ಶ್ರೀಸಾಮಾನ್ಯವೇ ಭಗವನ್ ಮಾನ್ಯಂ, ಶ್ರೀಸಾಮಾನ್ಯನೇ ಭಗವದ್ ಧನ್ಯಂ
(ಕುವೆಂಪು ವಿರಚಿತ ‘ಧನ್ವಂತರಿ ಚಿಕಿತ್ಸೆ’ ರಂಗಪ್ರಯೋಗವನ್ನು ಕುರಿತು)
Keywords:
ಕುವೆಂಪು, ಧನ್ವಂತರಿ ಚಿಕಿತ್ಸೆ, ಶ್ರೀಸಾಮಾನ್ಯ, ರೈತ, ಕುಪ್ಪನಹಳ್ಳಿ ಎಂ. ಭೈರಪ್ಪ, ರಂಗಾಂತರಂಗ ತಂಡ, ಕ್ರಿಸ್ತು ಜಯಂತಿ ಕಾಲೇಜುAbstract
ಸ್ವಾತಂತ್ರ್ಯ ಪೂರ್ವದಲ್ಲಿ ರಚಿತವಾದ ಕುವೆಂಪುರವರ ಧನ್ವಂತರಿ ಚಿಕಿತ್ಸೆ ಕಥೆ, ಸ್ವಾತಂತ್ರ್ಯ ದೊರೆತ ಏಳು ದಶಕಗಳ ನಂತರವೂ ಪ್ರಸ್ತುತ ಸ್ಥಿತಿಗತಿಗಳನ್ನು ವರ್ಣಿಸುತ್ತದೆ. ಸ್ವಾತಂತ್ರ್ಯೋತ್ತರ ಭಾರತ ವರ್ಣ ಮತ ಜಾತಿ ಭೇದಗಳಿಲ್ಲದೆ ಸರ್ವರೂ ಸಮಾನರು ಎಂದು ಘೋಷಿಸಿ ಸರ್ವರ ಏಳಿಗೆಗೆ ಸಾಧನವಾಗುವ ಸರ್ವೋದಯ ತತ್ವಕ್ಕೆ ಒಂದು ಅಧಿಕಾರ ಮುದ್ರೆ ಬಿದ್ದಂತಾಯಿತು ಎಂದು ಕುವೆಂಪುರವರು ಭಾರತ ಸಂವಿಧಾನ ಜಾರಿಯಾದಾಗ ಸಂತಸ ವ್ಯಕ್ತಪಡಿಸುತ್ತಾರೆ. ಶ್ರೀಸಾಮಾನ್ಯರಿಗೆ ದೀಕ್ಷಾ ಗೀತೆ ಎಂಬ ಕವಿತೆಯಲ್ಲಿ ಕುವೆಂಪು ಕಣ್ಣಲ್ಲಿ ಕಂಡ ಭಾರತ ಸಂವಿಧಾನದ ಆಶಯವು ದ್ವನಿ ಪೂರ್ಣವಾಗಿ ಪ್ರಸ್ತುತ ಧನ್ವಂತರಿ ಚಿಕಿತ್ಸೆ ರಂಗಪ್ರಯೋಗದಲ್ಲಿ ಮೂಡಿ ಬಂದಿದೆ. ದೈವೀಪುರುಷರಾದ ವಿಶ್ವಾಮಿತ್ರರು, ವಿಶ್ವವೈದ್ಯ ಧನ್ವಂತರಿಯು ಶ್ರೀಸಾಮಾನ್ಯರ ಅವತಾರವಾಗಿ ಕಾಣುತ್ತಾರೆ. ಮಹಾಗುರುಗಳಾಗಿ ಬಂದು ಶ್ರೀಸಾಮಾನ್ಯರಾದ ರೈತನ ಕಾಯಿಲೆಯನ್ನು ನಿವಾರಿಸಿದರು. ಆದ್ದರಿಂದ ಸರ್ವರೊಳಗೊಂದಾಗಿ ಎಲ್ಲರನ್ನು ಶ್ರೀಸಾಮಾನ್ಯರನ್ನಾಗಿ ಕಾಣುವುದನ್ನು ನಾರಾಯಣತ್ವ ಎಂದು ಕರೆಯಬಹುದಲ್ಲವೇ. ಎಲ್ಲರನ್ನು ಸಾಮಾನ್ಯರಂತೆ ಕಾಣುವ ಆಶಯವನ್ನು ಸಾರುವ ಸಂವಿಧಾನವು ಅಂತಹ ಸಮಾನತ ನಾರಾಯಣತ್ವಕ್ಕೆ ದಾರಿಯಾಗಿದೆ ಎಂದು ಭಾವಿಸಬಹುದಲ್ಲವೇ ಎಂಬಂತ ಭಾವೋದ್ದೀಪನಗೊಳಿಸಿದ ರಂಗರೂಪವು ಮನೋಜ್ಞವಾಗಿ ಮೂಡಿಬಂದಿದೆ.
References
ಸುಜನಾ. (2011). ಪರಂಪರೆ ಮತ್ತು ಕುವೆಂಪು. ವಿಶ್ವ ಕನ್ನಡ ಸಮ್ಮೇಳನ ಸಾಹಿತ್ಯ ಮಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.
ಅರವಿಂದ ಮಾಲಗತ್ತಿ (ಪ್ರ.ಸಂ.). (2006). ಕುವೆಂಪು ಕೃತಿ ವಿಮರ್ಶೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು.
ಪ್ರಭುಶಂಕರ್. (1997). ಶ್ರೀಸಾಮಾನ್ಯರ ಶ್ರೀರಾಮಾಯಣದರ್ಶನಂ. ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.
ಭೈರಪ್ಪ ಕೆ. (ಪ್ರ.ಸಂ.) & ಅರವಿಂದ ಮಾಲಗತ್ತಿ. (2004). ಕುವೆಂಪು: ಪುನರ್ಮನನ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ನಾಗಭೂಷಣ ಡಿ. ಎಸ್. (ಸಂ). ಕುವೆಂಪು: ಒಂದು ಘನರನ್ವೇಷಣೆ. ಗೀತಾಂಜಲಿ ಪುಸ್ತಕ. ಶಿವಮೊಗ್ಗ.
ಅಂಬೇಡ್ಕರ್ ಬಿ. ಆರ್. (1995). ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು: ಸಂಪುಟ 14, ಭಾಗ-1 (ಅ) ವಿಭಾಗ (1-3). ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.
ಅಂಬೇಡ್ಕರ್ ಬಿ. ಆರ್. (1995). ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು: ಸಂಪುಟ 14, ಭಾಗ-2 (ಅ) ವಿಭಾಗ (1-3). ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.
ಕುವೆಂಪು. (2022). ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ. ಉದಯರವಿ ಪ್ರಕಾಶನ. ಮೈಸೂರು.
ಕುಪ್ನಳ್ಳಿ ಎಂ. ಭೈರಪ್ಪ (ರಂಗರೂಪ). (2015). ಯಾರೂ ಅರಿಯದ ವೀರರು (ಕುವೆಂಪು ಕಥೆಗಳನ್ನು ಆಧರಿಸಿದ ರಂಗಪ್ರಯೋಗ). ರಚನ ಪ್ರಕಾಶನ. ಮೈಸೂರು.
https://www.prajavani.net/entertainment/theatre/theatre-review-kuvempus-dhanvantaris-treatment-is-the-implementation-of-the-constitution-2760478 (ಧನ್ವಂತರಿ ಚಿಕಿತ್ಸೆ ರಂಗರೂಪವನ್ನು ಕುರಿತು ಪ್ರೊ.ಚಂದ್ರಶೇಖರ ವಿ. ನಂಗಲಿ ಅವರ ವಿಮರ್ಶೆ)
https://youtu.be/4048PTuQCbQ?si=3oUjia2x2a6JnccE (ಧನ್ವಂತರಿ ಚಿಕಿತ್ಸೆ-ಕುವೆಂಪು; ರಂಗರೂಪ ಹಾಗೂ ನಿರ್ದೇಶನ: ಡಾ. ಕುಪ್ಪನಹಳ್ಳಿ ಎಂ. ಭೈರಪ್ಪ)