪೂರ್ತಿ ನೀಡುವ ಶಕ್ತಿಯಾಗಿ, ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ಇಂಗ್ಲೀಷ್ ಭಾಷೆಯಲ್ಲಿಯೂ ಹಲವು ಕೃತಿಗಳನ್ನು ಬರೆದು ಪ್ರಸ್ತುತದಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ಬಿಲ್‌ಗೇಟ್ಸ್ ಪ್ರತಿಷ್ಠಾನದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರೂ ಆಗಿದ್ದಾರೆ. ಮಹಿಳೆಯರ ಜ್ಞಾನ ಸಂಪಾದನೆ, ಸಂಸ್ಕೃತಿ ಸಂಪನ್ನತೆಯನ್ನು ಹೆಚ್ಚಿಸಲು ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ, ಸಾಮಾಜಿಕ ಉನ್ನತಿಗೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಕಥೆ, ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ಬರೆಯುತ್ತಿದ್ದಾರೆ. ದೇಶಪಾಂಡೆ ಪೌಂಡೇಷನ್ ಹಾಗೂ ಇನ್ಪೋಸಿಸ್ ಪೌಂಡೇಷನ್ ಸ್ಥಾಪನೆಗೆ ಕಾರಣೀಕರ್ತರಾಗಿದ್ದು ‘ಡಾಲರ್ ಸೊಸೆ’ ಹಾಗೂ ‘ಮಹಾಶ್ವೇತೆ’ ಕಾದಂಬರಿಗಳು ಸುಧಾಮೂರ್ತಿಯವರ ಸಾಮಾಜಿಕ ಕಾದಂಬರಿಗಳಾಗಿದ್ದು ಬದುಕಿನ ಓರೆ ಕೋರೆಗಳನ್ನು ತಿದ್ದುವ, ಭಾವನೆಗಳನ್ನು ಅರ್ಥೈಸುವ, ಮನ ಮಿಡಿಯುವ ಸಂಸ್ಕೃತಿಯನ್ನು ಅನುಸರಿಸುವ ದೇಶ ದೇಶಗಳ ನಡುವಿನ ಸ್ತ್ರೀವಾದಿ ಸಾಮಾಜಿಕ ಪರಿಕಲ್ಪನೆಗಳು ರೂಪಾಯಿಯ ಮೇಲೆ ಡಾಲರಿನ ಪ್ರಭಾವವನ್ನು ಕಾದಂಬರಿಯ ಕಥಾನಾಯಕಿಯಾದ ಗೌರಮ್ಮ ತನ್ನ ಸೊಸೆಯರಾದ ಜಮುನಾ ಹಾಗೂ ವಿನುತಾರಿಗೆ ನೋಡುವ ದೃಷ್ಠಿಕೋನ ಬೇರೆ ಬೇರೆಯೇ ಇದೆ. ‘ಜಮುನಾ ಡಾಲರ್ ಸೊಸೆಯಾದರೆ, ವಿನುತಾ ರೂಪಾಯಿ ಸೊಸೆ. ಗೌರಮ್ಮ ಹಾಗೂ ಶಾಮಣ್ಣನವರದು ಸುಖಿ ಕುಟುಂಬ. ಇವರಿಗೆ ಒಂದು ಹೆಣ್ಣು ಸುರಭಿ ಹಾಗೂ ಎರಡು ಗಂಡು ಮಕ್ಕಳು. ಚಂದ್ರು ಮತ್ತು ಆತನ ಹೆಂಡತಿ ಜಮುನಾ ಇವರಿಗೆ ಒಂದು ಮಗು ಮಾನಸಿ ಅಮೇರಿಕೆಯಲ್ಲಿರುತ್ತಾರೆ. ಹಾಗೂ ಗಿರೀಶ್ ಮತ್ತು ವಿನುತಾ ಭಾರತದಲ್ಲಿರುತ್ತಾರೆ. ಇವರಿಗೆ ಒಂದು ಮಗು ಹರ್ಷ. ಮಹಾಶ್ವೇತೆ ಕಾದಂಬರಿಯ ಅನುಪಮಾ ಬಿಳುಪಿನ (ತೊನ್ನು ರೋಗ) ರೋಗದವಳಾಗಿದ್ದು ಸಮಾಜದಲ್ಲಿರುವ ಜನ ಸಾಮಾನ್ಯರು ನಿಕೃಷ್ಠವಾಗಿ ನೋಡುವ, ತಾತ್ಸಾರ ಪಡುವುದನ್ನು ಬಿಟ್ಟು ಮಾನವೀಯತೆಯಿಂದ ನೋಡಬೇಕೆಂಬ ಸಂದೇಶವನ್ನು ನೀಡುತ್ತದೆ.
References
ಸುಧಾಮೂರ್ತಿ. (2023). ಡಾಲರ್ ಸೊಸೆ. ಸಪ್ನ ಬುಕ್ ಹೌಸ್. ಬೆಂಗಳೂರು.
ಸುಧಾಮೂರ್ತಿ. (2023). ಮಹಾಶ್ವೇತೆ. ಸಪ್ನ ಬುಕ್ ಹೌಸ್. ಬೆಂಗಳೂರು.