ಕೊಡಗು ಜಿಲ್ಲೆಯಲ್ಲಿ ಎರವ ಬುಡಕಟ್ಟು ಜನರ ಸ್ಥಿತಿಗತಿ
Keywords:
ಕುಮ್ರಿ ಬೇಸಾಯ, ಪುನರ್ವಸತಿ, ಹಾಡಿ, ಆಶ್ರಮಶಾಲೆ, ಅರಣ್ಯ ಹಕ್ಕು ಕಾಯ್ದೆ, ಲ್ಯಾಂಪ್ಸ್ ಸೊಸೈಟಿ, ಕಿರು ಉತ್ಪನ್ನಗಳುAbstract
ಎರವ ಬುಡಕಟ್ಟು ಜನರು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಅವರ ಸಂಖ್ಯೆ ಹೆಚ್ಚಾಗಿ ಇದ್ದು ಪೊನ್ನಂಪೇಟೆ ಬಳಿ ತಿತಿಮತಿ ಗ್ರಾಮಕ್ಕೆ ಹೊಂದಿಕೊಂಡಂತೆ ಎರವರ ಸಾಕಷ್ಟು ಹಾಡಿಗಳು ಇರುತ್ತವೆ. ಈ ಎಲ್ಲಾ ಹಾಡಿಗಳು ತಮ್ಮದೇ ಆದ ಮೂಲ ಸ್ವರೂಪವನ್ನು ಉಳಿಸಿಕೊಂಡು ಸಾಗುತ್ತಿರುವುದು ಕಂಡುಬರುತ್ತದೆ. ಆದರೆ ಇಂದಿಗೆ ಈ ಹಾಡಿಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಆತಂಕದಲ್ಲಿವೆ. ಯಾವುದೇ ಬುಡಕಟ್ಟು ಜನರು ಅರಣ್ಯದಲ್ಲಿ ಇದ್ದಷ್ಟು ದಿನ ಅವರುಗಳು ಕಾಡನ್ನು ದೇವರಂತೆ ಪೂಜಿಸುತ್ತಾ ಈ ಮುಲಕ ಕಾಡುಗಳನ್ನು ರಕ್ಷಿಸುವುದರೊಂದಿಗೆ ಕಾಡನ್ನು ಬೆಳೆಸುತ್ತಾರೆ. ಅರಣ್ಯದಲ್ಲಿ ಬುಡಕಟ್ಟು ಜನರು ವಾಸವಿದ್ದಾರೆ ಎಂಬ ಭಯದಿಂದಲೇ ಕಾಡುಗಳ್ಳರ ಹಾವಳಿ ತಪ್ಪುತ್ತದೆ ಮತ್ತು ಅರಣ್ಯದೊಳಗಿರುವ ಔಷಧಿಯ ಗುಣದ ಸಾಕಷ್ಟು ಗಿಡಗಳು ಸಂರಕ್ಷಿಸಲ್ಪಡುತ್ತವೆ. ಇದು ರಾಷ್ಟ್ರದ ಸಂಪತ್ತಾಗಿ ಗೋಚರಿಸುತ್ತದೆ. ಆದರೆ ಇಂದು ಬುಡಕಟ್ಟು ಜನರಲ್ಲಿ ಅದರಲ್ಲಿಯೂ ಎರವರಲ್ಲಿ ಆಧುನಿಕತೆ, ನವನಗರಿಕತೆ ಹೆಸರಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಸರ್ಕಾರಗಳ ಕೆಲವು ನೀತಿ-ನಿಯಮಗಳಿಂದಾಗಿ ತಮ್ಮೆಲ್ಲ ಮೂಲ ಸ್ವರೂಪವನ್ನು ಕಳಚಿಕೊಳ್ಳುವ ಹಂತಕ್ಕೆ ಇವರು ತಲುಪಿದ್ದಾರೆ. ಇದಕ್ಕೆ ಹಲವಾರು ಕಾರಣಗಳು ಕಂಡುಬರುತ್ತವೆ. ಸರ್ಕಾರವು ಈ ಬಡಜನರ ಒಕ್ಕಲೆಬ್ಬಿಸುವ ಕೆಲವು ನೀತಿಗಳು, ಹಲವಾರು ಸರ್ಕಾರದ ಯೊಜನೆಗಳು ಇಂತಹ ಎರವ ಬುಡಕಟ್ಟು ಜನರನ್ನು ತಲುಪದೇ ಇರುವಂತಹ ಸ್ಥಿತಿ, ಬರುತ್ತಿರುವ ಸೌಲಭ್ಯಗಳನ್ನು ಕೆಲವು ಪಟ್ಟಭದ್ರಹಿತಾಸಕ್ತಿಗಳು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಹಾಗೂ ಈ ಎಲ್ಲಾ ಸವಲತ್ತುಗಳು ಇದ್ದರು ಬಳಸಿಕೊಳ್ಳಲು ಸಾಧ್ಯವಾಗದಿರುವುದು. ಈ ಎಲ್ಲಾ ವಿಷಯಗಳನ್ನು ಗುರುತಿಸುವುದು ಈ ಲೇಖನದ ಉದ್ದೇಶವಾಗಿದೆ.